ನಾಪೋಕ್ಲು, ಅ. ೨: ನಂ. ೩೫೨ನೇ ಕೊಡಗು ಹವ್ಯಕ ಬ್ರಾಹ್ಮಣರ ಉತ್ತಮ ಜೀವನ ಸಹಕಾರ ಸಂಘದ ೭೯ನೇ ವಾರ್ಷಿಕ ಮಹಾಸಭೆಯು ವೀರಾಜಪೇಟೆಯ ಚಿಕ್ಕಪೇಟೆಯಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದ ಪಕ್ಕದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಪಿ. ಎನ್. ಹರಿಶಂಕರ್ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಸಂಘದ ಸದಸ್ಯರಾದ ಡಾ ಸುಲೋಚನ, ನಾರಾಯಣಮೂರ್ತಿ, ರಾಜಾರಾಮ್ ಮತ್ತಿತರರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭ ಸಾಧಕ ಹವ್ಯಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಎರಡು ಎಕರೆ ಸ್ಥಳದಲ್ಲಿ ೨೪೦ ದೇಶಿಯ ಹಾಗೂ ವಿದೇಶಿ ತಳಿಗಳ ಹಣ್ಣುಗಳನ್ನು ಬೆಳೆದು ಸಾಧನೆ ಮಾಡಿದ ಕೃಷಿ ಸಾಧಕ ಚೆಯ್ಯಂಡಾಣೆಯ ಎಂ.ಎಸ್.ಸುಧೀರ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಎಂ.ಎಸ್. ಸುಧೀರ್ ಕುಮಾರ್, ಗೌರವ ಕಾರ್ಯದರ್ಶಿ ಕೆ.ಆರ್. ನಾರಾಯಣ ಮೂರ್ತಿ, ನಿರ್ದೇಶಕರಾದ ಪಿ.ಎಸ್. ನರೇಂದ್ರ, ಕೆ.ಎಸ್. ಮಂಜುನಾಥ್, ಕೆ.ಆರ್. ರಂಜಿತ್, ಪಿ.ಎನ್. ನಾಗರಾಜ್, ಎನ್.ಎಸ್. ಉದಯಶಂಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾವಿತ್ರಿ ಪ್ರಾರ್ಥಿಸಿದರು. ನಿರ್ದೇಶಕಿ ಗೀತಾ ಗಿರೀಶ್ ಕಳೆದ ಸಾಲಿನ ಮಹಾಸಭೆ ವರದಿಯನ್ನು ವಾಚಿಸಿದರು. ಎ.ವಿ. ಮಂಜುನಾಥ್ ಸ್ವಾಗತಿಸಿ ಕಾರ್ಯಕ್ರಮ, ನಿರೂಪಿಸಿ, ನಿರ್ದೇಶಕ ಸಿ.ಎಸ್ ಸುರೇಶ್ ವಂದಿಸಿದರು.