ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ ಗಣೇಶ ಚತುರ್ಥಿ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ ದಿನ ಈ ಹಬ್ಬವನ್ನು ಆಚರಿಸ ಲಾಗುತ್ತದೆ.

ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸ ಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಹಲವಾರು ಸಿಹಿ ತಿಂಡಿ ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.

ಹಿಂದೂ ದೇವರು ಗಣೇಶನ ಜನನ ಮತ್ತು ಮೂಲದ ಬಗ್ಗೆ ಕತೆಯಲ್ಲಿ ಹಿಂದೂ ದೇವತೆಯಾದ ಪಾರ್ವತಿ ಸ್ನಾನ ಮಾಡುವಾಗ ಬಾಗಿಲನ್ನು ಕಾಯಲು ಯಾರೂ ಇಲ್ಲದ್ದರಿಂದ ಅರಿಶಿನದಿಂದ ಒಂದು ಹುಡುಗನನ್ನು ರೂಪಿಸಿ ಅವನಿಗೆ ಜೀವ ತುಂಬಿದಳು. ಪಾರ್ವತಿಯ ಪತಿ ಶಿವ ಪಾರ್ವತಿಯನ್ನು ನೋಡಲು ಹೋದಾಗ, ಬಾಲಕ ಗಣೇಶ ಬಾಗಿಲನ್ನು ಕಾಯುತ್ತಿದ್ದನು. ಅವನನ್ನು ಒಳಗೆ ಬಿಡಲಿಲ್ಲ.

ಆಗ ಶಿವನು ದಿಗ್ಬçಮೆಗೊಂಡು ತನ್ನ ತ್ರಿಶೂಲದಿಂದ ಗಣೇಶನ ಶಿರಚ್ಛೇದ ಮಾಡಿದನು. ಆಗ ಕೋಪಗೊಂಡ ಪಾರ್ವತಿ ವಿನಾಶದ ಕಾರ್ಯಾಚರಣೆಗೆ ಹೋಗಲು ನಿರ್ಧರಿಸಿದಳು. ಆದರೆ ಗಣೇಶನನ್ನು ಮತ್ತೆ ಜೀವಂತಗೊಳಿಸಬೇಕು. ಇತರ ದೇವರುಗಳ ಮುಂದೆ. ಪೂಜಿಸಿದರೆ ಹಾಗೆ ಮಾಡುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡಳು. ಶಿವನ ಜನರು ಹೊರಗೆ ಹೋಗಿ ಆನೆಯ ತಲೆಯನ್ನು ತಂದರು. ತಲೆಯನ್ನು ಗಣೇಶನ ಮೇಲೆ ಇಡಲಾಯಿತು. ನಂತರದಲ್ಲಿ ಅವನನ್ನೇ ಪ್ರಥಮ ದೇವರಾಗಿ ಪೂಜಿಸಲಾಯಿತು.

ಮೊದಲ ದಿನ ತಾಯಿ ಸ್ವರ್ಣ ಗೌರಿಯ ಹಬ್ಬ. ಮಾರನೇ ದಿನವೇ ಗಣೇಶನ ಹಬ್ಬ. ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ ತಾಯಿ ಭೂಲೋಕಕ್ಕೆ ಬಂದ ಮಾರನೇ ದಿನವೇ ಅಜ್ಜಿ ಮನೆಗೆ ಬಂದು, ಅಜ್ಜಿ ಮನೆಯಲ್ಲಿ ಮಾಡಿದ ವಿವಿಧ ಭಕ್ಷö್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂತಿರುಗುತ್ತಾರೆ.

ಸಾಮಾನ್ಯವಾಗಿ ಈ ಹಬ್ಬ ಭಾದ್ರಪದ ಚೌತಿಯ ದಿನದಂದು ಬರುತ್ತದೆ. ಆ ದಿನ ಯಾರು ಚಂದ್ರನನ್ನು ನೋಡಬಾರದು ಎಂಬ ಪ್ರತೀತಿಯಿದೆ. ಗಣೇಶ ಭೂಲೋಕಕ್ಕೆ ಬಂದ ದಿನವನ್ನು ವಾರಗಟ್ಟಲೆ ಸಂಭ್ರಮದಿAದ ಆಚರಿಸುವುದು ಅನಾದಿ ಕಾಲದಿಂದಲೂ ರೂಢಿಯಲ್ಲಿದೆ.

ಅಂದು ದೇಗುಲಗಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ವಿಜೃಂಭಣೆಯಿAದ ಈ ಹಬ್ಬವನ್ನು ಆಚರಿಸುತ್ತಾರೆ.

- ರೇಷ್ಮಾ ಬಿ.ಎ., ಕಾವೇರಿ ಕಾಲೇಜು, ವೀರಾಜಪೇಟೆ.