ಐಗೂರು: ಐಗೂರಿನ ಭಗತ್ ಸಿಂಗ್ ರಾಷ್ಟçಪ್ರೇಮಿ ಯುವಕ ಸಂಘದ ವತಿಯಿಂದ ೩ನೇ ವರ್ಷದ ಗೌರಿ ಗಣೇಶ ವಿಸರ್ಜನೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಉತ್ಸವದ ಅಂಗವಾಗಿ ಗಣೇಶ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ, ಮುತ್ತಪ್ಪ ದೇವಾಲಯದಿಂದ ವಿಜಯನಗರದವರೆಗೆ ಬೃಹತ್ ಶೋಭಾಯಾತ್ರೆ ನಡೆಸಲಾಯಿತು. ಸುಳ್ಯದ ನಾಸಿಕ್ ಬ್ಯಾಂಡ್ ತಂಡದ ವಾದ್ಯ ವೈಭವ ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಿತು.

ಉತ್ಸವದ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಮಾಜಿ ಸೈನಿಕ ಅಶೋಕ್ ಕುಮಾರ್, ಪತ್ರಕರ್ತ ಸುಕುಮಾರ್ ಹಾಗೂ ಕಾಜೂರಿನ ಪಿ.ಜಿ. ಪ್ರಭಾಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅರ್ಚಕ ಪುರುಷೋತ್ತಮ ಅವರು ಪೂಜಾ ಕೈಂಕರ್ಯ ನೆರವೇರಿಸಿದ ಬಳಿಕ ಚೋರನ ಹೊಳೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಎಂಟು ದಿನಗಳ ಕಾಲ ವಿಶೇಷ ಪೂಜೆ ಹಾಗೂ ಅನ್ನದಾನ ಕಾರ್ಯಕ್ರಮ ನಡೆಯಿತು. ವಿಸರ್ಜನೋತ್ಸವದ ಸಂದರ್ಭದಲ್ಲಿ ಸೋಮವಾರಪೇಟೆ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.