ಮುಳ್ಳೂರು, ಸೆ. ೨೧: ಸೋಮವಾರಪೇಟೆ ತಾಲೂಕು ಮಟ್ಟದ ೧೪ ವರ್ಷ ವಯೋಮಾನದ ಬಾಲಕ ಮತ್ತು ಬಾಲಕಿಯರ ಖೋ-ಖೋ ಹಾಗೂ ಕರಾಟೆ ಪಂದ್ಯಾವಳಿ ಸಮೀಪದ ಕೊಡ್ಲಿಪೇಟೆ ಕಲ್ಲುಮಠದ ಎಸ್‌ಕೆಎಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಕ್ರೀಡಾಂಗಣದಲ್ಲಿ ನಡೆಯಿತು.

ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮವನ್ನು ವಿದ್ಯಾಸಂಸ್ಥೆಯ ನಿರ್ದೇಶಕ ಶಿವಶೇಖರ್ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸೂಫಿ ಪೆರಾಜೆ-ಕ್ರೀಡಾ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇದರ ಜೊತೆಯಲ್ಲಿ ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆ, ಶಿಸ್ತು ಮತ್ತು ನಿಯಮವನ್ನು ಪಾಲನೆ ಮಾಡುವ ಮೂಲಕ ಉತ್ತಮ ಕ್ರೀಡಾಪಟುಗಳಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕರಾಟೆ ಶಿಕ್ಷಕ ಅರುಣ್, ದೈಹಿಕ ಶಿಕ್ಷಣ ಶಿಕ್ಷಕ ಕರುಂಬಯ್ಯ, ಕೊಡ್ಲಿಪೇಟೆ ವಲಯ ಕ್ರೀಡಾಕೂಟ ಕಾರ್ಯದರ್ಶಿ ಸುನಿಲ್, ಪ್ರಾಥಮಿಕ ಶಾಲಾ ವಿಭಾಗದ ವಲಯ ಕಾರ್ಯದರ್ಶಿ ಆಶಾ, ಶಾಲಾ ಮುಖ್ಯ ಶಿಕ್ಷಕ ಎಚ್.ಎಂ.ಅಭಿಲಾಷ್, ದೈಹಿಕ ಶಿಕ್ಷಕ ಎಚ್.ಪಿ.ಪುನಿತ್, ವಿವಿಧ ಶಾಲೆಗಳ ದೈಹಿಕ ಶಿಕ್ಷಕರು, ಕರಾಟೆ ತರಬೇತುದಾರರು ಹಾಜರಿದ್ದರು.

ಪಂದ್ಯಾವಳಿಯ ಸ್ಪರ್ಧಾ ವಿಜೇತರು

ಖೋ ಖೋ ಪಂದ್ಯಾವಳಿಯ ಬಾಲಕರ ವಿಭಾಗದಲ್ಲಿ ಆಲೂರು ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲಾ ತಂಡ[ಪ್ರಥಮ] ಸ್ಥಾನ ಪಡೆದುಕೊಂಡಿತು. ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ತಂಡ[ದ್ವಿತೀಯ] ಸ್ಥಾನ ಪಡೆದುಕೊಂಡಿತು.

ಖೋ ಖೋ ಬಾಲಕಿಯರ ವಿಭಾಗದಲ್ಲಿ ಆಲೂರು ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲಾ ತಂಡ[ಪ್ರಥಮ] ಸ್ಥಾನ ಪಡೆದುಕೊಂಡಿತು. ಕೊಡ್ಲಿಪೇಟೆ ಕಲ್ಲುಮಠದ ಎಸ್‌ಕೆಎಸ್ ಶಾಲಾ ತಂಡ[ದ್ವೀತಿಯ] ಸ್ಥಾನ ಪಡೆದುಕೊಂಡಿತು.