ನಾಪೋಕ್ಲು, ಸೆ. ೧೩: ಇಲ್ಲಿಯ ಅಂಕುರ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಾಲೆಯ ವಿದ್ಯಾರ್ಥಿಗಳು ಸಡಗರ ಹಾಗೂ ಗೌರವದಿಂದ ಆಚರಿಸಿದರು.

ಮುಖ್ಯ ಅತಿಥಿ ಶಾಲೆಯ ನಿವೃತ್ತ ಶಿಕ್ಷಕಿ ಬೊಳ್ಳೆಪಂಡ ಆಶಾ ಬೋಪಣ್ಣ, ಶಾಲೆಯ ಅಧ್ಯಕ್ಷ ರಾಜಾ ಚರ್ಮಣ, ಕಾರ್ಯದರ್ಶಿ ರತ್ನ ಚರ್ಮಣ ಹಾಗೂ ಶಿಕ್ಷಕರ ವೃಂದದವರು ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಜ್ಯೋತಿ ಬೆಳಗಿಸಿದರು.

ಈ ಸಂದರ್ಭ ಅಂಕುರ್ ಶಾಲೆಯಲ್ಲಿ ೨೫ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಹಿರಿಯ ಶಿಕ್ಷಕರಾದ ಅಂಜಪರವAಡ ತಾರಾ ಕುಶಾಲಪ್ಪ, ಪಾಂಡAಡ ಶೈಲಾ ನರೇಶ್, ಶಿವಚಾಳಿಯಂಡ ಚೇತನ ವಿಜು, ದೈಹಿಕ ಶಿಕ್ಷಕರಾದ ಮಹೇಶ್ ಅವರಿಗೆ ಶಾಲೆಯ ವತಿಯಿಂದ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿದ್ಯಾರ್ಥಿಗಳು ದಿನದ ವಿಶೇಷತೆಯ ಬಗ್ಗೆ ಭಾಷಣ, ನಂತರ ಶಿಕ್ಷಕರಿಗೆ ಕೆಲವು ಮನರಂಜನಾ ಆಟಗಳಾದ ಸಂಗೀತ ಕುರ್ಚಿ, ರಸಪ್ರಶ್ನೆ ಆಟಗಳನ್ನು ಆಯೋಜಿಸಲಾಗಿತ್ತು. ಶಿಕ್ಷಕರು ಇದರಲ್ಲಿ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಿಗೆ ಸ್ವತಃ ಕೈಯಿಂದ ತಯಾರಿಸಿದ ಧನ್ಯವಾದದ ಕಾರ್ಡುಗಳು ಮತ್ತು ಸಣ್ಣ ಉಡುಗೊರೆಗಳನ್ನು ನೀಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.

ಶಾಲಾ ಆಡಳಿತ ಮಂಡಳಿಯ ವತಿಯಿಂದ ಎಲ್ಲಾ ಶಿಕ್ಷಕರಿಗೂ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ರಾಷ್ಟçಗೀತೆ ಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಂಡಿತು.