ಮಡಿಕೇರಿ, ಸೆ. ೨೭: ಭಾರತೀಯ ಹಾಕಿ ತಂಡದ ಮಾಜಿ ಕೋಚ್ ಮತ್ತು ಪ್ರಸ್ತುತ ಒಡಿಶಾದ ಕ್ರೀಡಾ ಮತ್ತು ಯುವಜನ ಸೇವೆಗಳ ಇಲಾಖೆಯಲ್ಲಿ ಕೋಚಿಂಗ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಕೊಡಗಿನವರಾದ ಬೊಳ್ಳೆಪಂಡ ಜೆ. ಕಾರ್ಯಪ್ಪ ಅವರು,

ಆಸ್ಟೆçÃಲಿಯಾದಲ್ಲಿ ನಡೆಯಲಿರುವ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ‘ಹಾಕಿ ಒನ್ ಲೀಗ್ ೨೦೨೬'ರ ಟೂರ್ನಿಯಲ್ಲಿ ಮೆಲ್ಬೋರ್ನ್ ಕೋಬ್ರಾಸ್ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

ಹಾಕಿ ಒನ್ ಲೀಗ್, ಆಸ್ಟೆçÃಲಿಯಾದ ಪ್ರಖ್ಯಾತ ಹಾಕಿ ಟೂರ್ನಿಯಾಗಿದ್ದು, ಅಕ್ಟೋಬರ್ ೮ ರಿಂದ ಡಿಸೆಂಬರ್ ೬ ರವರೆಗೆ ನಡೆಯುವ ಈ ಟೂರ್ನಿಯಲ್ಲಿ ಮೆಲ್ಬೋರ್ನ್ ಕೋಬ್ರಾಸ್ ತಂಡವು ಹೊಸ ತಂಡವಾಗಿದ್ದು ಇದರ ತರಬೇತುದಾರರಾಗಿ ಕಾರ್ಯಪ್ಪ ಅವರು ಕಾರ್ಯನಿರ್ವಹಿಸಲಿದ್ದಾರೆ.