ಕೂಡಿಗೆ, ಅ. ೩: ಹಾರಂಗಿ ಅಣೆಕಟ್ಟೆಯಿಂದ ಪ್ರಸಕ್ತ ಸಾಲಿನ ಖಾರಿಫ್ ಬೆಳೆಗೆ ಹಾಗೂ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಹಿನ್ನೆಲೆಯಲ್ಲಿ ಕಳೆದ ೧೦ ದಿನಗಳಿಂದ ಸ್ಥಗಿತಗೊಳಿಸಲಾಗಿದ್ದ ನೀರನ್ನು ಅಣೆಕಟ್ಟೆಯಿಂದ ಹರಿಸುವ ಕಾರ್ಯ ಆರಂಭಗೊAಡಿದೆ. ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನ ಮತ್ತು ರಾಜ್ಯ ಸರ್ಕಾರದ ಸೂಚನೆ ಹಿನ್ನೆಲೆ ಕಟ್ಟು ಪದ್ಧತಿಯಂತೆ ನಾಲೆಯ ಮೂಲಕ ನೀರನ್ನು ಹರಿಸಲಾಗುತ್ತಿದೆ.
ಅಣೆಕಟ್ಟೆಯ ಮುಖ್ಯ ನಾಲೆಯಿಂದ ಕಣಿವೆ ಸಮೀಪದ ಎಡದಂಡೆ ಮತ್ತು ಬಲದಂಡೆ ನಾಲೆಯ ಮೂಲಕ ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ ಎಂದು ಅಣೆಕಟ್ಟೆಯ ಉಸ್ತುವಾರಿ ಕಿರಣ್ ದೇವಯ್ಯ ತಿಳಿಸಿದ್ದಾರೆ.