ಗೋಣಿಕೊಪ್ಪಲು, ಸೆ.೨೮ : ದೇಶದ ಅಖಂಡತೆ, ಏಕತೆ ಮತ್ತು ಆಂತರಿಕ ಸುರಕ್ಷತೆಗೆ ಧಕ್ಕೆ ತರುತ್ತಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗರ ಗಡಿಪಾರಿಗಾಗಿ ಆಗ್ರಹಿಸಿ ಕೊಡಗು ಸುರಕ್ಷಾ ಆಂದೋಲನ ಸಮಿತಿಯ ವತಿಯಿಂದ ಜನಜಾಗೃತಿ ಆಂದೋಲನಕ್ಕೆ ಗಡಿಭಾಗ ಕುಟ್ಟದಲ್ಲಿ ಚಾಲನೆ ನೀಡಲಾಯಿತು. ರಾಷ್ಟಿçÃಯ ಸುರಕ್ಷತೆಗಾಗಿ ಜಿಲ್ಲೆಯಾದ್ಯಂತ ಜನಜಾಗೃತಿ ಜನಾಂದೋಲನಾ ರಥಯಾತ್ರೆ ಸೆಪ್ಟೆಂಬರ್ ೨೮ ರಿಂದ ಅಕ್ಟೋಬರ್ ೯ ರವರೆಗೆ ನಡೆಯಲಿದ್ದು ೪೦ ಗ್ರಾಮ ಪಂಚಾಯಿತಿಗಳಲ್ಲಿ ಜನಾಂದೋಲನಾ ರಥಯಾತ್ರೆಯು ಸಾಗಲಿದ್ದು ಅಕ್ಟೊಬರ್ ೯ರಂದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮುಕ್ತಾಯಗೊಳ್ಳಲಿದೆ.

ಜನಾಂದೋಲನಾ ರಥಯಾತ್ರೆಗೆ ಕುಟ್ಟ ಪಟ್ಟಣದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಜಾಗೃತಿಯ ಬಗ್ಗೆ ಕರಪತ್ರಗಳನ್ನು ಬಿಡುಗಡೆಗೊಳಿಸಿ ರಥಯಾತ್ರೆಗೆ ಚಾಲನೆ ನೀಡಲಾಯಿತು. ಹಿಂದೂ ಜಾಗರಣ ವೇದಿಕೆಯ ರಾಜ್ಯ ಪ್ರಮುಖರಾದ ಕೆ.ಟಿ.ಉಲ್ಲಾಸ್‌ರವರು ಅಕ್ರಮ ಬಾಂಗ್ಲಾದೇಶಿ ವಲಸಿಗರು ಕೊಡಗು ಜಿಲ್ಲೆಗೆ ಆಗಮಿಸಿ ನಡೆಸುತ್ತಿರುವ ಸಮಾಜ ಘಾತುಕ ಕೃತ್ಯಗಳ ಬಗ್ಗೆ ಜನ ಎಚ್ಚೆತ್ತುಕೊಳ್ಳುವಂತೆ ಅಲ್ಲದೆ ಕಾಫಿ ಬೆಳೆಗಾರರು ಇವರ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಕರೆ ನೀಡಿದರು. ಜಿಲ್ಲೆಯಲ್ಲಿ ೪೦ ಗ್ರಾಮ ಪಂಚಾಯಿತಿಗಳಲ್ಲಿ ಜನಜಾಗೃತಿ ಆಂದೋಲನಾ ನಡೆಯಲಿದೆ. ಜಾಗೃತ ಸಮಾಜ ಸುರಕ್ಷಿತ ಭಾರತ ನಮ್ಮ ಉದ್ದೇಶವಾಗಿದೆ.

ರಾಷ್ಟçದ ಸುರಕ್ಷತೆ ಸರ್ಕಾರದ ಕೆಲಸವಲ್ಲ ಅದು, ನಮ್ಮ-ನಿಮ್ಮೆಲ್ಲರ ಜವಾಬ್ದಾರಿ ಕೂಡ ಆಗಿದೆ ಎಂದ ಅವರು, ಬಾಂಗ್ಲಾದೇಶ ದಿಂದ ಭಾರತದ ಗಡಿಯನ್ನು ಅಕ್ರಮವಾಗಿ ನುಸುಳಿ ಬಂದು ಭಾರತದ ಮತಾಂಧ ದೇಶದ್ರೋಹಿ ಏಜೆಂಟರ ಮೂಲಕ ಅಕ್ರಮವಾಗಿ ಭಾರತದ ಆಧಾರ್ ಕಾರ್ಡ್, ವೋಟರ್ ಐ.ಡಿ., ರೇಷನ್ ಕಾರ್ಡ್, ಡ್ರೆöÊವಿಂಗ್ ಲೈಸೆನ್ಸ್, ಪಾನ್ ಕಾರ್ಡ್ಗಳನ್ನು ಮಾಡಿಸಿಕೊಂಡು ಕಾರ್ಮಿಕರ ವೇಷದಲ್ಲಿ ದೇಶದ ವಿವಿಧ ರಾಜ್ಯಗಳಿಗೆ ಲಗ್ಗೆಯಿಟ್ಟು ಅಲ್ಲಿನ ಸ್ಥಳೀಯರಿಗಾಗಿ ನಾವು ಉತ್ತರ ಭಾರತದವರೆಂದು ನಂಬಿಸಿ ಅಲ್ಲಿನ ಸ್ಥಳೀಯ ವೃತ್ತಿಗಳಲ್ಲಿ ಕಾರ್ಮಿಕರಾಗಿ ನುಸುಳಿಕೊಂಡಿರುವ ಬಾಂಗ್ಲಾದೇಶಿಗಳು ಭಯೋತ್ಪಾದನೆ ಸೇರಿದಂತೆ ಹಲವಾರು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿ ದೇಶದ ಆಂತರಿಕ ಮತ್ತು ಸ್ಥಳೀಯ ಸುರಕ್ಷತೆಗೆ ಗಂಭೀರ ಸವಾಲನ್ನೊಡ್ಡಿ ಆತಂಕವನ್ನುAಟು ಮಾಡುತ್ತಿರುವ ಘಟನೆಗಳು ದೇಶದಲ್ಲೆಡೆ ಕಂಡು ಬರುತ್ತಿದೆ.

ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ೪೦೯೬ ಕಿ.ಮೀ. ಉದ್ದದ ಗಡಿಪ್ರದೇಶವು ಪಶ್ಚಿಮ ಬಂಗಾಳ, ಅಸ್ಸಾಂ, ಮಿಜೋರಾಂ, ತ್ರಿಪುರ, ಮೇಘಾಲಯದ ಭೂಭಾಗಗಳನ್ನು ಸಂಪರ್ಕಿಸುತ್ತದೆ. ಇದರ ೮೦% ಗಡಿಬೇಲಿ ನಿರ್ಮಾಣಗೊಂಡು ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಹಿಂದೆ ಆ ರಾಜ್ಯಗಳಲ್ಲಿ ಸೆಕ್ಯುಲರಿಸಂ ಹೆಸರಿನಲ್ಲಿ ಆಡಳಿತ ನಡೆಸಿದ ಸೋಂಗಲಾಡಿ ರಾಜಕೀಯ ಪಕ್ಷಗಳು ತಮ್ಮ ವೋಟ್ ಬ್ಯಾಂಕ್ ಗಟ್ಟಿಗೊಳಿಸಲು ಅಕ್ರಮ ಬಾಂಗ್ಲಾದೇಶಿಗಳನ್ನು ತಮ್ಮ ತಮ್ಮ ರಾಜ್ಯಗಳೊಳಗೆ ಬಿಟ್ಟುಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಅದರ ಪರಿಣಾಮ ಇಂದು ೨ ಕೋಟಿಯಷ್ಟು ಅಕ್ರಮ ಬಾಂಗ್ಲಾ ವಲಸಿಗರು ಭಾರತದೊಳಗೆ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ಬಾಂಗ್ಲಾ ಮೂಲದ ಭಯೋತ್ಪಾದಕ ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಸಂಘಟನೆಗಳಾದ ಜಮಾಅತ್-ಉಲ್-ಮುಜಾಹಿದೀನ್, ಅನ್ಸರುಲ್ಲಾ ಬಾಂಗ್ಲಾ ಟೀಮ್, ಅಲ್‌ಖೈದಾ ಹಾಗೂ ಐಸಿಸ್ ಉಗ್ರವಾದಿ ಸಂಘಟನೆಗಳು ಅಕ್ರಮ ನುಸುಳುಕೋರರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿವೆ. ಭಾರತದೊಳಗಿನ ಕೆಲವು ಮತಾಂಧ ದೇಶದ್ರೋಹಿಗಳೂ ಸಹ ಅಕ್ರಮ ಬಾಂಗ್ಲಾ ವಲಸಿಗರಿಗೆ ಸಹಕರಿಸುತ್ತಿರುವುದು ದೇಶದ ಆಂತರಿಕ ಭದ್ರತೆಗೆ ಇಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತಿದೆ.

ದಿನಗಳೆದAತೆ ಮಾಲೀಕರಲ್ಲಿರುವ ಲೋಪಗಳನ್ನು ತಿಳಿದುಕೊಂಡು ಅಧಿಕ ಕೂಲಿಗೆ ಬೇಡಿಕೆಯಿಡುವುದು, ಮಾಲೀಕರನ್ನೇ ಬೆದರಿಸುವುದು, ಹಲ್ಲೆ ನಡೆಸುವುದು, ಕಳ್ಳತನ, ದರೋಡೆ, ಕೊಲೆ, ಅತ್ಯಾಚಾರ ಮುಂತಾದ ದುಷ್ಕೃತ್ಯಗಳನ್ನು ನಡೆಸಿ ಪರಾರಿಯಾಗುತ್ತಾರೆ. ಆದುದರಿಂದ ಸ್ಥಳೀಯರಾದ ನಾವುಗಳು ಇಂತಹ ಅಕ್ರಮ ವಲಸಿಗರನ್ನು ಕೆಲಸಕ್ಕೆ ಕಾರ್ಮಿಕರಾಗಿ ನೇಮಿಸಿಕೊಳ್ಳುವ ಮುನ್ನ ಜಾಗೃತಿ ವಹಿಸಬೇಕು ಎಂದು ಅಭಿಪ್ರಾಯಪಟ್ಟರು. ಸ್ಥಳೀಯ ಪೊಲೀಸ್ ಠಾಣೆ ಮತ್ತು ಗ್ರಾಮ ಪಂಚಾಯಿತಿಗೆ ಇವರುಗಳ ಆಧಾರ್ ಕಾರ್ಡ್ ಇನ್ನಿತರ ದಾಖಲೆಗಳನ್ನು ನೀಡಬೇಕು ಎಂದರು.

ಯಾರೂ ಸಹ ಅಕ್ರಮ ಬಾಂಗ್ಲಾ ವಲಸಿಗರನ್ನು ತಮ್ಮಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳದೆ, ಅಂತಹ ಮಾಹಿತಿಯಿದ್ದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅಕ್ರಮ ಬಾಂಗ್ಲಾ ವಲಸಿಗರನ್ನು ನಮ್ಮ ದೇಶದಿಂದಲೇ ಹೊರಗಟ್ಟಲು ಸಹಕರಿಸೋಣ ಎಂದು ಕರೆಯಿತ್ತರು.

ಕಾರ್ಮಿಕರನ್ನು ಕೆಲಸಕ್ಕೆ ನೇಮಿಸುವ ಸಂದರ್ಭ ಸ್ಥಳೀಯ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡೋಣ ಎಂದರು. ಸ್ಥಳೀಯ ಕಾರ್ಮಿಕರು ಅಥವಾ ನಮ್ಮ ರಾಜ್ಯದ ಕಾರ್ಮಿಕರು ಅಥವಾ ಭಾರತೀಯ ಕಾರ್ಮಿಕರನ್ನೇ ಕೆಲಸಕ್ಕೆ ಕುಟ್ಟ ಭಾಗದ ಕಾಫಿ ಬೆಳೆಗಾರರಾದ ಮಾಚಿಮಾಡ ರಾಜ ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕೊಡಗು ಸುರಕ್ಷಾ ಆಂದೋಲನ ಸಮಿತಿಯ ಕೊಡಗು ಜಿಲ್ಲಾ ಸಂಯೋಜಕರಾದ ಅಜಿತ್ ಕುಕ್ಕೆರ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಚೋಡುಮಾಡ ಶರಿನ್ ಸುಬ್ಬಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಹಿಂದೂಜನ ಜಾಗೃತಿ ಜಿಲ್ಲಾ ಸಹ ಸಂಯೋಜಕ ಅಲ್ಲುಮಾಡ ಶರತ್ ತಿಮ್ಮಯ್ಯ, ತಾಲೂಕು ಸಹ ಸಂಯೋಜಕ ಪುತ್ತಾಮನೆ ಅನೀಲ್ ಪ್ರಸಾದ್, ಸಂಘ ಪರಿವಾರದ ಪ್ರಮುಖರಾದ ಚೆಕ್ಕೆರ ಮನು ಕಾವೇರಪ್ಪ, ಜಿಲ್ಲಾ ಪ್ರಮುಖರಾದ ಚಂದ್ರ ಉಡೋತ್, ಬಿಜೆಪಿ ಪಕ್ಷದ ಜಿಲ್ಲಾ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರದಾನ ಕಾರ್ಯದರ್ಶಿ ನೆಲ್ಲಿರ ಚಲನ್ ಕುಮಾರ್ ವಿ.ಕೆ.ಲೋಕೇಶ್, ವಕ್ತಾರರಾದ ಚೆಪ್ಪುಡೀರ ರಾಕೇಶ್, ಕುಟ್ಟ ಶಕ್ತಿ ಕೇಂದ್ರದ ಪ್ರಮುಖ್ ಕಾಕೇರ ದಿನೇಶ್, ಮಾಜಿ ಪಂಚಾಯಿತಿ ಅಧ್ಯಕ್ಷರಾದ ತಿತೀರ ಪ್ರತೀಶ್ ಗಣಪತಿ, ಕಾಕೇರ ಸುರೇಶ್,ಮುಂಡುಮಾಡ ಕರುಂಬಯ್ಯ, ಮುಕ್ಕಾಟಿರ ರಿತೇಶ್ ಬಿದ್ದಪ್ಪ, ಕೆ.ರಾಜೇಶ್, ದಿನೇಶ್, ನವೀನ್, ಅಮೃತ್ ರಾಜ್, ಸುಬ್ರಮಣಿ, ಪುತ್ತಾಮನೆ ಅಪ್ಪಣ್ಣ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು. ಆರಂಭದಲ್ಲಿ ರೋಹಿತ್ ಭೀಮಯ್ಯ ವಂದೆ ಮಾತರಂ ಹಾಡಿದರು. ವಕೀಲರಾದ ಅಯ್ಯಪ್ಪ ಸ್ವಾಗತಿಸಿದರು. ಚಂದ್ರ ಉಡೋತ್ ನಿರೂಪಿಸಿ, ಹೊಟ್ಟೆಂಗಡ ತಿಮ್ಮಯ್ಯ ವಂದಿಸಿದರು. ರಥಯಾತ್ರೆಯಲ್ಲಿ ನೂರಾರು ನಾಗರಿಕರು ಪಾಲ್ಗೊಂಡಿದ್ದರು.

-ಹೆಚ್.ಕೆ.ಜಗದೀಶ್