ಗೋಣಿಕೊಪ್ಪಲು, ಅ. ೧೧: ಗೋಣಿಕೊಪ್ಪ ಲುವಿನ ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಆಯೋಜಿಸಿರುವ ೪೮ನೇ ವರ್ಷದ ದಸರಾ ಜನೋತ್ಸವಕ್ಕೆ ಶ್ರೀ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠಾಪನೆಯೊಂದಿಗೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ನಗರದ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಪ್ರಧಾನ ಅರ್ಚಕ ಶಂಕರ ನಾರಾಯಣ ವೈಲಾಯ ಅವರ ತಂಡ ಪೂಜಾ ಕಾರ್ಯಗಳನ್ನು ನೆರವೇರಿಸಿತು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರು ಚಾಮುಂಡೇಶ್ವರಿ ದೇವಿಗೆ ಮಾಲಾರ್ಪಣೆ ಮಾಡುವ ಮೂಲಕ ದಸರಾ ಜನೋತ್ಸವಕ್ಕೆ ಚಾಲನೆ ನೀಡಿದರು. ಹಿರಿಯ ಉದ್ಯಮಿ ಎಂ.ಜಿ. ಮೋಹನ್, ವಿಗ್ರಹ ದಾನಿಗಳಾದ ಎಂ.ಪಿ. ಕೇಶವ್ ಕಾಮತ್, ಸುಮಿ ಸುಬ್ಬಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿಯ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ದಸರಾ ಯಶಸ್ವಿಗೊಳಿಸೋಣ : ಪೊನ್ನಣ್ಣ
ದಸರಾ ಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ, ಈ ಬಾರಿ ಚಾಮುಂಡೇಶ್ವರಿ ದೇವಿಯು ಸರ್ವರಿಗೂ ಒಳಿತನ್ನು ಮಾಡಲಿ. ೧೧ ದಿನಗಳ ಕಾಲ ಯಾವುದೇ ವಿಘ್ನಗಳಿಲ್ಲದೆ ಹಬ್ಬದ ಆಚರಣೆ ನಡೆಯಲಿ ಎಂದು ಹಾರೈಸಿದರು.
ಸಮಿತಿಯ ಎಲ್ಲಾ ಸದಸ್ಯರು ಹಾಗೂ ನಾಗರಿಕರು ಒಗ್ಗಟ್ಟಿನಿಂದ ಕೈಜೋಡಿಸಿ ದಸರಾ ಜನೋತ್ಸವವನ್ನು ಯಶಸ್ವಿಗೊಳಿಸಬೇಕು. ಹೊಸ ಕಲಾವಿದರಿಗೆ ಅವಕಾಶ ದೊರೆಯುವಂತಾಗಬೇಕು ಹಾಗೂ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬರಬೇಕು. ಸರ್ಕಾರದಿಂದ ಮಂಜೂರಾಗಿರುವ ಒಂದು ಕೋಟಿ ರೂ. ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನವರಾತ್ರಿಯ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸಂದರ್ಭ ಸರ್ಕಾರದ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ನಾಗರಿಕರ ಸಹಕಾರ ಅಗತ್ಯ : ಪ್ರಮೋದ್ ಗಣಪತಿ
ಶ್ರೀ ಕಾವೇರಿ ದಸರಾ ಸಮಿತಿಯ ೪೮ನೇ ವರ್ಷದ ಜನೋತ್ಸವದ ಕಾರ್ಯಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಶಾಸ್ತೊçÃಕ್ತವಾಗಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ, ದೇವಿಯ ಆಶೀರ್ವಾದದೊಂದಿಗೆ ಜನೋತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದರು.
ಶಾಸಕ ಪೊನ್ನಣ್ಣ ಅವರ ಪ್ರಯತ್ನದಿಂದ ಸರ್ಕಾರದಿಂದ ಅನುದಾನ ದೊರೆತಿದ್ದು, ಈ ಬಾರಿ ಉತ್ತಮ ರೀತಿಯಲ್ಲಿ ದಸರಾ ಆಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನೋತ್ಸವ ಯಶಸ್ವಿಯಾಗಲು ನಾಗರಿಕರ ಸಹಕಾರ ಅಗತ್ಯ ಎಂದು ಹೇಳಿದರು.
ಹುಲಿವೇಷದ ಮೆರುಗು
ದಸರಾದಲ್ಲಿ ಇದೇ ಮೊದಲ ಬಾರಿಗೆ ಹುಲಿವೇಷಧಾರಿಗಳು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಲೆ ಪ್ರದರ್ಶನ ನೀಡಿದರು. ಶಾಸಕ ಎ.ಎಸ್. ಪೊನ್ನಣ್ಣ, ದಸರಾ ಸಮಿತಿಯ ಕಾರ್ಯಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಹಾಗೂ ತಹಶೀಲ್ದಾರ್ ಸಂಜನ ಹುಲಿವೇಷ ಪ್ರದರ್ಶನಕ್ಕೆ ಚಾಲನೆ ನೀಡಿದರು. ಹುಲಿವೇಷದ ನೃತ್ಯ ಪ್ರದರ್ಶನವು ದಸರಾ ಜನೋತ್ಸವದ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿತು.
ಇದೇ ಸಂದರ್ಭ ದಸರಾ ಜನೋತ್ಸವದ ಅಂಗವಾಗಿ ಅಭಿವೃದ್ಧಿಪಡಿಸಿರುವ ಗೋಣಿಕೊಪ್ಪಲು ದಸರಾ ಆ್ಯಪ್ ಬಿಡುಗಡೆ ಮಾಡಲಾಯಿತು. ಶಾಸಕ ಎ.ಎಸ್. ಪೊನ್ನಣ್ಣ ಅವರು ಆ್ಯಪ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಕಾವೇರಿ ದಸರಾ ಸಮಿತಿ ಸಂಚಾಲಕ ಬಿ.ಎನ್. ಪ್ರಕಾಶ್, ಹಿರಿಯ ಉದ್ಯಮಿ ಎಂ.ಜಿ. ಮೋಹನ್, ಕುಲ್ಲಚಂಡ ಬೋಪಣ್ಣ, ಸಮಿತಿಯ ಉಪಾಧ್ಯಕ್ಷ ನಾಯಂದಿರ ಶಿವಾಜಿ, ಪದಾಧಿಕಾರಿಗಳಾದ ಕೊಕ್ಕಂಡ ರೋಷನ್, ವರಲಕ್ಷಿö್ಮÃ, ಎಂ. ಮಂಜುಳ, ಪ್ರವೀಣ್ ಪೂಜಾರಿ, ರಾಜಶೇಖರ, ಸಪ್ತೇಶ್, ಗಣೇಶ್ ರೈ, ಸುಶೀಲಾ, ತೆರೇಸಾ ವಿಕ್ಟರ್, ನೂರೇರ ಧನ್ಯ ರವೀಂದ್ರ, ಚಂದನ ಮಂಜುನಾಥ್, ಕರ್ಣರಾಜ್ ತಂಬಿ, ಕಾರ್ಯದರ್ಶಿ ಪದಾಧಿಕಾರಿಗಳಾದ ಎನ್.ಎಸ್. ಕಂದಾ ದೇವಯ್ಯ, ದಿಲನ್ ಚಂಗಪ್ಪ, ದ್ಯಾನ್ ಸುಬ್ಬಯ್ಯ, ಧನಲಕ್ಷ್ಮಿ, ಸೈಕ್ಲೋನ್ ರಮೇಶ್, ವಿಗ್ರಹ ದಾನಿಗಳಾದ ಕೇಶವ್ ಕಾಮತ್, ಪ್ರಮೋದ್ ಕಾಮತ್, ಚಂದನ್ ಕಾಮತ್, ಶಿವಾಜಿ ಸೇನೆಯ ಅಧ್ಯಕ್ಷ ಅಣ್ಣಪ್ಪ, ನಾಡಹಬ್ಬ ದಸರಾ ಸಮಿತಿಯ ಪ್ರಭಾಕರ್ ನೆಲ್ಲಿತ್ತಾಯ, ದಶಮಂಟಪ ಸಮಿತಿ ಅಧ್ಯಕ್ಷ ಕಾಡ್ಯಮಾಡ ಚೇತನ್, ಯುವ ದಸರಾ ಸಮಿತಿಯ ಅಧ್ಯಕ್ಷ ಕೆ. ರಾಜೇಶ್ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
- ಹೆಚ್.ಕೆ. ಜಗದೀಶ್