ಗೋಣಿಕೊಪ್ಪ, ಸೆ.೨೩: ಗೋಣಿಕೊಪ್ಪ ದಸರಾ ಆಚರಣೆಯ ಅಂಗವಾಗಿ ವಿಜಯದಶಮಿಯಂದು ನಡೆಯಲಿರುವ ಸ್ತಬ್ಧಚಿತ್ರ ಮೆರವಣಿಗೆ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಒಟ್ಟು ರೂ. ೧ ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ನಾಡಹಬ್ಬ ದಸರಾ ಸಮಿತಿ ಗೌರವಾಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ ೨೧ರಂದು ನಡೆಯಲಿರುವ ಸ್ತಬ್ಧಚಿತ್ರ ಮೆರವಣಿಗೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ರೂ. ೫೦ ಸಾವಿರ, ದ್ವಿತೀಯ ಬಹುಮಾನ ರೂ. ೩೦ ಸಾವಿರ ಹಾಗೂ ತೃತೀಯ ಬಹುಮಾನವಾಗಿ ರೂ. ೨೦ ಸಾವಿರ ನೀಡಲಾಗುವುದು ಎಂದು ತಿಳಿಸಿದರು.
ಸ್ತಬ್ಧಚಿತ್ರ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಉತ್ತಮ ನಗದು ಬಹುಮಾನ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ, ಭಾಗವಹಿಸುವ ಎಲ್ಲ ಸ್ತಬ್ಧಚಿತ್ರಗಳಿಗೆ ತಲಾ ೫ ಸಾವಿರ ಸಮಾಧಾನಕರ ಬಹುಮಾನ ಹಾಗೂ ಪ್ರೋತ್ಸಾಹಧನ ನೀಡಲಾಗುವುದು. ಇದರಿಂದ ಸ್ತಬ್ಧಚಿತ್ರ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಸರಿದೂಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂಬ ವಿಶ್ವಾಸವಿದೆ ಎಂದರು.
ಸಾಮಾಜಿಕ ಸಂದೇಶ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಸ್ತಬ್ಧಚಿತ್ರಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಒಂದೇ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.
ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಿಂದ ಮಧ್ಯಾಹ್ನ ೨ ಗಂಟೆಗೆ ಮೆರವಣಿಗೆ ಆರಂಭಗೊಳ್ಳಲಿದೆ. ಸ್ಪರ್ಧಿಗಳು ಮಧ್ಯಾಹ್ನ ೧ ಗಂಟೆಗೆ ಕಡ್ಡಾಯವಾಗಿ ಆವರಣದಲ್ಲಿ ಹಾಜರಿರಬೇಕು. ಭಾಗವಹಿಸುವ ತಂಡಗಳು ಸ್ಪರ್ಧಾ ದಿನಕ್ಕೂ ಮುನ್ನ ತಮ್ಮ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಸಮಿತಿ ಅಧ್ಯಕ್ಷ ಕಂಜಿತAಡ ಪ್ರವೀಣ್ ಕುಶಾಲಪ್ಪ ಮಾತನಾಡಿ, ಸ್ತಬ್ಧಚಿತ್ರ ನಿರ್ಮಾಣಕ್ಕೂ ಮುನ್ನ ಸಮಿತಿ ಪ್ರಮುಖರೊಂದಿಗೆ ಚರ್ಚಿಸಿ ಚಿತ್ರ ರೂಪಿಸುವುದರಿಂದ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಹಾಗೂ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗಲಿದೆ. ಆದ್ದರಿಂದ ಸ್ಪರ್ಧಿಗಳು ಸಮಿತಿಯ ಸಲಹೆ ಪಡೆದು ಸ್ತಬ್ಧಚಿತ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ೯೪೪೯೮೧೩೩೦೦, ೯೪೪೮೩೧೧೦೮೧, ೯೯೦೦೯೧೦೯೨೬ ಸಂಖ್ಯೆಯನ್ನು ಸಂಪರ್ಕಿಸುವAತೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಸುದರ್ಶನ್ ಬಾರಿತ್ತಾಯ, ಉಪಾಧ್ಯಕ್ಷ ಸುನಿಲ್ ಪ್ರಭಾಕರ್, ಖಜಾಂಚಿ ಲಕ್ಷö್ಮಣ, ಸಹ ಕಾರ್ಯದರ್ಶಿ ದಿನೇಶ್ ಹಾಗೂ ಪ್ರಮುಖರಾದ ಮಣಿ, ನಾರಾಯಣ ಸ್ವಾಮಿ ನಾಯ್ಡು, ಪ್ರವೀಣ್ ಪೂಜಾರಿ ಉಪಸ್ಥಿತರಿದ್ದರು.