ವೀರಾಜಪೇಟೆ, ಸೆ. ೨೩: ಕಾವೇರಿ ಗಣೇಶೋತ್ಸವ ಸಮಿತಿಯ ವತಿಯಿಂದ ವೀರಾಜಪೇಟೆಯಲ್ಲಿ ಅತ್ಯಂತ ವಿಜೃಂಭಣೆ ಹಾಗೂ ಸಡಗರದಿಂದ ಆಚರಿಸಲ್ಪಡುತ್ತಿರುವ ೩೬ನೇ ವರ್ಷದ ಗೌರಿ - ಗಣೇಶೋತ್ಸವದ ಸಮಾರೋಪ ಸಮಾರಂಭ ಹಾಗೂ ಸಭಾ ಕಾರ್ಯಕ್ರಮ ತಾ. ೨೫ ರಂದು ರಾತ್ರಿ ೭ ಗಂಟೆಗೆ ಮೂರ್ನಾಡು ರಸ್ತೆಯ ಭವ್ಯ ವೇದಿಕೆಯಲ್ಲಿ ವಿಶಿಷ್ಟ ರೀತಿಯಲ್ಲಿ ಜರುಗಲಿದೆ. ಈ ಐತಿಹಾಸಿಕ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ರಾಜ್ಯದ ಖ್ಯಾತ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಘು ಸಕಲೇಶಪುರ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ನಂಬುಡುಮಾಡ ಆನಂದ್ ನಂಜಪ್ಪ ತಿಳಿಸಿದರು.
ನಗರದ ಖಾಸಗಿ ಹೊಟೇಲ್ನಲ್ಲಿ ಕಾವೇರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ನಂಬುಡುಮಾಡ ಆನಂದ್ ನಂಜಪ್ಪ, ಕಳೆದ ೩೫ ವರ್ಷಗಳಿಂದ ನಿರಂತರವಾಗಿ ಅತ್ಯಂತ ಅಚ್ಚುಕಟ್ಟಾಗಿ ಸಾಂಸ್ಕöÈತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಅದೇ ಸಂಪ್ರದಾಯದAತೆ ಈ ವರ್ಷವೂ ಸಹ ಗೌರಿ - ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆಯಿAದ ಆಚರಿಸಲಾಗುತ್ತಿದ್ದು, ಕೊನೆಯ ದಿನ ನಡೆಯುವ ಬೃಹತ್ ಸಭಾ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಹಾಗೂ ಹಿರಿಯರಿಗೆ ಯಾವುದೇ ರೀತಿಯ ಅಡಚಣೆ ಉಂಟಾಗದAತೆ ಎಚ್ಚರಿಕೆ ವಹಿಸಲಾಗಿದೆ. ಎಲ್ಲರಿಗೂ ಸುಲಭವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಮೂರ್ನಾಡು ರಸ್ತೆಯಲ್ಲಿ ವಿಶೇಷ ಬೃಹತ್ ಎಲ್.ಇ.ಡಿ ಪರದೆಯನ್ನು ಅಳವಡಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಸ್ವಾಗತ ಮತ್ತು ಮೆರವಣಿಗೆಯ ರೂಪುರೇಷೆಗಳ ಬಗ್ಗೆ ಮಾತನಾಡಿದ ಸಮಿತಿಯ ಕಾರ್ಯದರ್ಶಿ ದರ್ಶನ್, ನಗರದ ಪ್ರಮುಖ ಭಾಗವಾದ ಚೌಕಿಯಲ್ಲಿ ಅತಿಥಿಗಳಿಗೆ ಪರಂಪರೆಯAತೆ ಭವ್ಯ ಸ್ವಾಗತವನ್ನು ಕೋರಲಾಗುವುದು. ಅಲ್ಲಿಂದ ವಿಶೇಷ ಮೆರವಣಿಗೆಯ ಮೂಲಕ ಬಸನಗೌಡ ಪಾಟೀಲ್ ಯತ್ನಾಲ್ ಹಾಗೂ ಇತರ ಗಣ್ಯರನ್ನು ಗೌರವಪೂರ್ವಕವಾಗಿ ವೇದಿಕೆಗೆ ಬರಮಾಡಿಕೊಳ್ಳಲಾಗುವುದು ಎಂದು ಸಿದ್ಧತೆಗಳ ಹೆಜ್ಜೆಗಳನ್ನು ವಿವರಿಸಿದರು.
ಉತ್ಸವದ ಕಳೆಗಟ್ಟುವಿಕೆಗೆ ಮತ್ತಷ್ಟು ಮೆರುಗು ನೀಡುವ ಸಾಂಸ್ಕöÈತಿಕ ಕಾರ್ಯಕ್ರಮಗಳ ರೂಪುರೇಷೆಗಳ ಕುರಿತು ಸಾಂಸ್ಕöÈತಿಕ ಕಾರ್ಯಕ್ರಮದ ಪ್ರಮುಖರಾದ ಚೇತನ್ ಶಿವಪ್ಪ ಮಾತನಾಡಿ, ಈ ವರ್ಷದ ಉತ್ಸವದ ಕೊನೆಯ ದಿನದಂದು ಸಾರ್ವಜನಿಕರನ್ನು ಮಂತ್ರಮುಗ್ಧರನ್ನಾಗಿಸುವ ಅತ್ಯಕರ್ಷಕ ಸಾಂಸ್ಕöÈತಿಕ ಹಾಗೂ ಭಕ್ತಿಪ್ರಧಾನ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಅಂದವಾಗಿ ಮೂಡಿಬರಲಿದ್ದು, ಆಗಮಿಸುವ ಪ್ರತಿಯೊಬ್ಬರಿಗೂ ಇದು ಸ್ಮರಣೀಯ ಅನುಭವ ನೀಡಲಿದೆ ಎಂದು ತಿಳಿಸಿದರು. ಈ ಮಹತ್ವದ ಪೂರ್ವ ಸಿದ್ಧತಾ ಸಭೆಯಲ್ಲಿ ಸಹ ಕಾರ್ಯದರ್ಶಿ ಕಿರಣ್ ಕುಮಾರ್ ಹಾಗೂ ಸಮಿತಿಯ ಎಲ್ಲಾ ಪ್ರಮುಖ ಪದಾಧಿಕಾರಿಗಳು, ಸಮಿತಿಯ ಸದಸ್ಯರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಬೇಕಾದ ವಿವಿಧ ಜವಾಬ್ದಾರಿಗಳ ಕುರಿತು ವಿಸ್ತöÈತ ಚರ್ಚೆ ನಡೆಸಿದರು.