ವೀರಾಜಪೇಟೆ, ಸೆ. ೨೩: ವೀರಾಜಪೇಟೆ ಮಾಜಿ ಸೈನಿಕರ ಸಹಕಾರ ಸಂಘದ ವತಿಯಿಂದ ದೇಶದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರು ಹಾಗೂ ದಿವಂಗತ ಮಾಜಿ ಯೋಧರಿಗೆ ತಾಲೂಕು ಕಚೇರಿ ಮುಂಭಾಗದಲ್ಲಿರುವ ಯೋಧರ ಸ್ಮಾರಕ ಸ್ತಂಭದ ಆವರಣದಲ್ಲಿ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷÀ ಚಪ್ಪಂಡ ಹರೀಶ್ ಉತ್ತಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜಿಲ್ಲಾ ಸಶಸ್ತç ಪೊಲೀಸ್ ತುಕಡಿಯ ಗೌರವದೊಂದಿಗೆ ಹುತಾತ್ಮ ಯೋಧರ ಸ್ಮಾರಕಕ್ಕೆ ದೇಶದ ಸಾರ್ವಭೌಮತೆ ಹಾಗೂ ರಕ್ಷಣೆಗಾಗಿ ತಮ್ಮ ಅಮೂಲ್ಯ ಪ್ರಾಣವನ್ನು ತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸಿ, ಲೆಪ್ಟಿನೆಂಟ್ ಕರ್ನಲ್ ಅಜ್ಜಿನಿಕಂಡ ಬೆಳ್ಳಿಯಪ್ಪ ಚಂಗಪ್ಪ, ತಹಶೀಲ್ದಾರ್ ಪ್ರವೀಣ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಪಟ್ಟಚೆರುವಂಡ ಕೆ.ನಾಚಪ್ಪ, ಎಸ್.ಎಂ.ಎಸ್ ವಿದ್ಯಾಸಂಸ್ಥೆ, ಅರಮೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮಿಜಿ, ರೋಟರಿ ವಿದ್ಯಾಸಂಸ್ಥೆ, ಕೊಡವ ಸಮಾಜದ ಅಧ್ಯಕ್ಷರಾದ ಅಮ್ಮಣಿಚಂಡ ರವಿ ಉತ್ತಪ್ಪ, ಕರ್ನಾಟಕ ಸಂಘದ ಅಧ್ಯಕ್ಷ ಬೆಲ್ಲು ಬೋಪಯ್ಯ, ಪೊಲೀಸ್ ಡಿವೈಎಸ್ಪಿ ಮಹೇಶ್ ಕುಮಾರ್, ಕರ್ನಾಟಕ ಮಾಜಿ ಸೈನಿಕರ ಸಂಘ, ಪಾಲಿಕ್ಲಿನಿಕ್ನ ಜೆನ್ನಿ ಪೌಲ್ ಹಾಗೂ ವೀರಾಜಪೇಟೆಯ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಸುಮೇಶ್ ಹಾಗೂ ಪದಾಧಿಕಾರಿಗಳು, ವೀರಾಜಪೇಟೆ ನಗರ ವರ್ತಕರ ಸಂಘದ ಅಧ್ಯಕ್ಷ ಪಿ.ಎ. ಮಂಜುನಾಥ್ ಮತ್ತು ಪದಾಧಿಕಾರಿಗಳು, ಚಾಲೆಂಜಿAಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಬಳಗದ ಅಧ್ಯಕ್ಷ ಯೋಗೆಶ್ ನಾಯ್ಡು, ರಾವುಫ್, ಟಿ.ಎನ್. ಮಂಜುನಾಥ್, ಕೊಡವ ಮುಸ್ಲಿಂ ಅಸೋಷಿಯೇಷನ್ ಅಧ್ಯಕ್ಷ ದುದ್ದಿಯಡ ಸೂಫಿ, ಎಸ್ ಎಂಎಸ್ ಶಾಲೆಯ ಸ್ಕೌಟ್ ಮತ್ತು ಗೈಡ್, ಎನ್ಸಿಸಿ ವಿದ್ಯಾರ್ಥಿಗಳು, ಪ್ರಗತಿ, ವಿನಾಯಕ, ಕಾವೇರಿ, ರೋಟರಿ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ವಿರಾಜಪೇಟೆಯ ನಾನಾ ಸಂಘಟನೆಗಳ ಮುಖಂಡರು, ಹೆಗ್ಗಡೆ ಸಮಾಜ, ವೀರಾಜಪೇಟೆ ಪತ್ರಕರ್ತರ ಸಂಘದ ಸದಸ್ಯರು ಮತ್ತಿತರರು ಪುಷ್ಟಗುಚ್ಚ ಇರಿಸಿ ಪುಷ್ಪನಮನ ಸಲ್ಲಿಸಿದರು. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಎಸ್.ಚಂದ್ರಶೇಖರ್, ಕಾರ್ಯದರ್ಶಿ ಪುಗ್ಗೇರ ಎಸ್.ನಂದಾ, ಖಜಾಂಚಿ ತೋರೆರ ಪೂವಯ್ಯ, ನಿರ್ದೇಶಕರುಗಳಾದ ಚೇಂದ್ರಿಮಾಡ ಕೆ.ನಂಜಪ್ಪ, ಪಟ್ರಪಂಡ ಎಂ.ಕರುAಬಯ್ಯ , ಎನ್.ಚಂಗಪ್ಪ, ಎಂ.ಕೆ. ಸಲಾಂ ಕಡಂಗ, ಕೊಂಗAಡ ಎ.ಭೀಮಯ್ಯ, ಕಬ್ಬಚ್ಚೀರ ಕೆ.ಬೋಪಣ್ಣ, ಅಣ್ಣಳಮಡ ಡಿ.ಸುಬ್ಬಯ್ಯ, ಬಾಳೆಕುಟ್ಟಿರ ಎ.ಬೋಪಯ್ಯ, ಹೆಚ್.ಕೆ.ಅಪ್ಪಯ್ಯ ಹಾಜರಿದ್ದರು.
ಮಾಜಿ ಸೈನಿಕರಾದ ಎಂ.ಕೆ.ಸಲಾA ಕಡಂಗ ಅವರ ಮಕ್ಕಳಾದ ಎಂ.ಎಸ್.ಶಹಲ್ಲಾ, ಎಂ.ಎಸ್.ನಹಲ್ಲಾ ಮತ್ತು ಎಂ.ಎಸ್.ಸಾದಿಲ್ ಅವರುಗಳು ದೇಶ ಭಕ್ತಿಯ ಪ್ರತಿಬಿಂಬಿಸುವ ಗೀತೆಗಳನ್ನು ಹಾಡಿದರು.