ವೀರಾಜಪೇಟೆ, ಸೆ. ೧೩: ತಮಿಳುನಾಡುವಿನಲ್ಲಿ ನಡೆದ ೨೦ನೇ ಏಷ್ಯಾ ಮೈಬುಕನ್ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕೊಡಗು ತಂಡವು ಎರಡನೆ ಸಮಗ್ರ ಚಾಂಪಿಯನ್ ಪಟ್ಟ ಪಡೆದುಕೊಂಡಿತು.

ಮ್ಯಾಂಚೆಸ್ಟರ್ ಇಂಟರ್‌ನ್ಯಾಷನಲ್ ಸ್ಕೂಲ್ ವತಿಯಿಂದ ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆ ಶರವಣಂಪಟ್ಟಿ ಎಂಬಲ್ಲಿ ಏಷ್ಯನ್ ಮೈಬುಕನ್ ಗೋಜೊರಿಯೋ ಕರಾಟೆ ಡು ಇಂಡಿಯಾ ಹಾಗೂ ಯೂನಿಯನ್ ಆಫ್ ಗೋಜೊರಿಯೋ ಕರಾಟೆ ಡು ಫೆಡರೇಶನ್ ಇಂಡಿಯಾ ಸಹಭಾಗಿತ್ವದಲ್ಲಿ ೨೦ನೇ ಏಷ್ಯನ್ ಮೈಬುಕನ್ ಮುಕ್ತ ಕರಾಟೆ ಡು ಚಾಂಪಿಯನ್ ೨೦೨೬ ರ ಪಂದ್ಯಾವಳಿಗಳು ನಡೆಯಿತು.

ಪಂದ್ಯಾವಳಿಯಲ್ಲಿ ಇಂಟರ್‌ನ್ಯಾಷನಲ್ ಮೈಬುಕನ್ ಗೊಜೋರಿಯೋ ಕರಾಟೆ ಡು ಇಂಡಿಯಾ ಕೊಡಗು ಶಾಖೆಯ ತರಬೇತಿ ಶಾಲಾ ವಿದ್ಯಾರ್ಥಿಗಳು ಪಂದ್ಯಾವಳಿಯ ವಿವಿಧ ಪ್ರಕಾರ, ವಿಭಾಗಗಳಲ್ಲಿ ಭಾಗವಹಿಸಿ ಒಟ್ಟು ೧೭ ಚಿನ್ನದ ಪದಕ, ೧೫ ಬೆಳ್ಳಿ ಪದಕ ಹಾಗೂ ೧೨ ಕಂಚಿನ ಪದಕ ಪಡೆದುಕೊಂಡು ಪಂದ್ಯಾವಳಿಯಲ್ಲಿ ೨ನೇ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿತು.

ಪAದ್ಯಾವಳಿಯ ಮುಖ್ಯ ಆಯೋಜಕರಾದ ಶಿಹಾನ್ ಪಾರ್ಥಿಬನ್ ಎಸ್. ಅವರು ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಿದರು. ಗೋಜೊರಿಯೋ ಕರಾಟೆ ಡು ಇಂಡಿಯಾ ಕೊಡಗು ತರಬೇತಿ ಶಾಲೆ ಮುಖ್ಯ ಶಿಕ್ಷಕರಾದ ಸೆನ್ ಸಾಯಿ ಎಂ.ಬಿ. ಚಂದ್ರನ್ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.