ಶ್ರೀಮಂಗಲ, ಸೆ. ೧೫: ಉದ್ದೇಶಿತ ಕಸ್ತೂರಿರಂಗನ್ ವರದಿಯನ್ನು ಮುಂದಿಟ್ಟುಕೊAಡು ಕೊಡಗಿನ ಜನರನ್ನು ಭಯಪಡಿಸಿ ಜಾಗ ಮಾರಾಟ ಮಾಡಲು ಕೆಲವು ಬ್ರೋಕರ್ಗಳು ಪ್ರಚೋದನೆ ನೀಡುತ್ತಿದ್ದು, ಇಂತಹ ಸುಳ್ಳಿಗೆ ಯಾರು ಬಲಿಯಾಗಿ ಜಾಗ ಮಾರಾಟ ಮಾಡಲು ಮುಂದಾಗಬಾರದೆAದು ಭಾರತೀಯ ಪರಿಸರ ಮತ್ತು ಆರೋಗ್ಯ ಸಂಸ್ಥೆಯ ಸ್ಥಾಪಕರು ಹಾಗೂ ಸಂಸ್ಥೆಯ ಕಾರ್ಯದರ್ಶಿ ನಿವೃತ್ತ ಕರ್ನಲ್ ಚೆಪ್ಪುಡಿರ ಪಿ. ಮುತ್ತಣ್ಣ ಎಚ್ಚರಿಸಿದ್ದಾರೆ.
ಪೊನ್ನಂಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದದರು. ಕಸ್ತೂರಿರಂಗನ್ ವರದಿ ಪ್ರಕಾರ ಜಿಲ್ಲೆಯ ೫೩ ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತದೆ. ಬ್ರೋಕರ್ಗಳು ಈ ಗ್ರಾಮಗಳಿಗೆ ಹೋಗಿ ಈ ಗ್ರಾಮಸ್ಥರನ್ನು ಹೆದರಿಸುತ್ತಿದ್ದು, ೫೩ ಗ್ರಾಮಗಳು ಅರಣ್ಯಕ್ಕೆ ಸೇರ್ಪಡೆಗೊಳ್ಳಲಿದೆ. ಅದಕ್ಕಾಗಿ ಈಗಲೇ ಜಾಗವನ್ನು ಮಾರಾಟ ಮಾಡಿದರೆ ಒಳ್ಳೆಯದು ಎಂದು ಜಾಗವನ್ನು ಮಾರಾಟ ಮಾಡಲು ಪ್ರಚೋದಿಸುತ್ತಿದ್ದಾರೆ.
ಈ ಮೂಲಕ ಜಾಗ ಮಾರಾಟ ಮಾಡಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಆದ್ದರಿಂದ ಈ ಬ್ರೋಕರ್ಗಳನ್ನು ಜನರು ನಂಬುವುದು ಬೇಡ ಎಂದು ಅವರು ಹೇಳಿದರು.
ದೊಡ್ಡ ಸಂಖ್ಯೆಯಲ್ಲಿ ಕೇರಳ, ಆಂಧ್ರ, ತೆಲಂಗಾಣ, ಹರಿಯಾಣ ಮತ್ತು ಪಂಜಾಬ್ನಿAದ ಬಂಡವಾಳ ಶಾಹಿಗಳು ಜಾಗ ಖರೀದಿಗೆ ಮುಂದಾಗುತ್ತಿದ್ದಾರೆ. ಅವರಿಗೆ ಕೊಡಗಿನ ಜಾಗ ಅತ್ಯುತ್ತಮವಾಗಿದೆ ಎಂದು ಗೊತ್ತಿದ್ದು ಅವರು ಜಾಗ ಖರೀದಿಗೆ ಮುಗಿಬೀಳುತ್ತಿದ್ದು, ಕಸ್ತೂರಿ ರಂಗನ್ ವರದಿ ಮುಂದಿಟ್ಟುಕೊAಡು ಬ್ರೋಕರ್ಗಳು ಜಾಗ ಮಾರಾಟ ಮಾಡಿಸಲು ಹವಣಿಸುತ್ತಿದ್ದಾರೆ. ಆದ್ದರಿಂದ ಇಂತಹ ಉತ್ತಮ ಜಾಗ ಕಳೆದುಕೊಂಡು ಭವಿಷ್ಯ ಹಾಳುಮಾಡಿಕೊಳ್ಳದಂತೆ ಅವರು ಮನವಿ ಮಾಡಿದರು.
ಈ ಸಂದರ್ಭ ಸಂಸ್ಥೆಯ ನಿರ್ದೇಶಕರಾದ ಮಲಚೀರ ಶಾನ್ ಬೋಪಯ್ಯ, ಚಿಮ್ಮಣಮಾಡ ತ್ರಿಶೂಲ್ ತಿಮ್ಮಯ್ಯ ಹಾಜರಿದ್ದರು.