ಚೆಟ್ಟಳ್ಳಿ, ಸೆ. ೨೨: ಮನೆಯ ಹಿಂಬದಿಯಲ್ಲಿ ಆಟವಾಡುತ್ತಿದ್ದ ೩ ವರ್ಷದ ಮಗು ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟ ಹೃದಯವಿದ್ರಾವಕ ಘಟನೆ ಚೆಟ್ಟಳ್ಳಿಯಲ್ಲಿ ನಡೆದಿದೆ.

ಚೆಟ್ಟಳ್ಳಿಯ ಪುತ್ತರಿರ ಶಿವು ನಂಜಪ್ಪ ಹಾಗೂ ರತಿ ದಂಪತಿಯ ಮಗು ಶಿಯಾನ್ ಕುಶಾಲಪ್ಪ (೩) ಮೃತಪಟ್ಟ ಮಗುವಾಗಿದೆ.

ಮನೆಯ ಹಿಂಬದಿಯಲ್ಲಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಗೊಂಡು ಮಗು ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬAಧಿಸಿದAತೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.