ಕೂಡಿಗೆ, ಸೆ. ೩೦: ಕೂಡಿಗೆ ಡೈರಿಯನ್ನು ಒಕ್ಕೂಟದ ವತಿಯಿಂದ ಅಭಿವೃದ್ಧಿಪಡಿಸುವುದು, ಜೊತೆಗೆ ನೂತನ ಕಟ್ಟಡದ ನಂತರ ಕೂಡಿಗೆಯಲ್ಲೇ ಹಾಲು, ಹಾಲಿನ ಉತ್ಪನ್ನಗಳು ತಯಾರಿಸಲು ಎಲ್ಲಾ ಪ್ರಕ್ರಿಯೆಗಳು ಒಕ್ಕೂಟದ ವತಿಯಿಂದ ಈಗಾಗಲೇ ನಡೆಯುತ್ತಿವೆ ಎಂದು ಹಾಸನ ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕಿ ಮಾನಸ ಪಾಟೀಲ್ ತಿಳಿಸಿದ್ದಾರೆ.
ಅವರು ಕೂಡಿಗೆ ಡೈರಿ ಅಧಿಕಾರಿ ವೃಂದ, ಕಾರ್ಮಿಕ ವರ್ಗದ ವತಿಯಿಂದ ವರ್ಷಂಪ್ರತಿಯAತೆ ಗಣೇಶೋತ್ಸವದ ಅಂಗವಾಗಿ ಡೈರಿ ಆವರಣದಲ್ಲಿ ಗೌರಿ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪನೆ ಹಾಗೂ ವಿಸರ್ಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಈಗಾಗಲೇ ಕೂಡಿಗೆ ಡೈರಿಯಲ್ಲಿ ರೂ.೧೪ ಕೋಟಿ ವೆಚ್ಚದಲ್ಲಿ ಕರ್ನಾಟಕ ರಾಜ್ಯ ಹಾಲು ಮಹಾಮಂಡಲದ ವತಿಯಿಂದ ನೂತನ ಕಟ್ಟಡದ ಕಾಮಗಾರಿಗೆÀ ಕ್ರಿಯಾ ಯೋಜನೆ ಸಿದ್ದಗೊಂಡಿದೆ.
ನAತರ ನೂತನ ತಂತ್ರಜ್ಞಾನ ಯಂತ್ರಗಳ ಅಳವಡಿಕೆ, ಹೆಚ್ಚು ಸಾಮರ್ಥ್ಯದ ಬಾಯ್ಲರ್ಗಳ ಅಳವಡಿಕೆ ಸೇರಿದಂತೆ ಡೈರಿ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ಒಳಗೊಂಡAತೆ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳುವ ಎಲ್ಲಾ ಪ್ರಕ್ರಿಯೆಗಳು ಈಗಾಗಲೇ ಆರಂಭಗೊAಡಿವೆ ಎಂದರು. ಈ ಸಂದರ್ಭ ಕೂಡಿಗೆ ಡೈರಿಯ ವಿವಿಧ ಘಟಕಗಳ ಕೇಂದ್ರಕ್ಕೆ ತೆರಳಿ ಪರಿಶೀಲನೆ, ನಂತರ ನೂತನ ಕಟ್ಟಡ ಆರಂಭಿಸುವ ಜಾಗದ ಪರಿಶೀಲನೆ ನಡೆಸಿದರು.
ಈ ಸಂದರ್ಭ ಪ್ರಧಾನ ವ್ಯವಸ್ಥಾಪಕಿ ಪಾಟೀಲ್ ಮತ್ತು ಜಿಲ್ಲಾ ನಿರ್ದೇಶಕ ಕೆ.ಕೆ ಹೇಮಂತ್ ಕುಮಾರ್ ಅವರನ್ನು ಗೌರವಿಸಲಾಯಿತು. ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್ ಸೇರಿದಂತೆ ಉಪ ವ್ಯವಸ್ಥಾಪಕ ಅನಿಲ್, ವಿವಿಧ ವಿಭಾಗಗಳ ಅಧಿಕಾರಿ ವರ್ಗದವರು ಇದ್ದರು.