ಮಡಿಕೇರಿ, ಸೆ. ೩೦: ಕಾಂಗರೂ ಕೇರ್ ಸಂಸ್ಥೆ ವತಿಯಿಂದ ಸಂಚಾರಿ ಪೊಲೀಸರಿಗೆ ಗೌರವಾರ್ಪಣೆ ಹಾಗೂ ಜಾಕೆಟ್ ವಿತರಣೆ ಕಾರ್ಯಕ್ರಮ ತಾ. ೧ ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಡಿವೈಎಸ್ಪಿ ಪಿ.ಎ. ಸೂರಜ್ ಭಾಗವಹಿಸಲಿದ್ದಾರೆ.