ಕುಶಾಲನಗರ, ಸೆ. ೧೫: ೬೯ ನೇ ರಾಷ್ಟçಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಕುಶಾಲನಗರ ಪೊಲೀಸ್ ಉಪ ಅಧೀಕ್ಷಕರ ಕಚೇರಿಯ ಕೆ.ಕೆ ಸ್ವಾಮಿ ಕಂಚಿನ ಪದಕ ಗಳಿಸಿದ್ದು, ಮೈಸೂರಿನಲ್ಲಿ ನಡೆದ ೮ನೇ ದಕ್ಷಿಣ ವಲಯ ಪೊಲೀಸ್ ಕರ್ತವ್ಯ ಕೂಟ ಸಮಾರೋಪ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಯಿತು.

ಮೈಸೂರು ಪೊಲೀಸ್ ಕಮೀಷನರ್ ಹಾಗೂ ಹಿರಿಯ ಅಧಿಕಾರಿಗಳು ನೆನಪಿನ ಕಾಣಿಕೆ ನೀಡಿ ಕೆ.ಕೆ ಸ್ವಾಮಿ ಅವರನ್ನು ಸನ್ಮಾನಿಸಿದರು. ೮ನೇ ದಕ್ಷಿಣ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಪೊಲೀಸ್ ವಿಡಿಯೋಗ್ರಾಫೀ ಸ್ಪರ್ಧೆಯಲ್ಲಿ ಕೂಡ ಸ್ವಾಮಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.