ಕೂಡಿಗೆ, ಅ. ೩: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಕೃಷಿ ಜಮೀನಿಗೆ ಅಳವಡಿಸಿದ್ದ ಕೊಳವೆ ಬಾವಿಗಳ ಕೇಬಲ್ ಕಳ್ಳತನ ನಿರಂತರವಾಗಿ ನಡೆಯುತ್ತಿದ್ದು, ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವಾರದಿಂದ ಹತ್ತಾರು ರೈತರ ಕೊಳವೆ ಬಾವಿಗಳ ಕೇಬಲ್ಗಳನ್ನು ತುಂಡರಿಸಿ ಕಳ್ಳತನ ಮಾಡಲಾಗಿದೆ. ಶೀಘ್ರವೇ ಸಂಬAಧಪಟ್ಟ ಇಲಾಖೆ ಕ್ರಮ ಕೈಗೊಂಡು ರಾತ್ರಿ ವೇಳೆಯಲ್ಲಿ ಕೃಷಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಕಳ್ಳರನ್ನು ಬಂಧಿಸಬೇಕೆAದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಿ.ಸಿ.ಸ್ವಾಮಿ, ಚಿಕ್ಕತೂರಿನ ರೈತರಾದ ಕರಿಯಪ್ಪ, ಮಾದೇಶ್, ಪ್ರಸನ್ನ, ಕೆ.ಕೆ. ಕೃಷ್ಣೇಗೌಡ, ವಿ ಎ. ಮಂಜುನಾಥ್, ಸಿ. ಆರ್. ಪ್ರದೀಪ್, ಮರಿಗೌಡ ಸೇರಿದಂತೆ ಅನೇಕ ರೈತರು ಒತ್ತಾಯಿಸಿದ್ದು, ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.