ಮಡಿಕೇರಿ, ಸೆ. ೨೨: ಪೊನ್ನಂಪೇಟೆ ನಗರದಲ್ಲಿ ಸೆ. ೨೩ ರಂದು ಸಂಜೆ ೬ ಗಂಟೆಯಿAದ ಸೆ. ೨೪ರ ಬೆಳಿಗ್ಗೆ ೬ ಗಂಟೆಯವರೆಗೆ ಗಣಪತಿ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಲಾಗಿದೆ.

ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕು ಉಂಟಾಗುವ ಹಾಗೂ ಅಪಘಾತ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಸಾರ್ವಜನಿಕರು ಮತ್ತು ವಾಹನ ಸವಾರರ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಕೊಡಗು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮೈಸೂರಿನಿಂದ -ತಿತಿಮತಿ-ಪೊನ್ನಂಪೇಟೆ ಮಾರ್ಗವಾಗಿ ಕುಟ್ಟ ಕಡೆಗೆ ತೆರಳುವ ವಾಹನಗಳಿಗೆ ತಿತಿಮತಿ, ಪೊನ್ನಪ್ಪಸಂತೆ, ಬಾಳೆಲೆ, ಕಾನೂರು ಮಾರ್ಗವಾಗಿ ಕುಟ್ಟ ಕಡೆಗೆ ಸಂಚರಿಸಬೇಕು.

ಕುಟ್ಟ ಕಡೆಯಿಂದ ಪೊನ್ನಂಪೇಟೆ-ಗೋಣಿಕೊಪ್ಪ-ತಿತಿಮತಿ ಮೈಸೂರು ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳು ಕುಟ್ಟ, ಕಾನೂರು, ಬಾಳೆಲೆ, ಪೊನ್ನಪ್ಪಸಂತೆ, ತಿತಿಮತಿ ಮಾರ್ಗವಾಗಿ ಮೈಸೂರು ಕಡೆಗೆ ತೆರಳಬೇಕು. ಶ್ರೀಮಂಗಲ ಕಡೆಯಿಂದ ಪೊನ್ನಂಪೇಟೆ-ಗೋಣಿಕೊಪ್ಪ-ತಿತಿಮತಿ ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳು ಪೊನ್ನಂಪೇಟೆ ನಗರದ ಕಾನೂರು ಜಂಕ್ಷನ್‌ನಿAದ ಕಾನೂರು, ಬಾಳೆಲೆ, ಪೊನ್ನಪ್ಪಸಂತೆ, ತಿತಿಮತಿ ಮಾರ್ಗವಾಗಿ ಮೈಸೂರು ಕಡೆಗೆ ಸಂಚರಿಸಬೇಕು.

ವೀರಾಜಪೇಟೆ ಕಡೆಯಿಂದ ಕುಟ್ಟ ಕಡೆಗೆ ತೆರಳುವ ವಾಹನಗಳು ಹಾತೂರು ಜಂಕ್ಷನ್, ಕುಂದಾ, ಸಿ.ಐ.ಟಿ. ಕಾಲೇಜು ಜಂಕ್ಷನ್, ಬೇಗೂರು ಮಾರ್ಗವಾಗಿ ಕುಟ್ಟ ಕಡೆಗೆ ಹೋಗುವುದು ಹಾಗೂ ಬರುವುದು.

ಈ ಮೇಲಿನ ಸಂಚಾರ ನಿಯಮಗಳಲ್ಲಿ ಏನಾದರೂ ವ್ಯತ್ಯಾಸ ಅಥವಾ ಮಾರ್ಪಾಡು ಇದ್ದರೆ ಆಯಾಯ ಸ್ಥಳದಲ್ಲಿ ಇರುವ ಪೊಲೀಸರು ನೀಡುವ ನಿರ್ದೇಶನದಂತೆ ನಡೆದುಕೊಳ್ಳುವುದು. ಇದರೊಂದಿಗೆ ಸನ್ನಿವೇಶಕ್ಕೆ ತಕ್ಕಂತೆ ಅವಶ್ಯಕತೆ ಇದ್ದರೆ ಸಣ್ಣ ಪುಟ್ಟ ಮಾರ್ಪಾಡುಗಳನ್ನು ಮಾಡಲು ಪೊಲೀಸ್ ಅಧಿಕಾರಿಗಳಿಗೆ ಅನುಮತಿಸಿದೆ.

ಅವಶ್ಯವಿರುವ ಸಂಜ್ಞೆ ಸೂಚನಾ ಫಲಕವನ್ನು ಅಳವಡಿಸಲು ಪೊಲೀಸ್ ಅಧೀಕ್ಷಕರು ಅಧಿಕಾರ ನೀಡಲಾಗಿದೆ. ಈ ವಾಹನ ಸಂಚಾರ ನಿಯಮವು ಸೆಪ್ಟೆಂಬರ್ ೨೩ ರ ಸಂಜೆ ೬ ಗಂಟೆಯಿAದ ಸೆಪ್ಟೆಂಬರ್ ೨೪ ರ ಬೆಳಿಗ್ಗೆ ೬ ಗಂಟೆಯವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಆದೇಶದಲ್ಲಿ ತಿಳಿಸಿದ್ದಾರೆ.