ಮಡಿಕೇರಿ, ಸೆ. ೨೨: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ, ಮಡಿಕೇರಿಯಲ್ಲಿ ೨೦೨೬-೨೭ ನೇ ಸಾಲಿನ ಜುಲೈ ಆವೃತ್ತಿಯ ವಿವಿಧ ಕೋರ್ಸ್ಗಳಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ

ಕ.ರಾ.ಮು.ವಿ ಮಡಿಕೇರಿಯಲ್ಲಿ ೨೦೨೬-೨೭ ಸಾಲಿನ ಜುಲೈ ಪ್ರವೇಶಾತಿಯು ಅಕ್ಟೋಬರ್ ೧೩ ರವರೆಗೆ ವಿಸ್ತರಿಸಲಾಗಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ತನ್ನ ೨೦೨೬-೨೭ನೇ ಜುಲೈ ಆವೃತ್ತಿಗೆ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಪ್ರವೇಶಾತಿಗೆ ಈಗಾಗಲೇ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.

ಸ್ನಾತಕ ಶಿಕ್ಷಣ ಕಾರ್ಯಕ್ರಮಗಳ ಅಡಿಯಲ್ಲಿ ಬರುವ ಬಿ.ಎ, ಬಿಕಾಂ, ಬಿಲಿಬ್ ಐಎಸ್ಸಿ, ಬಿಬಿಎ, ಬಿಸಿಎ, ಬಿಎಸ್ಸಿ, ಬಿಎಸ್‌ಡಬ್ಲ್ಯೂ ಹಾಗು ಸ್ನಾತಕೋತ್ತರ ಪಿ.ಜಿ. ಕೋರ್ಸ್ಗಳಾದ ಎಂಎ, ಎಂಎ-ಪತ್ರಿಕೋದ್ಯಮ, ಎಂಕಾA, ಎಂಬಿಎ, ಎಂಲಿಬ್‌ಐಎಸ್ಸಿ, ಎಂಎಸ್ಸಿ, ಎಂಸಿಎ, ಎಂಎಸ್‌ಡಬ್ಲೂ (ಪಿ.ಜಿ. ಡಿಪ್ಲೋಮಾ ಪ್ರೋಗ್ರಾಮ್ಸ್ ಸರ್ಟಿಫಿಕೇಟ್ ಪ್ರೋಗ್ರಾಮ್ಸ್) ೨೦೨೬-೨೭ ರ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯಿಂದ ಹೊಸದಾಗಿ ಪ್ರಾರಂಭಿಸಿರುವ ಜ್ಯೋತಿರ್ ವಿಜ್ಞಾನ ಮತ್ತು ಲಿಂಗ್ವಿಸ್ಟಿಕ್ಸ್ ಕೋರ್ಸ್ಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ.

ಪ್ರವೇಶಾತಿಗೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಜೆರಾಕ್ಸ್, ಪಿಯುಸಿ ಅಥವಾ ತತ್ಸಮಾನ ಅಂಕಪಟ್ಟಿ ಪ್ರತಿ. ಪದವಿ ಅಂಕಪಟ್ಟಿ ಪ್ರತಿ (ಎಲ್ಲಾ ವರ್ಷಗಳ ಅಥವಾ ಎಲ್ಲಾ ಸೆಮಿಸ್ಟರ್‌ಗಳು), ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆ ವಿವರಗಳು, ಬ್ಯಾಂಕ್ ಖಾತೆ ಸಂಖ್ಯೆ, ಬ್ಯಾಂಕ್ ಖಾತೆ ಹೋಲ್ಡರ್ ಹೆಸರು, ಬ್ಯಾಂಕ್ನ ಹೆಸರು, ಐಎಫ್‌ಎಸ್‌ಸಿ ಕೋಡ್, ನಾಲ್ಕು ಫೋಟೋಗಳು, ದೂರವಾಣಿ ಸಂಖ್ಯೆ, ವಿದ್ಯಾರ್ಥಿ ಇ-ಮೇಲ್ ಐಡಿ, ಬಿಪಿಎಲ್ ಕಾರ್ಡ್ (ಮಹಿಳೆಯರಿಗೆ ಮಾತ್ರ). ಎಟಿಎಂ ಕಾರ್ಡ್ / ಫೋನ್ ಪೇ / ಗೂಗಲ್ ಪೇ / ನೆಟ್ ಬ್ಯಾಂಕಿAಗ್ - ಶುಲ್ಕ ಪಾವತಿಗಾಗಿ, ದ್ವಿತೀಯ ಮತ್ತು ಅಂತಿಮ ತರಗತಿಗಳ ಪ್ರವೇಶಾತಿ ನವೀಕರಣ ಶುಲ್ಕವನ್ನು ಪಾವತಿಸುವ ಕುರಿತು ದಾಖಲೆಗಳು ಕಡ್ಡಾಯವಾಗಿದೆ.

೨೦೨೪-೨೫ ಮತ್ತು ೨೦೨೫-೨೬ ನೇ ಜುಲೈ ಆವೃತ್ತಿಯಲ್ಲಿ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಸಿ, ಬಿಎಸ್‌ಡಬ್ಲ್ಯೂ ಹಾಗು ಸ್ನಾತಕೋತ್ತರ ಪಿಜಿ. ಕೋರ್ಸ್ಗಳಾದ ಎಂಎ, ಎಂಎ-ಪತ್ರಿಕೋದ್ಯಮ, ಎಂ.ಕಾA, ಎಂ.ಬಿ.ಎ, ಎಂ.ಎಸ್ಸಿ, ಎಂ.ಸಿ.ಎ, ಎಂ.ಎಸ್.ಡಬ್ಲೂ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ದ್ವಿತೀಯ ಮತ್ತು ಅಂತಿಮ ತರಗತಿಗಳ ಪ್ರವೇಶಾತಿ ನವೀಕರಣ ಶುಲ್ಕವನ್ನು ದಂಡ ಶುಲ್ಕವಿಲ್ಲದೆ ಪಾವತಿಸಲು ಸೆಪ್ಟೆಂಬರ್ ೨೫ ಕೊನೆಯ ದಿನವಾಗಿದೆ. ೨೦೦ ರೂ. ದಂಡದೊಡನೆ ಅಕ್ಟೋಬರ್ ೧೬ ಕೊನೆಯ ದಿನವಾಗಿದೆ. ೪೦೦ ರೂ. ದಂಡದೊಡನೆ ಅಕ್ಟೋಬರ್, ೩೧ ಕೊನೆಯ ದಿನವಾಗಿದೆ.

ಪರೀಕ್ಷಾ ಶುಲ್ಕ ಪಾವತಿಸುವ ಕುರಿತು ದಂಡ ಶುಲ್ಕವಿಲ್ಲದೆ ಸೆಪ್ಟೆಂಬರ್ ೧೮ ಕೊನೆಯ ದಿನವಾಗಿದೆ. ೨೦೦ ರೂ ದಂಡ ಶುಲ್ಕದೊಡನೆ ಸೆಪ್ಟೆಂಬರ್ ೨೫ ಕೊನೆಯ ದಿನವಾಗಿದೆ. ಈ ಪರೀಕ್ಷೆಗಳನ್ನು ಅಕ್ಟೋಬರ್ ಮಾಹೆಯಲ್ಲಿ ನಡೆಸಲಾಗುವುದು.

ಹೆಚ್ಚಿನ ಮಾಹಿತಿಗೆ ಮಡಿಕೇರಿ ಜೂನಿಯರ್ ಕಾಲೇಜು ಆವರಣದ ಭವನದಲ್ಲಿರುವ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ ಮತ್ತು ೮೨೯೬೨೧೫೭೧೪, ೯೪೮೩೫೭೦೯೦೦, ೯೮೪೪೩೯೫೯೮೬ ದೂರವಾಣಿಯ ಮುಖಾಂತರ ವಿವರ ಪಡೆಯಬಹುದಾಗಿದೆ ಎಂದು ಕೇಂದ್ರದ ಪ್ರಾದೇಶಿಕ ನಿರ್ದೇಶಕಿ ಸ್ಮಿತಾಸುಬ್ಬಯ್ಯ ತಿಳಿಸಿದ್ದಾರೆ.