ವೀರಾಜಪೇಟೆ, ಸೆ. ೩೦: ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮೇರೆಗೆ, ರಾಜ್ಯದ ವಿವಿಧ ಒಟ್ಟು ೭ ಜಿಲ್ಲೆಗಳಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಅಥವಾ ಖಾಯಂ ಪೀಠವನ್ನು (Peಡಿmಚಿಟಿeಟಿಣ ಃeಟಿಛಿh) ಸ್ಥಾಪಿಸುವ ಸಾಧ್ಯತೆ ಹಾಗೂ ಸಾಧಕ - ಬಾಧಕಗಳ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ವಿಶೇಷ ಸಮಿತಿಯೊಂದನ್ನು ರಚಿಸಲಾಗಿದೆ.

ಮಂಗಳೂರು, ಉಡುಪಿ (ಕರಾವಳಿ ಕರ್ನಾಟಕ ಪ್ರದೇಶ), ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು-ಮಡಿಕೇರಿ, ಹಾಸನ, ದಾವಣಗೆರೆ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಈ ಸಮಿತಿಗೆ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜಸ್ಟಿಸ್ ಅನು ಶಿವರಾಮನ್, ಜಸ್ಟಿಸ್ ಎಸ್.ಜಿ. ಪಂಡಿತ್ ಹಾಗೂ ಜಸ್ಟಿಸ್ ಮೊಹಮ್ಮದ್ ನವಾಜ್ ಅವರನ್ನು ನೇಮಿಸಲಾಗಿದ್ದು, ಉಚ್ಚ ನ್ಯಾಯಾಲಯದ ರಿಜಿಸ್ಟಾçರ್ ಜನರಲ್ ಆದ ಎಂ. ಚಂದ್ರಶೇಖರ್ ರೆಡ್ಡಿ ಅವರು ಈ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.

ನಿರಂತರ ಪ್ರಯತ್ನ

ಕೊಡಗು ಜಿಲ್ಲೆಗೆ, ಅದರಲ್ಲೂ ವಿಶೇಷವಾಗಿ ವಿರಾಜಪೇಟೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಪೀಠವನ್ನು ಸ್ಥಾಪಿಸಬೇಕೆಂದು ವಿರಾಜಪೇಟೆಯವರಾದ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ನ ಹಿರಿಯ ವಕೀಲರಾದ ಎನ್. ರವೀಂದ್ರನಾಥ್ ಕಾಮತ್ ಅವರು ಈ ಹಿಂದೆ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳನ್ನು ನೇರವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ಬೆಂಗಳೂರು ವಕೀಲರ ಸಂಘದಿAದ ಇತರೆಡೆ ಪೀಠ ಸ್ಥಾಪನೆಗೆ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಸರ್ವೋಚ್ಚ ನ್ಯಾಯಾಲಯದ ಪೀಠ ಹಾಗೂ ವೀರಾಜಪೇಟೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಪೀಠ ಸ್ಥಾಪಿಸಬೇಕೆಂದು ಅವರು ಬಲವಾಗಿ ಪ್ರತಿಪಾದಿಸಿದ್ದರು.

ಅಲ್ಲದೆ, ಈ ಕುರಿತು ಸರ್ವೋಚ್ಚ ನ್ಯಾಯಾ ಲಯದ ನ್ಯಾಯಮೂರ್ತಿಗಳು, ಪ್ರಧಾನಮಂತ್ರಿಗಳು ಹಾಗೂ ರಾಷ್ಟçಪತಿಗಳಿಗೂ ಮನವಿಗಳನ್ನು ಸಲ್ಲಿಸಿದ್ದರು. ಇವರ ಈ ನಿರಂತರ ಹೋರಾಟ ಹಾಗೂ ಬೇರೆ ಜಿಲ್ಲೆಗಳ ವಕೀಲರ ಆಗ್ರಹದ ಫಲವಾಗಿ ಈಗ ಹೈಕೋರ್ಟ್ ವರದಿಗಾಗಿ ಸಮಿತಿಯನ್ನು ರಚಿಸಿದೆ ಎಂದು ತಿಳಿದು ಬಂದಿದೆ.

ಈ ಹೊಸ ಬೆಳವಣಿಗೆಯ ಬಗ್ಗೆ ಹಿರಿಯ ವಕೀಲ ಎನ್. ರವೀಂದ್ರನಾಥ್ ಕಾಮತ್ ಅವರು ಸಂತಸ ವ್ಯಕ್ತಪಡಿಸಿದ್ದು, “೧೯೫೬ರವರೆಗೆ ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. ಕೊಡಗಿನ ಜನರಿಗೆ ತಮ್ಮ ಕಾನೂನು ಹೋರಾಟ ಹಾಗೂ ಪ್ರಕರಣಗಳ ವಿಚಾರಣೆಗಾಗಿ ಬೆಂಗಳೂರಿಗೆ ತೆರಳಿ ಬರುವುದು ಅತ್ಯಂತ ಕಷ್ಟಕರ ಹಾಗೂ ಆರ್ಥಿಕವಾಗಿ ಹೊರೆಯಂತಾಗಿದೆ. ಆದ್ದರಿಂದ ವೀರಾಜಪೇಟೆಯಲ್ಲಿಯೇ ಉಚ್ಚ ನ್ಯಾಯಾಲಯದ ಪೀಠ ಸ್ಥಾಪನೆಯಾಗುವುದು ಅತ್ಯಗತ್ಯ” ಎಂದು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ. ಸಮಿತಿ ರಚನೆಯಾಗಿರುವ ಹಿನ್ನೆಲೆಯಲ್ಲಿ, ಕೊಡಗಿನ ಸಾರ್ವಜನಿಕರು ಮತ್ತು ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು, ವೀರಾಜಪೇಟೆಯಲ್ಲಿಯೇ ಪೀಠವನ್ನು ಸ್ಥಾಪಿಸಬೇಕೆಂದು ನೂತನ ಸಮಿತಿ ಮುಂದೆ ತಮ್ಮ ಪ್ರಬಲ ಮನವಿಗಳನ್ನು ಸಲ್ಲಿಸಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.