ಸೋಮವಾರಪೇಟೆ, ಅ. ೯ : ಶ್ರೀ ನಾರಾಯಣಗುರು ಸೇವಾ ಸಮಿತಿಯ ನೂತನ ಸಾಲಿನ ಅಧ್ಯಕ್ಷರಾಗಿ ಇಂದಿರಾ ಮೋಣಪ್ಪ ಆಯ್ಕೆಯಾದರು.
ಪಟ್ಟಣದ ಅಲೋಕ ಸಭಾಂಗಣದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಇಂದಿರಾ ಮೋಣಪ್ಪ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ಅವಿರೋಧವಾಗಿ ಪದಾಧಿಕಾರಿಗಳು ನೇಮಕಗೊಂಡರು. ಸಮಿತಿಯ ಉಪಾಧ್ಯಕ್ಷರಾಗಿ ಶನಿವಾರಸಂತೆಯ ರಾಜಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಹೇಮಂತ್ ಪೂಜಾರಿ, ಸಹ ಕಾರ್ಯದರ್ಶಿಯಾಗಿ ಗಣೇಶ್, ಖಜಾಂಚಿಯಾಗಿ ಸುಮಾ ರವಿ, ಸಂಘಟನ ಕಾರ್ಯದರ್ಶಿ ಯಾಗಿ ಕೆ.ಎನ್. ನಾಗರಾಜ್ ಆಯ್ಕೆ ಯಾದರು. ಸಲಹೆಗಾರರು ಭಾಸ್ಕರ್ ಬಿ.ಎ., ರಾಘವ, ರಮೇಶ್, ನಿರ್ದೇಶಕರುಗಳಾಗಿ ನಿತಿನ್, ರೋಹಿತ್ ಬಿ. ಎಂ., ಉಷಾ ಶೇಷಪ್ಪ, ಪ್ರಕಾಶ್.ಬಿ ಜಿ., ಯಶೋಧ ಚಂದ್ರಶೇಖರ್, ನಾಗರಾಜ್ ಕೆ ಎನ್ , ಧರ್ಮಪ್ಪ ಕೆ ಬಿ, ದಿನೇಶ್.ಬಿ ಸಿ., ರಂಜಿತ್ ಬಿ . ವಿ., ವಿನೋದ್ ಜಯರಾಮ್, ತ್ರಿಲೇಶ್ ಸುಧಿ, ಶಶಿ ಕುಮಾರ್ ಬಿ.ಆರ್., ಪ್ರಶಾಂತ್.ಬಿ ಎಂ., ಹರೀಶ್ ಕೋಟ್ಯಾನ್, ದಿವ್ಯಾ ಹರೀಶ್, ದಿನೇಶ್ ಮಾಲಂಬಿ ಅವರುಗಳನ್ನು ಆಯ್ಕೆ ಮಾಡಲಾಯಿತು.