ಮಡಿಕೇರಿ, ಸೆ. ೨೩: ವೀರಾಜಪೇಟೆ ನಗರದಲ್ಲಿ ತಾ. ೨೫ ರಂದು ಗೌರಿ ಗಣೇಶ ವಿಸರ್ಜನೋತ್ಸವ ಹಿನ್ನೆಲೆ ತಾ. ೨೬ ರಂದು ವೀರಾಜಪೇಟೆ ಪುರಸಭೆ ವ್ಯಾಪ್ತಿಯ ಸರಕಾರಿ, ಅನುದಾನಿತ, ಅನುದಾನರಹಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ೧ನೇ ತರಗತಿಯಿಂದ ೯ನೇ ತರಗತಿಯವರಗಿನ ಶಾಲೆಗಳಿಗೆ ರಜೆ ಘೋಷಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶಿಸಿದ್ದಾರೆ. ವಿಸರ್ಜನೋತ್ಸವದಲ್ಲಿ ಶಾಲಾ ಮಕ್ಕಳು ಭಾಗವಹಿ ಸುವುದರಿಂದ ರಜೆ ನೀಡುವಂತೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಮೌಖಿಕ ಸೂಚನೆಯನ್ವಯ ಈ ಆದೇಶ ಹೊರಡಿಸಲಾಗಿದೆ.