ಮಡಿಕೇರಿ, ಸೆ. ೨೮: ಎಸ್‌ಐಆರ್ ಹೆಸರಿನಲ್ಲಿ ಚುನಾವಣಾ ಅಕ್ರಮವೆಸಗಲಾಗುತ್ತಿದ್ದು, ಈ ವಿಚಾರಕ್ಕೆ ಸಂಬAಧಿಸಿದAತೆ ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಹಾಗೂ ಬಂಧನಕ್ಕೆ ಆಗ್ರಹಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಕೇಂದ್ರ ಮಡಿಕೇರಿಯ ಇಂದಿರಾಗಾAಧಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಎಸ್‌ಐಆರ್ ಸಮೀಕ್ಷೆ ಹೆಸರಿನಲ್ಲಿ ಚುನಾಣಾ ಆಯೋಗವು ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕುತ್ತಿದ್ದು, ಈ ಸಂಬAಧ ಕೇಂದ್ರ ಚುನಾವಣಾ ಆಯೋಗದ ಆಯುಕ್ತರು ರಾಜೀನಾಮೆ ನೀಡಬೇಕು. ಅಲ್ಲದೆ ಚುನಾವಣಾ ಅಕ್ರಮ ನಡೆಸುತ್ತಿರುವ ಕಾರಣಕ್ಕಾಗಿ ಆಯುಕ್ತರನ್ನು ಬಂಧಿಸಬೇಕೆAದು ಆಗ್ರಹಿಸಿದರಲ್ಲದೆ, ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಬಿಜೆಪಿ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಕೃತಿ ದಹನ

ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಆಯೋಗದ ಆಯುಕ್ತರಾದ ಜ್ಞಾನೇಶ್ ಕುಮಾರ್ ಹಾಗೂ ಗೃಹ ಸಚಿವ ಅಮಿತ್ ಷಾ ಅವರುಗಳ ಪ್ರತಿಕೃತಿಯನ್ನು ದಹಿಸಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಅದಕ್ಕೆ ಅವಕಾಶ ನೀಡದೆ ತಡೆದರು. ಈ ಸಂದರ್ಭದಲ್ಲಿ ಕೆಲಕಾಲ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಕಿತ್ತಾಟ, ಮಾತನ ಚಕಮಕಿ ನಡೆದವು. ಆದರೂ ಕೆಲವರು ಆಯುಕ್ತರ ಪ್ರತಿಕೃತಿಯನ್ನು ದಹಿಸಿದರು.

ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ; ಮತಗಳನ್ನು ಮಾರಾಟ ಮಾಡಲು ವ್ಯವಸ್ಥಿತ ರೀತಿಯಲ್ಲಿ ಕೇಂದ್ರ ಸರಕಾರದ ಅಣತಿಯಂತೆ ಚುನಾವಣಾ ಆಯೋಗ ಕಾರ್ಯನಿರ್ವಹಿಸುತ್ತಿದೆ. ಯಾರದೇ ಸಲಹೆಗಳನ್ನು ಪಡೆದುಕೊಳ್ಳದೆ ಏಕಪಕ್ಷೀಯವಾಗಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಿ ಮತದಾನದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಮತದಾನ ದೇಶದ ಪ್ರಜೆಯ ಹಕ್ಕಾಗಿದ್ದು, ಅದು ಅವರ ಸ್ವಾತಂತ್ರö್ಯವಾಗಿದೆ. ಆದರೆ ದೇಶವನ್ನು ಅದೋಗತಿಗೆ ಕೊಂಡೊಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರುಗಳು ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ. ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಈ ಬಗ್ಗೆ ಆಕ್ಷೇಪ ಸಲ್ಲಿಸಿದ್ದರೂ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಪ್ರಜೆಗಳ ಮತ ಕಸಿಯುವ ವ್ಯವಸ್ಥೆ ಮೂಲಕ ಹಿಂಬಾಗಿಲಿನಿAದ ಚುನಾವಣೆ ಗೆಲ್ಲುವ ಪ್ರಯತ್ನ ಮಾಡಲಾಗುತ್ತಿದೆ. ಫಾರಂ ೬ರಡಿ ಕೂಡ ಆಕ್ಷೇಪ ಸಲ್ಲಿಸಲು ಕೂಡ ಅವಕಾಶ ನೀಡದಿರುವ ಆಯುಕ್ತರಾದ ಜ್ಞಾನೇಶ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಹಾಗೂ ಅವರನ್ನು ಬಂದಿಸಬೇಕೆAದು ಆಗ್ರಹಿಸಿದರು.

ಎಸ್‌ಐಆರ್ ಪ್ರಕ್ರಿಯೆ ಮತದಾರರಿಗೆ ಮಾಡುತ್ತಿರುವ ದ್ರೋಹ ಹಾಗೂ ಘೋರ ಅನ್ಯಾಯವಾಗಿದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು ಜನರು ಕೂಡ ಎಚ್ಚೆತ್ತುಕೊಂಡು ಸಹಕಾರ ನೀಡಬೇಕೆಂದು ಹೇಳಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ವಕ್ತಾರ ತೆನ್ನಿರ ಮೈನಾ, ಮಾಧ್ಯಮ ಸಂವಹನ ವಕ್ತಾರ ಟಿ.ಪಿ. ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಹಂಸ, ಇಸ್ಮಾಯಿಲ್, ನಗರ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಮಹಿಳಾ ಅಧ್ಯಕ್ಷೆ ಶಶಿಕಲಾ, ಪ್ರಮುಖರುಗಳಾದ ನಾಪಂಡ ಮುತ್ತಪ್ಪ, ಮುನೀರ್ ಅಹಮದ್, ಅಂಬೆಕಲ್ ನವೀನ್ ಕುಶಾಲಪ್ಪ, ಅಬ್ದುಲ್ ರಝಾಕ್, ಸ್ನೇಕ್ ಪೆರೇರಾ, ಮಂಜುನಾಥ್ ಗುಂಡೂರಾವ್, ಮಂದ್ರಿರ ಮೋಹನ್‌ದಾಸ್, ಪಿ.ಎಂ. ಲತೀಫ್, ವಿ.ಕೆ. ಸತೀಶ್, ಶಭರೀಶ್ ಶೆಟ್ಟಿ, ಲೀಲಾ ಶೇಷಮ್ಮ, ಫ್ಯಾನ್ಸಿ ಬೆಳ್ಯಪ್ಪ, ಜುಲೇಕಾಬಿ, ಮಂಡಿರ ಸದಾ ಮುದ್ದಪ್ಪ, ಕವನ್ ಕೊತ್ತೋಳಿ, ದಿನೇಶ್ ಶೆಟ್ಟಿ, ಕೋಚನ ಚೇತನ್, ಮುದ್ದುರಾಜ್, ಲವ ನಾಣಯ್ಯ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.