ಮಡಿಕೇರಿ, ಸೆ. ೨೮: ಪಿಕಪ್ ಹಾಗೂ ಆಲ್ಟೋ ಕಾರು ಮುಖಾಮುಖಿಯಾದ ಹಿನ್ನೆಲೆ ಕಾರಿನಲ್ಲಿದ್ದ ಐವರ ಪೈಕಿ ಮಡಿಕೇರಿ ನಗರದ ನಿವಾಸಿಯೋರ್ವರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿಯ ಫ್ಲೆöÊ-ಓವರ್‌ನಲ್ಲಿ ನಡೆದಿದೆ.

ಘಟನೆ ಇಂದು ಬೆಳಿಗ್ಗೆ ಸುಮಾರು ೬ ಗಂಟೆಗೆ ನಡೆದಿದ್ದು, ಮೃತರನ್ನು ಮಡಿಕೇರಿ ಆಜಾದ್‌ನಗರದ ನಬೀಸಾ (೭೫) ಎಂದು ಗುರುತಿಸಲಾಗಿದೆ. ಆಲ್ಟೋ ಕಾರು ಚಾಲನೆ ಮಾಡುತ್ತಿದ್ದ ಮೃತ ನಬೀಸಾ ಅವರ ಪುತ್ರ ಅಕ್ಬರ್ ಅಲಿ ಹಾಗೂ ಅವರ ಪತ್ನಿಗೆÉ ಗಾಯಗಳಾಗಿದ್ದು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಆಲ್ಟೋ ಕಾರಿನಲ್ಲಿದ್ದವರು ಮಂಗಳೂರಿನಲ್ಲಿ ಉಮ್ರಾ ತರಗತಿ ಮುಗಿಸಿಕೊಂಡು ಬೆಳಿಗ್ಗೆ ಮಡಿಕೇರಿಗೆ ಹಿಂತಿರುಗುತ್ತಿರುವಾಗ ಮಾಣಿ ಫ್ಲೆöÊ-ಓವರ್‌ನಲ್ಲಿ ಪಿಕಪ್ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ.

ಮAಗಳೂರಿನಿAದ ಮಡಿಕೇರಿಗೆ ಪ್ರಯಾಣಿಸುವಾಗ ಮಾಣಿ ಫ್ಲೆöÊ-ಓವರ್‌ನಲ್ಲಿ ಸರ್ವಿಸ್ ರಸ್ತೆಯ ಮೂಲಕ ತಿರುವು ಪಡೆದು ಮಡಿಕೇರಿ ಮಾರ್ಗಕ್ಕೆ ಹೊಂದಿಕೊಳ್ಳುವ ರಸ್ತೆ ಕಿರಿದಾಗಿದ್ದು ಹಾಗೂ ಸಂಪರ್ಕ ನಾಮಫಲಕಗಳಿಲ್ಲದೆ ಇರುವುದರಿಂದ ಚಾಲಕರು ಗೊಂದಲಕ್ಕೊಳಗಾಗಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಈ ಬಗ್ಗೆ ಸಂಬAಧಿಸಿದವರು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.