ಐಗೂರು, ಅ. ೯: ಐಗೂರಿನ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ವಿಶೇಷ ಗ್ರಾಮಸಭೆ ನಡೆಯಿತು. ಸಭೆಯಲ್ಲಿ ಗ್ರಾಮಸ್ಥರು ಕುಡಿಯುವ ನೀರು, ಆರೋಗ್ಯ ಸೇವೆ, ರಸ್ತೆ ಕಾಮಗಾರಿ ಮತ್ತು ಸ್ವಚ್ಛತೆಗಾಗಿ ಒತ್ತಾಯಿಸಿದರು.

ವಿಶೇಷ ಗ್ರಾಮ ಸಭೆಯಲ್ಲಿ ಪಿಡಿಓ ರೋಹಿಣಿ ಅಧ್ಯಕ್ಷತೆ ವಹಿಸಿದ್ದರು. ಕಳೆದ ಸಾಲಿನ ಅಧಿಕಾರಾವಧಿ ಮುಗಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳು ಜನರ ಸಮಸ್ಯೆಗಳನ್ನು ಆಲಿಸಲು ಗ್ರಾಮ ಸಭೆಗೆ ಆಗಮಿಸದಿರುವುದು ಕಂಡುಬAತು. ಸಭೆಯಲ್ಲಿ ಕೆ.ಪಿ. ದಿನೇಶ್ ಮಾತನಾಡಿ, ಹೊಸತೋಟದ ಮಿನಿಸ್ಟರ್ ಕೂಪ್ ಹಾಗೂ ಜಾತಳ್ಳಿ ಭಾಗದಲ್ಲಿ ಕಳೆದ ಆರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದೆ. ಕಳಪೆ ಗುಣಮಟ್ಟದ ಪೈಪುಗಳನ್ನು ಅಳವಡಿಸಿರುವುದರಿಂದ ಪದೇಪದೇ ಪೈಪುಗಳು ದುರಸ್ತಿಗೊಳ್ಳುತ್ತಿದ್ದು ನೀರು ಗಂಟಿಗಳು ಪೈಪುಗಳಿಗೆ ಗಮ್ ಮತ್ತು ಪ್ಯಾಚ್ ಹಾಕುವುದರಲ್ಲಿ ಕಾಲ ಕಳೆಯುವಂತಾಗಿದೆ. ಗುಣಮಟ್ಟದ ಪೈಪುಗಳನ್ನು ಅಳವಡಿಸಬೇಕು. ಕಳೆದ ಗ್ರಾಮ ಸಭೆಯಲ್ಲಿ ನೀರಿನ ಸಮಸ್ಯೆಯ ಬಗ್ಗೆ ಮಹಿಳೆಯರು ಮನವಿ ಸಲ್ಲಿಸಿದ್ದರು. ಕಿಬ್ರಿ ಪೈಸಾರಿಯಲ್ಲಿ ಪರಿಶಿಷ್ಟ ಪಂಗಡದ ಕುಟುಂಬಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುದರ ಜೊತೆಗೆ, ಈ ಭಾಗಕ್ಕೆ ರಸ್ತೆ ಕಾಮಗಾರಿಯನ್ನು ಕೈಗೊಳ್ಳಬೇಕಾಗಿದೆ ಎಂದರು.

ಐಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದ್ದು, ಕಳೆದೆರಡು ವರ್ಷಗಳಿಂದ ವೈದ್ಯಕೀಯ ಸೇವೆ ದೊರಕುತ್ತಿಲ್ಲ. ಹಿಂದೆ ವಾರಕ್ಕೊಮ್ಮೆಯಾದರೂ ವೈದ್ಯರು ಭೇಟಿ ನೀಡುತ್ತಿದ್ದು ಖಾಯಂ ವೈದ್ಯರ ನೇಮಕ ಆಗಬೇಕು. ರೋಗಿಗಳಿಗೆ ಅಗತ್ಯ ಮಾತ್ರೆ ಔಷಧಿಗಳು ದೊರೆಯುತ್ತಿಲ್ಲ. ಆದ್ದರಿಂದ ಔಷಧಿಗಳ ದಾಸ್ತಾನು ಸದಾ ಕಾಲ ಲಭ್ಯವಿರುವಂತೆ ಗ್ರಾಮಸ್ಥರಾದ ರಾಜೇಶ್ ಒತ್ತಾಯಿಸಿದರು. ಐಗೂರಿನ ಹಳೆಯ ಕಬ್ಬಿಣ ಸೇತುವೆಯ ತಳಭಾಗದಲ್ಲಿ ಕೋಳಿ ತ್ಯಾಜ್ಯ, ತಲೆ ಕೂದಲು ಮತ್ತು ಕಸಗಳನ್ನು ಸುರಿಯುತ್ತಿದ್ದ ವ್ಯಕ್ತಿಗಳಿಗೆ ಈಗಾಗಲೇ ನಿರ್ಮಾಣ ಗೊಂಡಿರುವ ನೂತನ ಸೇತುವೆ ತಳಭಾಗಕ್ಕೆ ತ್ಯಾಜ್ಯಗಳನ್ನು ಸುರಿಯದಂತೆ ಗ್ರಾಮ ಪಂಚಾಯಿತಿಯಿAದ ನೋಟಿಸು ನೀಡಬೇಕೆಂದು ಸಭೆಯಲ್ಲಿ ಪ್ರಕಾಶ್ ಮತ್ತು ಎಂ. ರಾಜೇಶ್ ಒತ್ತಾಯಿಸಿದರು.

ಐಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಬೇರೆಡೆಗೆ ಸ್ಥಳಾಂತರಿಸದೆ ಐಗೂರಿನಲ್ಲೆ ಉಳಿಸಬೇಕು. ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ (ಕಾಮರ್ಸ್) ಪಠ್ಯಕ್ರಮ ಅಳವಡಿಸುವ ಮೂಲಕ ವಿದ್ಯಾರ್ಥಿಗಳ ವಿಶ್ವಾಸವನ್ನು ಹೆಚ್ಚಿಸಬೇಕೆಂದು ಗ್ರಾಮಸ್ಥರು ಒಕ್ಕೊರಲಿನಿಂದ ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಪಿಡಿಓ ರೋಹಿಣಿಯವರು ಎಲ್ಲಾ ವಿಷಯಗಳನ್ನು ಆಲಿಸಿದ ನಂತರ ಇಂದಿನ ಸಭೆಯಲ್ಲಿ ನಡೆದ ಚರ್ಚೆಗಳ ವಿಷಯಗಳನ್ನು ಸಂಬAಧಪಟ್ಟ ಇಲಾಖೆಗಳಿಗೆ ಪತ್ರ ಮುಖೇನ ಮುಟ್ಟಿಸಲಾಗುವುದೆಂದು ಸಭೆಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ನಿತ್ಯ, ಬಿಲ್ ಕಲೆಕ್ಟರ್ ಇಂದ್ರೇಶ್, ಕೆ.ಪಿ. ದಿನೇಶ್, ರಾಜೇಶ್, ಪ್ರಕಾಶ್ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಇದ್ದರು.