ಕಡಂಗ, ಸೆ. ೨೩: ನೂರುಲ್ ಹುದಾ ಮದರಸ ಗೋಣಿಕೊಪ್ಪ ಆವರಣದಲ್ಲಿ ಬೆಳಿಗ್ಗೆ ೭ ಗಂಟೆಗೆ ಸಮಸ್ತ ಪ್ರಾರ್ಥನ ದಿನಾಚರಣೆಯನ್ನು ಜಮಾಅತ್ ಅಧ್ಯಕ್ಷರಾದ ಅಬ್ದುಲ್ ನಾಸರ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಎನ್ಎಚ್ಎಂ ಪ್ರಾಂಶುಪಾಲ ರಿಯಾಜ್ ಬಾಖವಿ ಸ್ವಾಗತ ಕೋರಿದರು. ಸಮಸ್ತ ನಡೆದು ಬಂದ ದಾರಿ ಮತ್ತು ಸಮುದಾಯಕ್ಕೆ ನೀಡಿದ ಕೊಡುಗೆಯನ್ನು ವಿವರಿಸಿದರು. ಸಭೆಯ ಉದ್ಘಾಟನೆ ಭಾಷಣವನ್ನು ಖತೀಬ್ ಮುಹಮ್ಮದ್ ಅಲಿ ಫೈಝಿ ನಿರ್ವಹಿಸಿದರು.
ಜಮಾಅತ್ ಕಾರ್ಯದರ್ಶಿ ಅಬ್ದುಲ್ ಸಮದ್, ಮದರಸ ಕನ್ವೀನರ್ ಸಲಾಂ, ಜಮಾಅತ್ ಉಪಾಧ್ಯಕ್ಷ ರಷೀದ್ ಶುಭ ಕೋರಿದರು, ಸಭೆಯಲ್ಲಿ ಖಾದರ್ ಮುಸ್ಲಿಯಾರ್, ಅಶ್ರಫ್ ಮುಸ್ಲಿಯಾರ್, ಮಜೀದ್ ಬಾಖವಿ, ಗಫೂರ್ ಬಾಖವಿ, ಶಫೀಕ್ ದಾರಿಮಿ, ಮುಜೀಬ್ ಅಜ್ಹರಿ ಅಜೀಜ್ ಬಾಖವಿ, ಸಮಸ್ತ ಕಾರ್ಯಕರ್ತರು, ಮದರಸ ವಿದ್ಯಾರ್ಥಿಗಳು ಹಾಜರಿದ್ದರು.