ಪೊನ್ನಂಪೇಟೆ, ಸೆ. ೨೧ : ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಪೊನ್ನಂಪೇಟೆಯ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಪಿಯು ಕಾಲೇಜು ಸಹಯೋಗದಲ್ಲಿ ಪೊನ್ನಂಪೇಟೆ ಮತ್ತು ವೀರಾಜಪೇಟೆ ತಾಲೂಕು ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ ನಡೆಯಿತು.

ಸಿಐಪಿಯು ಕಾಲೇಜು ಪ್ರಾಂಶುಪಾಲೆ ಡಾ. ರೋಹಿಣಿ ತಿಮ್ಮಯ್ಯ ಬಾವುಟ ಬೀಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಎರಡು ತಾಲೂಕುಗಳ ವಿವಿಧ ಪಿಯು ಕಾಲೇಜುಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತಲಾ ೬ ಮಂದಿಯನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.

ಪೊನ್ನಂಪೇಟೆ ತಾಲೂಕಿನಿಂದ ಬಾಲಕರ ವಿಭಾಗದಲ್ಲಿ ಸಿಐಪಿಯು ಕಾಲೇಜಿನ ಸಮಯ್ ಗಣಪತಿ, ಪ್ರಜ್ವಲ್, ಸಂತ ಅಂಥೋನಿ ಕಾಲೇಜಿನ ನಿಖಿಲ್, ಶಾಶ್ವತ್, ಶ್ರೀಮಂಗಲ ಕಾಲೇಜಿನ ವಶೀಕರಣ್, ಕಾಫ್ಸ್ ಕಾಲೇಜಿನ ಅಯ್ಯಪ್ಪ ಎಂ.ಪಿ, ಬಾಲಕಿಯರ ವಿಭಾಗದಲ್ಲಿ ಸಿಐಪಿಯು ಕಾಲೇಜಿನ ಚರಿಷ್ಮಾ, ವೈಷ್ಣವಿ ಕೆ.ಆರ್., ಪೊನ್ನಂಪೇಟೆ ಸರ್ಕಾರಿ ಪಿಯು ಕಾಲೇಜಿನ ಬಾನ್ವಿ, ತ್ರಿಷಾ, ಸಂತ ಅಂಥೋನಿ ಕಾಲೇಜಿನ ರಿಷ್ಮಾ ಟಿ.ಆರ್., ಶ್ರೀಮಂಗಲ ಕಾಲೇಜಿನ ಕೃತಿಕಾ ಆಯ್ಕೆಯಾದರು.

ವೀರಾಜಪೇಟೆ ತಾಲೂಕಿನಿಂದ ಬಾಲಕರ ವಿಭಾಗದಲ್ಲಿ ಲಯನ್ಸ್ ಪಿಯು ಕಾಲೇಜಿನ ಪ್ರಶಾಂತ್ ಸಿ.ವೈ, ಕಾವೇರಿ ಪಿಯು ಕಾಲೇಜಿನ ಚಿರಂಜೀವಿ ಸಿ.ಎಸ್, ಮೊಹಮ್ಮದ್ ಅನಾಸ್ ಎಂ, ಸಂತ ಅನ್ನಮ್ಮ ಕಾಲೇಜಿನ ಅಭಿ, ದೀಕ್ಷಿತ್ ಪಿ.ಕೆ, ಎಸ್.ಎಂ.ಎಸ್ ಉಮರ್, ಬಾಲಕಿಯರ ವಿಭಾಗದಲ್ಲಿ ಲಯನ್ಸ್ ಕಾಲೇಜಿನ ಗ್ರಿಷ್ಮಾ ಪೊನ್ನಮ್ಮ ಪಿ, ಧನ್ಯ ಕಾವೇರಮ್ಮ, ಎಸ್.ಎಂ.ಎಸ್ ಕಾಲೇಜಿನ ಬೃಂದಾ ಬಿ.ಎಚ್, ಗಂಗೋತ್ರಿ ಎಂ, ಸಂತ ಅನ್ನಮ್ಮ ಕಾಲೇಜಿನ ಮುನವೀರಾ ಎಂ.ಯು, ಪಾಲಿಬೆಟ್ಟ ಸರ್ಕಾರಿ ಪಿಯು ಕಾಲೇಜಿನ ನಾಜೀಯಾ ಕೆ.ಎನ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.

ಈ ಸಂದರ್ಭ ಕೊಡಗು ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ಚಂದ್ರಶೇಖರ, ಸಿಐಪಿಯು ಕಾಲೇಜಿನ ನರ್ತನ್ ನಾಚಪ್ಪ, ಸಂತ ಅನ್ನಮ್ಮ ಕಾಲೇಜಿನ ರಾಜ್ ರೈ, ಎರಡೂ ತಾಲೂಕುಗಳ ದೈಹಿಕ ಶಿಕ್ಷಣ ನಿರ್ದೇಶಕರು ಪಾಲ್ಗೊಂಡಿದ್ದರು.