ವರದಿ : ಕೆ.ಎಂ. ಇಸ್ಮಾಯಿಲ್ ಕಂಡಕರೆ

ಮಡಿಕೇರಿ, ಸೆ. ೨೯:ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ದೇಶದ ಬಡವರು, ವಲಸೆ ಕಾರ್ಮಿಕರು, ಆದಿವಾಸಿಗಳು, ಅಲ್ಪಸಂಖ್ಯಾತರ ಮತದಾನದ ಹಕ್ಕನ್ನು ಕಸಿಯುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಎಂದು ಚಿಂತಕ, ಹೋರಾಟಗಾರ ಹಾಗೂ ಬಹುಭಾಷಾ ನಟ ಪ್ರಕಾಶ್ ರಾಜ್ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮಡಿಕೇರಿ ತಾಲೂಕಿನ ಪಾಲೆಮಾಡು ಗ್ರಾಮದಲ್ಲಿ ಎಸ್‌ಐಆರ್ ಪರಿಶೋಧ ಹಾಗೂ ಪ್ರತಿರೋಧ ಪ್ರವಾಸ,ಕೊಡಗು ಜಿಲ್ಲಾ ಎಸ್‌ಐಆರ್ ಸಂತ್ರಸ್ತರ ಸಾರ್ವಜನಿಕ ಸಮೀಕ್ಷೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಈಗಾಗಲೇ ಎಸ್‌ಐಆರ್ ಪ್ರಕ್ರಿಯೆಯಲ್ಲಿ ೧೩ ಕೋಟಿ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ.ಕರ್ನಾಟಕದಲ್ಲಿ ೧.೦೮ ಕೋಟಿ ಮತದಾರರನ್ನು ಂSಆಆಔ ಪಟ್ಟಿಗೆ ಸೇರ್ಪಡೆ ಮಾಡಿದ್ದಾರೆ. ಅದಲ್ಲದೇ ೪೩ ಲಕ್ಷ ಮತದಾರರಿಗೆ ಅನ್ ಮ್ಯಾಪಿಂಗ್ ಹಾಗೂ ಲಾಜಿಕಲ್ ಡಿಸ್ಕ್ರಿಪೆನ್ಸಿ ಹೆಸರಿನಲ್ಲಿ ನೋಟಿಸ್ ನೀಡಲಾಗಿದೆ.ರಾಜ್ಯದಲ್ಲಿ ಮತದಾರರನ್ನು ಹೊರಗಿಡುವ ಹುನ್ನಾರಕ್ಕೆ ನಾವು ಪ್ರತಿರೋಧ ಮಾಡಿದ್ದೇವೆ.ಕೂಡಲೇ ಎಸ್‌ಐಆರ್ ರದ್ದುಪಡಿಸಬೇಕೆಂದು ಒತ್ತಾಯಿಸಿದರು.

ಸ್ಪೆಲ್ಲಿಂಗ್ ತಪ್ಪು ಮಾಡಿದ್ದು ಯಾರು?

“ಇಂದು ಸ್ಪೆಲ್ಲಿಂಗ್ ಮಿಸ್ಟೇಕ್, ಹೆಸರು ಜೋಡಣೆ ತಪ್ಪು, ಹೆಸರು ಚೇಂಜ್ ಆಗಿದೆ, ನಂಬರ್ ಚೇಂಜ್ ಆಗಿದೆ ಎಂದು ಕಾರಣ ಕೊಟ್ಟು ಜನರ ಮತ ವಂಚನೆ ಮಾಡಲಾಗುತ್ತಿದೆ. ಆದರೆ ಈ ತಪ್ಪು ಮಾಡಿದ್ದು ಜನರಲ್ಲ, ಸರ್ಕಾರಿ ವ್ಯವಸ್ಥೆ. ಸ್ಪೆಲ್ಲಿಂಗ್ ತಪ್ಪು ಮಾಡಿದವರು ಸರ್ಕಾರಿ ನೌಕರರು. ಸರ್ಕಾರಿ ವ್ಯವಸ್ಥೆ ತಪ್ಪು ಮಾಡಿ, ಅದಕ್ಕೆ ಜನರಿಗೆ ಶಿಕ್ಷೆ ಕೊಡುವುದು ಸರಿಯಲ್ಲ ಎಂದು ಹೇಳಿದರು.

“ಈ ದೇಶದಲ್ಲಿ ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ಅಜ್ಜಿ ಮತ್ತು ಮೊಮ್ಮಗಳಿಗೆ ೧೫-೨೦ ವರ್ಷ ಮಾತ್ರ ವ್ಯತ್ಯಾಸ ಇರುವ ಕುಟುಂಬಗಳಿವೆ. ತಾಯಿ ಮಗಳು ಒಂದೇ ಸಲ ಬಸುರಿ ಆಗಿರುವುದನ್ನು ನಾವು ನೋಡಿದ್ದೇವೆ. ಅಜ್ಜಿಗೆ ಮಗಳಿಗೆ ೪೦ ವರ್ಷ ಅಂತರ ಇರಬೇಕು ಅಂತ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಿಯಮ ರೂಪಿಸಿದ್ದಾರೆ. ಇದೆಷ್ಟು ಸರಿ ಎಂದು ಪ್ರಶ್ನಿಸಿದರು.

ಎಸ್‌ಐಆರ್ ಅವೈಜ್ಞಾನಿಕ

ಎಸ್‌ಐಆರ್ ಯಾರು ಕೂಡ ಒಪ್ಪಿಕೊಳ್ಳಲಾಗದ್ದು ಅವೈಜ್ಞಾನಿಕವಾಗಿದೆ. ದೇಶದಲ್ಲಿ ಮತಗಳ ಅಂಕಿ ಅಂಶಗಳ ಅಪ್ಡೇಟ್ ಆಯಿತು. ಆದಾದ ಆರು ತಿಂಗಳಲ್ಲೇ ಪುನಃ ಎಸ್‌ಐಆರ್ ತಂದಿದ್ದು ಯಾಕೆ ಎಂದು ಪ್ರಕಾಶ್ ರಾಜ್ ಪ್ರಶ್ನೆ ಮಾಡಿದರು ಸಾವಿರಾರು ಜನರು ಕೂಲಿಗಾಗಿ ಬೇರೆಡೆಗೆ ಹೋಗಿದ್ದಾರೆ.

೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಅವರ ಬಗ್ಗೆ ನಿಮಗೆ ಗೊತ್ತಿಲ್ಲವೆ? ನೀವು ಎನ್ಯೂಮರೇಷನ್ ಫಾರಂ ತೆಗೆದುಕೊಂಡು ಹೋಗ್ತೀರ, ಆ ವೇಳೆ ಅವರು ಮನೆಯಲ್ಲಿ ಇಲ್ಲ ಎಂದರೆ ಪರ್ಮನೆಂಟ್ ಇಲ್ಲ ಎಂದು ಅರ್ಥವೇ? ಎಂದು ಪ್ರಶ್ನಿಸಿದರು.

ಎಸ್‌ಐಆರ್ ಮಾಡುವುದಕ್ಕೆ ನಿಮಗೆ ಇಷ್ಟೊಂದು ಅರ್ಜೆಂಟ್ ಏನು? ಇನ್ನು ೮-೧೦ ತಿಂಗಳು ಸಮಯ ತೆಗೆದುಕೊಳ್ಳಿ. ರಾಜ್ಯದಲ್ಲಿ ಚುನಾವಣೆಗೆ ಎರಡು ವರ್ಷ ಇದೆ. ಇಂದು ರಾಜ್ಯದಲ್ಲಿ ೧.೦೮ ಕೋಟಿ ಜನರು ಮತದಾನದಿಂದ ಹೊರಗುಳಿದಿದ್ದಾರೆ. ೪೩ ಲಕ್ಷ ಜನರಿಗೆ ಮ್ಯಾಪಿಂಗ್ ಆಗಿಲ್ಲ. ಬಿಜೆಪಿಗರು ೧೮ ಸಾವಿರ ಮುಸ್ಲಿಂ ದಲಿತರ ಓಟ್ ತೆಗೆಯಿರಿ ಎಂದು ಫಾರಂ ೭ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಎಸ್‌ಐಆರ್ ರದ್ದು ಮಾಡಿ. ಕಳೆದ ಮೂರು ವರ್ಷಗಳಿಂದ ನೀವು ಮಾಡಿದ ಎಲ್ಲಾ ನಿರ್ಧಾರಗಳ ಫೈಲ್ ಗಳನ್ನು ಸುಪ್ರೀಂಕೋರ್ಟಿಗೆ ಕೊಡಿ. ಇಡೀ ಭಾರತದಲ್ಲಿ ೧೩ ಕೋಟಿ ಮತದಾರರನ್ನು ತೆಗೆದು ಹಾಕಲಾಗಿದೆ ಎಂದು ಆಗ್ರಹಿಸಿದರು. ಎಲೆಕ್ಷನ್ ಕಮಿಷನ್‌ಗೆ ಈ ಹುನ್ನಾರ ನಡೆಯಲು ಬಿಡಲ್ಲ. ಎಲೆಕ್ಷನ್ ಕಮಿಷನ್ ಮೇಲೆ ಯಾವುದೇ ರೀತಿ ದೂರು ದಾಖಲಿಸುವಂತಿಲ್ಲ ಎಂದು ಬಿಜೆಪಿ ನಿಯಮ ಮಾಡಿತು. ಇದನ್ನು ಮಾಡಿದ್ದು ಏಕೆ ಎಂದು ಬಿಜೆಪಿ ಹೇಳಲಿ ಎಂದರು.