ಮಡಿಕೇರಿ, ಸೆ. ೧೫: ಗೋಣಿಕೊಪ್ಪ ಕ್ಯಾಲ್ಸ್ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆ ನಡೆಯಿತು. ‘ಗ್ರೇ ಕ್ಯಾಪ್ಸ್‘ ವತಿಯಿಂದ ಆಯೋಜಿತ ಸ್ಪರ್ಧೆಯಲ್ಲಿ ಕ್ವಿಜ್ ಮಾಸ್ಟರ್ ಖ್ಯಾತಿಯ ಗಿರಿ ಬಾಲಸುಬ್ರಮಣ್ಯಂ ಹಾಗೂ ನಿಹಾರಿಕ ಜೈನ್ ಅವರು ರಸಪ್ರಶ್ನೆ ನಡೆಸಿಕೊಟ್ಟರು.
ಜಿಲ್ಲೆಯ ವಿವಿಧೆಡೆಗಳಿಂದ ೧೮ ಶಾಲೆಗಳು ಕ್ವಿಜ್ನಲ್ಲಿ ಭಾಗವಹಿಸಿದ್ದವು. ಕ್ಯಾಲ್ಸ್ ಶಾಲೆಯ ಮಯಾಂಕ್ ಮುತ್ತಣ್ಣ ಹಾಗೂ ನಿಶಾನ್ ಎಂ.ಎನ್ ೩೨೫ ಅಂಕಗಳೊAದಿಗೆ ಮೊದಲ ಸ್ಥಾನ ಗಳಿಸಿದರು. ಲಯನ್ಸ್ ಹೈಸ್ಕೂಲಿನ್ ಮಿನಲ್ ಮಾಚಯ್ಯ ಹಾಗೂ ಆರಾಧ್ಯ ಎಂ.ಎA ದ್ವಿತೀಯ ಹಾಗೂ ಗುಡ್ಡೆಹೊಸೂರಿನ ಉದ್ಗಂ ಶಾಲೆಯ ಪರಿಶುದ್ಧ ಹಾಗೂ ವಿಸ್ಮಯ್ ಎನ್ ತೃತೀಯ ಸ್ಥಾನ ಗಳಿಸಿದರು.
ಕಾರ್ಯಕ್ರಮದಲ್ಲಿ ಕ್ಯಾಲ್ಸ್ ಶಾಲೆಯ ಪ್ರಾಂಶುಪಾಲರಾದ ಗೌರಮ್ಮ ನಂಜಪ್ಪ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.