ಸಿದ್ದಾಪುರ, ಸೆ. ೩೦: ಹುಲಿ ದಾಳಿಗೆ ಸಿಲುಕಿ ಕೋಣ ಬಲಿಯಾಗಿದೆ.

ಸಿದ್ದಾಪುರ ಠಾಣಾ ವ್ಯಾಪ್ತಿಯ ಹಾಲುಗುಂದ ಗ್ರಾಮ ಪಂಚಾಯಿತಿಯ ಕೊಂಡAಗೇರಿ ಗ್ರಾಮದ ಎಲಿಯಂಗಡಿ ನಿವಾಸಿ ಕೆ. ವೈ. ಅಹಮ್ಮದ್ ಎಂಬವರಿಗೆ ಸೇರಿದ ಮೂರು ವರ್ಷ ಪ್ರಾಯದ ಕೋಣವನ್ನು ಮೇಯಲು ಬಿಟ್ಟಿದ್ದರು. ಕೋಣವು ರಾತ್ರಿಯಾದರೂ ಮನೆಗೆ ಬರಲಿಲ್ಲ. ಕೋಣವನ್ನು ಹುಡುಕಿಕೊಂಡು ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಬೆಳಿಗ್ಗೆ ತೆರಳುವ ಸಂದರ್ಭ ಕೆಲಸಕ್ಕೆ ತೆÀರಳುತ್ತಿದ್ದ ಕಾರ್ಮಿಕರಿಗೆ ಕೋಣವನ್ನು ಎಳೆದುಕೊಂÀಡು ಹೋಗಿರುವ ಕುರುಹು ಪತ್ತೆ ಆಗಿದೆ.

ಬಳಿಕ ಕೋಣದ ಮಾಲೀಕರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯರ ನೆರವಿನಿಂದ ಹುಡುಕಿದಾಗ ಹುಲಿಯ ಹೆಜ್ಜೆಯು ಪತ್ತೆಯಾಗಿದ್ದು ಹುಲಿ ಕೋಣವನ್ನು ಕೊಂದು ಅರ್ಧ ಭಾಗದಷ್ಟು ತಿಂದಿರುವುದು ಕಂಡುಬAದಿದೆ. ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಹಾಲುಗುಂದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಂದಾಯಿ ಅಬ್ದುಲ್ ರಹಿಮಾನ್ ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.