ಮಡಿಕೇರಿ, ಅ. ೧೧: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆ ನೋಟಿಸ್ ವಿಚಾರಣೆ ತಾ. ೧೨ ರಂದು (ಇಂದು) ಪೂರ್ಣಗೊಳ್ಳಲಿದೆ.

ಕರಡು ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ಲಾಜಿಕಲ್ ಡಿಸ್ಕೆçಪೆನ್ಸಿ ಮತ್ತು ಅನ್ ಮ್ಯಾಪಿಂಗ್ ಅಡಿಯಲ್ಲಿ ಜಿಲ್ಲೆಯ ಎರಡು ಕ್ಷೇತ್ರ ಸೇರಿಸಿ ೫೮,೮೮೩ ಮತದಾರರಿಗೆ ನೋಟಿಸ್ ನೀಡಲಾಗಿತ್ತು. ಆಗಸ್ಟ್ ೨೮ ರಿಂದ ನೋಟಿಸ್ ವಿಚಾರಣೆ ದಿನಾಂಕ ನಿಗದಿಪಡಿಸಲಾಗಿತ್ತು.

ಇದೀಗ ಮತದಾರರ ನೋಟಿಸ್ ವಿಚಾರಣೆ ಪ್ರಕ್ರಿಯೆಯು ತಾ. ೧೨ ರಂದು ಪೂರ್ಣಗೊಳ್ಳಲಿದೆ.

ಒಟ್ಟು ೫೮,೮೮೩ ನೋಟೀಸ್‌ಗಳನ್ನು ಶೇ. ೧೦೦ ರಷ್ಟು ಯಶಸ್ವಿಯಾಗಿ ವಿತರಿಸಲಾಗಿದೆ. ಈ ಪೈಕಿ ೫೭,೮೮೧ ನೋಟಿಸ್‌ಗಳ ವಿಚಾರಣೆ ಪೂರ್ಣಗೊಂಡಿದ್ದು, ಶೇ. ೯೮.೩೦ ಪ್ರಗತಿ ದಾಖಲಾಗಿದೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕೇವಲ ೧,೦೦೨ ನೋಟಿಸ್ ಬಾಕಿ ಇದೆ ಕಳೆದ ಜೂನ್ ೧೬ ರಿಂದ ಅಕ್ಟೋಬರ್ ೦೮ ರವರೆಗೆ ಜಿಲ್ಲೆಯಲ್ಲಿ ೨೮,೦೫೨ ಅರ್ಜಿಗಳು ಬಂದಿವೆ. ಹೊಸ ಮತದಾರರ ಸೇರ್ಪಡೆ (ಈoಡಿm-೬) ೬,೫೯೯, ಈoಡಿm-೬ಂ ೨೨, ಹೆಸರು ತೆಗೆಯುವಿಕೆ (ಈoಡಿm-೭) ೧,೫೪೯, ತಿದ್ದುಪಡಿ ಮತ್ತು ವರ್ಗಾವಣೆ (ಈoಡಿm-೮) ೧೯,೮೮೨ ಅರ್ಜಿಗಳು ಸಲ್ಲಿಕೆಯಾಗಿವೆೆ. ಆಗಸ್ಟ್ ೨೪ ರಿಂದ ಸೆಪ್ಟೆಂಬರ್ ೨೪ರವರಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಆಕ್ಷೇಪಣೆ ಸಲ್ಲಿಸಿರುವ ಅರ್ಜಿಗಳ ಪರಿಶೀಲನೆಯು ಸೆಪ್ಟೆಂಬರ್ ೨೪ ರಿಂದ ಆರಂಭಗೊAಡಿದ್ದು ಅಕ್ಟೋಬರ್ ೨೨ರವರೆಗೆ ನಡೆಯಲಿದೆ.ಅಕ್ಟೋಬರ್ ೨೭ಕ್ಕೆ ಅಂತಿಮ ಮತದಾರರ ವಿಚಾರಣೆ ಪೂರ್ಣಗೊಳ್ಳಲಿದೆ. ಜಿಲ್ಲೆಯಲ್ಲಿ ಅ.೯ ರವರೆಗೆ ಒಟ್ಟು ೪,೧೧,೪೪೬ ಮತದಾರರಿದ್ದಾರೆ. ಪುರುಷರು ೨,೦೦,೮೪೩, ಮಹಿಳೆಯರು ೨,೧೦,೫೯೯ ಮತ್ತು ಇತರೆ ೪ ಮಂದಿ ಇದ್ದಾರೆ.

- ಕೆ.ಎಂ ಇಸ್ಮಾಯಿಲ್ ಕಂಡಕರೆ