ಗೋಣಿಕೊಪ್ಪಲು, ಅ.೧೨: ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜನೆ ಮಾಡಲಾಗಿದ್ದ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಬಹುತೇಕ ಮಕ್ಕಳು ತಾವು ತಂದಿದ್ದ ತರಕಾರಿ, ಸೊಪ್ಪು ಇತ್ಯಾದಿಗಳನ್ನು ಇಡುವ ಮೂಲಕ ಸಂತೆ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಶಿಕ್ಷಕರ, ನಾಗರಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.
ಶ್ರೀ ಕಾವೇರಿ ದಸರಾ ಸಮಿತಿಯ ೪೮ನೇ ವರ್ಷದ ಜನೋತ್ಸವ ಕಾರ್ಯಕ್ರಮದ ಅಂಗವಾಗಿ ೨ನೇ ದಿನ ಬೆಳಿಗ್ಗೆ ೯ ಗಂಟೆಗೆ ಮಕ್ಕಳ ದಸರಾ ಕಾರ್ಯಕ್ರಮಗಳು ಯಶಸ್ವಿಯಾಗಿ ಆರಂಭವಾದವು. ತಾಲೂಕಿನ ವಿವಿಧ ಭಾಗದಿಂದ ಆಗಮಿಸಿದ್ದ ಶಾಲಾ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಬೆಳೆಯಲಾಗಿದ್ದ ತರಕಾರಿ, ಕಾಯಿಪಲ್ಯಗಳು, ಸೊಪ್ಪು ಹಣ್ಣು ಹಾಗೂ ಇತರ ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದರು. ವಿವಿಧ ತಿಂಡಿಗಳ ಮಾರಾಟ ವಿಜ್ಞಾನದ ಅವಿಷ್ಕಾರಗಳು, ರಂಗೋಲಿ ಸ್ಪರ್ಧೆ, ಜಾನಪದ ನೃತ್ಯ, ದೇಶ ಭಕ್ತಿ ಗೀತೆ, ಛದ್ಮವೇಷಗಳು ಮಕ್ಕಳಿಂದ ಮೂಡಿ ಬಂದು ನೋಡುಗರ ಗಮನ ಸೆಳೆಯಿತು.
ಮಕ್ಕಳ ದಸರಾ ಕಾರ್ಯಕ್ರಮವನ್ನು ವಿಜ್ಞಾನ ವಸ್ತು ಪ್ರದರ್ಶನಕ್ಕೆ ಕೊಡಗು ಜಿಲ್ಲೆಯಿಂದ ಆಯ್ಕೆಗೊಂಡ ಲಯನ್ಸ್ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಕು. ಸಿಂಚನ, ಕಾವೇರಿ ದಸರಾ ಸಮಿತಿಯ ಕಾರ್ಯಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷ ನಾಯಿಂದಿರ ಶಿವಾಜಿ ಮಕ್ಕಳ ದಸರಾ ಸಮಿತಿ ಸಂಚಾಲಕರಾದ ತಿರುನೆಲ್ಲಿಮಾಡ ಜೀವನ್, ಮತ್ತಿತರ ಗಣ್ಯರು ಉದ್ಘಾಟನೆ ಮಾಡಿದರು.
ನಿಧಾನಗತಿಯ ಸೈಕಲ್ ಚಾಲನೆ ಸೇರಿದಂತೆ ಇತರೆ ಕ್ರೀಡೆಗಳಿಗೆ ಸಮಿತಿಯ ಸಂಯೋಜಕರಾದ ಮನೆಯಪಂಡ ಶೀಲಾ ಬೋಪಣ್ಣ, ಕಾರ್ಯದರ್ಶಿ ವರಲಕ್ಷಿö್ಮ, ಚಂದನ ಮಂಜುನಾಥ್, ಶಿಕ್ಷಕಿ ವಾಮನ, ಮಹಿಳಾ ದಸರಾ ಸಮಿತಿಯ ಅಧ್ಯಕ್ಷೆ ಎಂ.ಮAಜುಳ, ದೈಹಿಕ ಶಿಕ್ಷಕ ಸಿ.ಎಂ.ರಾಘವೇAದ್ರ, ಶಿಕ್ಷಕಿ ಆಲಿಮ, ಚೆಪ್ಪುಡೀರÀ ಧ್ಯಾನ್ ಸುಬ್ಬಯ್ಯ, ಮುಂತಾದ ಗಣ್ಯರು ಚಾಲನೆ ನೀಡಿದರು.
ವಿಜೇತರಿಗೆ ಬಹುಮಾನ ಹಾಗೂ ಪ್ರಶಂಸನಾ ಪತ್ರ ವಿತರಿಸಲಾಯಿತು. ಮಕ್ಕಳ ದಸರಾ ಸಮಿತಿಯ ಸಂಚಾಲಕರಾಗಿ ಶಿಕ್ಷಕರಾದ ತಿರುನೆಲ್ಲಿಮಾಡ ಜೀವನ್ ಹಾಗೂ ಶಿಕ್ಷಕಿ ವಾಮನ ಜವಾಬ್ದಾರಿಯನ್ನು ನಿಭಾಯಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮುಖ್ಯಶಿಕ್ಷಕರು, ಸಹಶಿಕ್ಷಕರು ಸೇರಿದಂತೆ ಕಾವೇರಿ ದಸರಾ ಸಮಿತಿಯ ಪದಾಧಿಕಾರಿಗಳು, ನಾಗರಿಕರು ಭಾಗವಹಿಸಿದ್ದರು.
ಮಕ್ಕಳ ಸಂತೆ: ೧ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಕ್ರೀಡಾ ಸ್ಪರ್ಧೆಗಳು: ನಿಧಾನ ಸೈಕಲ್ ಚಾಲನೆ: ೫ ರಿಂದ ೭, ಹಾಗೂ ೮ ರಿಂದ ೧೦ನೇ ತರಗತಿ ವಿಭಾಗ. ಬಕೆಟ್ಗೆ ಚೆಂಡು ಹಾಕುವುದು: ೧ ರಿಂದ ೪ನೇ ತರಗತಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ. ಕಪ್ಪೆ ಹಾರುವುದು: ಎಲ್ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ. ಗೋಣಿಚೀಲ ಓಟ: ೧ ರಿಂದ ೫, ೬ ರಿಂದ ೭, ೮ ರಿಂದ ೧೦ನೇ ತರಗತಿ ವಿಭಾಗ ಗಂಡು ಮತ್ತು ಹೆಣ್ಣು ಮಕ್ಕಳಿಗೆ. ಸಾಂಸ್ಕೃತಿಕ ಸ್ಪರ್ಧೆಗಳು: ಸಾಮೂಹಿಕ ನೃತ್ಯ: - ೧ ರಿಂದ ೪, ಯಾವುದಾದರು ಚಲನಚಿತ್ರ ಗೀತೆಗೆ ನೃತ್ಯ., ಜಾನಪದ ನೃತ್ಯ. ಚಲನಚಿತ್ರ ಗೀತೆಯ ನೃತ್ಯ, ಛದ್ಮವೇಷ ಸ್ಪರ್ಧೆಗಳು ನಡೆದವು
-ಹೆಚ್.ಕೆ.ಜಗದೀಶ್