(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಅ. ೨: ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಆಗಸ್ಟ್ ೨೪ ರಿಂದ ಸೆಪ್ಟೆಂಬರ್ ೨೩ ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಕರಡು ಪಟ್ಟಿಯಲ್ಲಿರುವ ಮುಸ್ಲಿಮ್ ಮತಗಳನ್ನು ಡಿಲೀಟ್ ಮಾಡಲು ಫಾರ್ಮ್- ೭ ಬಳಸಿ ಅರ್ಜಿ ಸಲ್ಲಿಸಿರುವ ಘಟನೆಗಳು ಬೆಳಕಿಗೆ ಬಂದಿವೆ. ಇದೀಗ ಕೊಡಗು ಜಿಲ್ಲೆಯಲ್ಲಿ ಕೂಡ ಇದೇ ಫಾರ್ಮ್ ೭ ಬಳಸಿ ಅರ್ಹ ಮುಸ್ಲಿಮ್ ಮತದಾರರನ್ನು ‘ಸ್ಥಳಾಂತರ’ ಹಾಗೂ ‘ಈಗಾಗಲೇ ನೋಂದಣಿಯಾಗಿದೆ’ ಎಂಬ ಕಾಲಂ ಅಡಿಯಲ್ಲಿ ಕರಡು ಪಟ್ಪಿಯಲ್ಲಿನ ಅವರುಗಳ ಹೆಸರು ಸೇರ್ಪಡೆಗೆ ಆಕ್ಷೇಪಣೆ ಸಲ್ಲಿಸಿರುವ ಘಟನೆ ಬಯಲಿಗೆ ಬಂದಿದೆ.
ಮಡಿಕೇರಿ ಕ್ಷೇತ್ರದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಬೂತ್-೨೧ ರಲ್ಲಿ ೬೩ ಮುಸ್ಲಿಮ್ ಮತದಾರರ ಹೆಸರು ಕರಡು ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿ ಸ್ಥಳೀಯ ಕೆಲ ಮುಖಂಡರು ಅರ್ಜಿ ಸಲ್ಲಿಸಿರುವ ಫಾರ್ಮ್ ೭ ಪ್ರತಿಗಳು ಶಕ್ತಿಗೆ ಲಭ್ಯವಾಗಿವೆ.
ಅರ್ಜಿಗಳಲ್ಲಿ ಂbseಟಿಣ, Shiಜಿಣeಜ ಓoಟಿ ಡಿesiಜeಟಿಣ(ಗೈರು-ಸ್ಥಳಾಂತರ) ಹಾಗೂ ಂಟಡಿeಚಿಜಥಿ eಟಿಡಿoಟಟeಜ (ಈಗಾಗಲೇ ನೋಂದಣಿಯಾಗಿದೆ)ಎAದು ಉಲ್ಲೇಖಿಸಲಾಗಿದೆ.
ಬ್ಯಾಡಗೊಟ್ಟ ಬೂತ್ನಲ್ಲಿ ಕಳೆದ ಹಲವಾರು ವರ್ಷಗಳಿಂದ ಮತ ಚಲಾಯಿಸಿಕೊಂಡು ಬಂದಿರುವ ಹಾಗೂ ಎಸ್.ಐ.ಆರ್ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಅರ್ಹರನ್ನು ಗುರಿಮಾಡಿ ಅರ್ಜಿ ಸಲ್ಲಿಸಲಾಗಿದೆ.
ವಿಶೇಷವಾಗಿ ಬ್ಯಾಡಗೊಟ್ಟ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ೯ ಮಂದಿಯ ಹೆಸರುಗಳು ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಬ್ಯಾಡಗೊಟ್ಟ ಗ್ರಾಮದಲ್ಲಿ ವಾಸವಿದ್ದು, ಬೇರೆ ಕಡೆಗಳಲ್ಲಿ ಉದ್ಯೋಗದಲ್ಲಿರುವ ಮುಸ್ಲಿಮ್ ಮತದಾರರ ಹೆಸರು ಸೇರ್ಪಡೆಗೂ ಅರ್ಜಿ ಮೂಲಕ ಆಕ್ಷೇಪಣೆ ವ್ಯಕ್ತವಾಗಿದೆ. ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದ ಕೊನೆಯ ದಿನವಾದ ಸೆಪ್ಟೆಂಬರ್ ೨೩ ರಂದು ಎಲ್ಲಾ ಅರ್ಜಿಗಳು ಬಿ.ಎಲ್.ಒ ಅವರಿಗೆ ನೀಡಲಾಗಿದೆ.
ಅರ್ಜಿ ಪಡೆದು ಅಪ್ಲೋಡ್ ಮಾಡದ ಬಿಎಲ್ಒ
ಬ್ಯಾಡಗೊಟ್ಟ ಬೂತ್ನಲ್ಲಿ ೬೩ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಸೇರಿರುವುದನ್ನು ಪ್ರಶ್ನಿಸಿ ಫಾರ್ಮ್-೭ ಸಲ್ಲಿಸಿರುವ ಅರ್ಜಿಗಳನ್ನು ಸ್ಥಳೀಯ ಬಿ.ಎಲ್.ಒ ಅವರು ಪರಿಶೀಲಿಸಿ ಅಪ್ಲೋಡ್ ಮಾಡಿಲ್ಲ ಎಂದು ಸ್ಥಳೀಯ ಮುಖಂಡರು ಮಾಹಿತಿ ನೀಡಿದ್ದಾರೆ. ಒಂದು ವೇಳೆ ಬಿ.ಎಲ್.ಒ ಸಹಿ ಹಾಕಿ ಫಾರ್ಮ್ ೭ ಸಲ್ಲಿಸಿದ್ದರೆ ಮತಗಳು ಡಿಲೀಟ್ ಆಗುವ ಸಾಧ್ಯತೆಗಳು ಕೂಡ ಇತ್ತು. ಈ ಬಗ್ಗೆ ಬ್ಯಾಡಗೊಟ್ಟ ಮತಗಟ್ಟೆಯ ಬಿ.ಎಲ್.ಒ ಪ್ರತಿಕ್ರಿಯಿಸಿ, “೬೩ ಮಂದಿಯೂ ಅರ್ಹ ಮತದಾರರೇ ಆಗಿದ್ದಾರೆ. ಹೀಗಾಗಿ ಮೇಲಧಿಕಾರಿಗಳಿಗೆ ತಿಳಿಸಿದ್ದೇನೆ, ಅವರು ಅರ್ಜಿಗಳನ್ನು ತಡೆಹಿಡಿಯುವಂತೆ ಸೂಚಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಹಕ್ಕು ಮತ್ತು ಆಕ್ಷೇಪ ಮಾಹಿತಿ ಅಳಿಸಿ ಹಾಕುತ್ತಿರುವ ಆಯೋಗ
ಚುನಾವಣಾ ಆಯೋಗವು ತನ್ನ ವೆಬ್ಸೈಟ್ನಲ್ಲಿ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಿರುವವರ ಮಾಹಿತಿಯನ್ನು ಸೆಪ್ಟೆಂಬರ್ ೦೧ ರಿಂದ ಅಪ್ಲೋಡ್ ಮಾಡುತ್ತಿತ್ತು. ಆದರೆ ಎರಡು ದಿನದ ಮಾಹಿತಿ ಅಪ್ಲೋಡ್ ಮಾಡುತ್ತಿದ್ದಂತೆ, ಮೊದಲ ಎರಡು ದಿನಗಳÀ ಮಾಹಿತಿಯನ್ನು ಅಳಿಸಿ ಹಾಕಲಾಗುತ್ತಿದೆ. ಈವರೆಗೆ ಸಲ್ಲಿಕೆಯಾದ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಆಕ್ಷೇಪಗಳಲ್ಲಿ ಸೆ.೨೪ ರವರೆಗಿನ ಎಲ್ಲಾ ಮಾಹಿತಿಗಳನ್ನು ಪೋರ್ಟಲ್ನಿಂದ ತೆಗೆದು ಹಾಕಲಾಗಿದೆ.
ಪಕ್ಕದ ಮನೆಯ ಮತದಾರರನ್ನೇ ಡಿಲೀಟ್ ಮಾಡಲು ಅರ್ಜಿ
“ಆ ಮತದಾರರು ಬಹಳ ವರ್ಷಗಳಿಂದ ನಮ್ಮ ಪಕ್ಕದ ಮನೆಯಲ್ಲಿಯೇ ಇದ್ದಾರೆ, ನಮಗೂ ಚೆನ್ನಾಗಿ ಪರಿಚಯ ಇದೆ. ಆದರೂ ಪಕ್ಷವೊಂದರ ಮುಖಂಡರು ಹೇಳಿದ ಕಾರಣಕ್ಕೆ ಕರಡು ಪಟ್ಟಿಯಲ್ಲಿ ಅವರ ಹೆಸರುಗಳ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದೇವೆ. ಅವರನ್ನು ಡಿಲೀಟ್ ಮಾಡಿ ಎಂದು ಹೇಳಿಲ್ಲ, ಅರ್ಜಿಗೆ ಸಹಿ ಮಾಡಿ ಎಂದು ಪಕ್ಷದವರು ಹೇಳಿದ ಕಾರಣ, ಸಹಿ ಮಾಡಿದ್ದೇನೆ” ಎಂದು ಫಾರ್ಮ್-೭ ಮೂಲಕ ಆಕ್ಷೇಪ ವ್ಯಕ್ತಪಡಿಸಿರುವ ಮಹಿಳೆಯೋರ್ವರು ಹೇಳುತ್ತಾರೆ.
“ಸಂಶಯವಿದ್ದ ಸುಮಾರು ೫೦ ಜನರ ಹೆಸರು ಕರಡು ಪಟ್ಟಿಯಲ್ಲಿರುವದನ್ನು ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಲಾಗಿದೆ” ಎಂದು ಒಪ್ಪಿಕೊಂಡಿದ್ದಾರೆ. ಹೆಸರು, ವಿಳಾಸ, ಇPIಅ ನಂಬರ್ ಮುದ್ರಿತವಾಗಿರುವ ಫಾರ್ಮ್ಗಳು ಎಲ್ಲಿಂದ ಬಂದವು ಎಂದು ಪ್ರಶ್ನಿಸಿದಾಗ, “ನಮ್ಮ ಪಾರ್ಟಿಯಿಂದ ಕೊಟ್ಟಿದ್ದಾರೆ” ಎಂದು ಮಹಿಳೆ ಪ್ರತಿಕ್ರಿಯಿಸಿದರು.
ಇದೇ ಬೂತ್ನ ಮತ್ತೊಬ್ಬ ಅರ್ಜಿದಾರ, “ನಮ್ಮ ಮತಗಟ್ಟೆ ಅಧ್ಯಕ್ಷರು ಪಕ್ಷದ ಕಚೇರಿಯಲ್ಲಿ ಸಭೆ ಕರೆದಿದ್ದರು. ಅಲ್ಲಿಗೆ ಹೋದಾಗ ಐದಾರು ಜನರಿಗೆ ಅರ್ಜಿಗಳನ್ನು ಕೊಟ್ಟು ಸಹಿ ಮಾಡಲು ಹೇಳಿದರು ಮತ್ತು ಬಿ.ಎಲ್.ಒಗೆ ಸಲ್ಲಿಸಲು ತಿಳಿಸಿದರು. ನೀನೊಬ್ಬನೇ ಸಹಿ ಮಾಡಬೇಡ, ಬೇರೆಯವರಿಂದಲೂ ಸಹಿ ಮಾಡಿಸು ಎಂದರು. ಅದರಂತೆ ನನ್ನ ಪತ್ನಿ ಮತ್ತು ಪಕ್ಕದ ಮನೆಯ ವೃದ್ಧರೊಬ್ಬರಿಂದಲೂ ಸಹಿ ಮಾಡಿಸಿದೆ. ಪಕ್ಷ ಹೇಳಿದ್ದಕ್ಕಷ್ಟೇ ಮಾಡಿದೆ” ಎಂದು ಹೇಳಿದ್ದಾರೆ.
ಕಾನೂನುಬದ್ಧ ಕ್ರಮಕ್ಕೆ ಮುಖ್ಯ ಚುನಾವಣಾಧಿಕಾರಿ ಸೂಚನೆ
ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಉದ್ದೇಶದಿಂದ ಫಾರಂ-೭ ರಲ್ಲಿ ಸಾಮೂಹಿಕವಾಗಿ ಅರ್ಜಿಗಳನ್ನು ಸಲ್ಲಿಸಿರುವ ಪ್ರಕರಣಗಳ ಕುರಿತು ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸಂಬAಧಪಟ್ಟ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮತದಾರರ ನೋಂದಣಿ ಅಧಿಕಾರಿಗಳ (ಇಖಔ) ಮುಂದೆ ಫಾರಂ-೭ರಲ್ಲಿ ದೊಡ್ಡ ಪ್ರಮಾಣದಲ್ಲಿ ಅರ್ಜಿಗಳನ್ನು ಸಲ್ಲಿಸಿರುವ ಪ್ರಕರಣಗಳು ಗಮನಕ್ಕೆ ಬಂದಿದ್ದು, ಇಂತಹ ಅರ್ಜಿಗಳಲ್ಲಿ ಕೆಲವು ನೈಜವಾಗಿಲ್ಲ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ತಿಳಿದಿದ್ದರೂ ಅರ್ಜಿ ಅಥವಾ ನಮೂನೆಯಲ್ಲಿ ಸುಳ್ಳು ಹೇಳಿಕೆ ಅಥವಾ ಫೋರ್ಜರಿ ಮಾಡಿರುವುದು ಕಂಡುಬAದರೆ, ಅಂತಹ ಅರ್ಜಿದಾರರ ವಿರುದ್ಧ ಪ್ರಜಾಪ್ರತಿನಿಧಿತ್ವ ಕಾಯ್ದೆ, ೧೯೫೦ರ ಸೆಕ್ಷನ್ ೩೧ರ ಅಡಿಯಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಸೂಚಿಸಿದ್ದಾರೆ. ಆದರೆ, ಯಾವುದೇ ಕ್ರಮ ಕೈಗೊಳ್ಳುವ ಮೊದಲು ಮತದಾರರ ನೋಂದಣಿ ನಿಯಮಗಳು, ೧೯೬೦ರ ನಿಯಮ ೨೦ರ ಅಡಿಯಲ್ಲಿ ವಿಚಾರಣೆ ನಡೆಸಬೇಕು ಎಂದವರು ಸ್ಪಷ್ಟಪಡಿಸಿದ್ದಾರೆ.
ಫಾರಂ ೬, ೬ಎ, ೭ ಮತ್ತು ೮ ಸೇರಿದಂತೆ ಮತದಾರರ ನೋಂದಣಿಗೆ ಸಂಬAಧಿಸಿದ ನಮೂನೆಗಳಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ಅಥವಾ ಫೋರ್ಜರಿ ನೀಡಿರುವ ಪ್ರಕರಣಗಳನ್ನು ನಿಯಮಾನುಸಾರ ಪರಿಶೀಲಿಸಿ, ತಪ್ಪಿತಸ್ಥರೆಂದು ದೃಢಪಟ್ಟಲ್ಲಿ ಕಾನೂನು ಕ್ರಮ ಜರುಗಿಸುವಂತೆ ಸಂಬAಧಪಟ್ಟ ಇಖಔಗಳಿಗೆ ನಿರ್ದೇಶನ ನೀಡಲಾಗಿದೆ.