ಮಡಿಕೇರಿ, ಸೆ. ೨೭: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನ ಸ್ಕಾ÷್ವಶ್ ಪಂದ್ಯಾವಳಿಯಲ್ಲಿ ಕಂಚಿನ ಪದಕದ ಸಾಧನೆ ತೋರಿರುವ ಹಿರಿಯ ಕ್ರೀಡಾ ತಾರೆ ಕೊಡಗಿನವರಾದ ಕುಟ್ಟಂಡ ಜೋಶ್ನಾ ಚಿಣ್ಣಪ್ಪ ಅವರಿಗೆ ತಮಿಳುನಾಡು ಸರಕಾರ ರೂ. ೩೦ ಲಕ್ಷದ ಕೊಡುಗೆಯನ್ನು ಪ್ರಕಟಿಸುವ ಮೂಲಕ ಅಭಿನಂದಿಸಿದೆ.
ಜೋಶ್ನಾ ಹಾಗೂ ಇವರೊಂದಿಗೆ ಮಿಕ್ಸೆಡ್ ಡಬಲ್ಸ್ನಲ್ಲಿ ಪದಕ ಪಡೆದಿರುವ ವೇಲವನ್ ಅವರುಗಳ ಸಾಧನೆ ಯುವಜನರಿಗೆ ಮಾದರಿಯಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಶ್ಲಾಘಿಸಿದ್ದಾರೆ. ಇಬ್ಬರು ಸ್ಕಾ÷್ವಶ್ ಪಟುಗಳು ಭಾರತ ಹಾಗೂ ತಮಿಳುನಾಡಿಗೆ ಕೀರ್ತಿ ತಂದಿದ್ದಾರೆ. ಜೋಶ್ನಾ ಅವರು ಈ ಬಾರಿಯೂ ಕಂಚಿನ ಪದಕದ ಸಾಧನೆ ಮಾಡಿದ್ದು, ಇವರು ಏಷ್ಯನ್ ಗೇಮ್ಸ್ನಲ್ಲಿ ಈತನಕ ತೋರಿರುವ ಸಾಧನೆಗೆ ಇದು ಮತ್ತೊಂದು ಗರಿಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಕ್ರೀಡಾ ಸಚಿವ ಅಡನ್ ಅರ್ಜುನ್ ಅವರೂ ಈ ಜೋಡಿಯ ಸಾಧನೆಯನ್ನು ಅಭಿನಂದಿಸಿದ್ದು, ಸರಕಾರದ ಕೊಡುಗೆ ಬಗ್ಗೆ ಮಾಹಿತಿ ನೀಡಿದ್ದಾರೆ.