ಮಡಿಕೇರಿ, ಸೆ. ೩೦: ಅಖಿಲ ಕೊಡವ ಸಮಾಜ ವತಿಯಿಂದ ಸಮಾಜದ ಅಧ್ಯಕ್ಷರಾಗಿದ್ದ ದೇಶತಕ್ಕ ಮಾತಂಡ ಮೊಣ್ಣಪ್ಪ ಅವರ ಹೆಸರನ್ನು ವೀರಾಜಪೇಟೆ ಕೊಡವ ಸಮಾಜದಿಂದ ಮೂರ್ನಾಡು ರಸ್ತೆಗೆ ಇರಿಸಲಾಗಿದ್ದು, ಇದರ ನಾಮಫಲಕ ಉದ್ಘಾಟನಾ ಕಾರ್ಯ ತಾ. ೨ ರಂದು ನಡೆಯಲಿದೆ. ಅಂದು ಸಂಜೆ ೪ ಗಂಟೆಗೆ ವೀರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಪೊನ್ನಣ್ಣ ಉದ್ಘಾಟನೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಮಾತಂಡ ಕಮಲ ಮೊಣ್ಣಪ್ಪ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ಉಪಸ್ಥಿತರಿರಲಿದ್ದಾರೆ. ಬಳಿಕ ಕೊಡವ ಸಮಾಜದಲ್ಲಿ ಸಭೆ ನಡೆಯಲಿದ್ದು, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.