ಗ್ರಾಮಸ್ಥರಿAದ ಕಾಮಗಾರಿಗೆ ತಾತ್ಕಾಲಿಕ ತಡೆ

ಗೋಣಿಕೊಪ್ಪಲು, ಸೆ. ೧೨: ಗ್ರಾಮೀಣ ರಸ್ತೆಯ ಅಭಿವೃದ್ಧಿಗಾಗಿ ನೀಡಿದ ಅನುದಾನವನ್ನು ಖಾಸಗಿ ವ್ಯಕ್ತಿಯ ಅಂಗಳಕ್ಕೆ ಕಾಂಕ್ರೀಟ್ ಮಾಡುವ ಮೂಲಕ ಸರ್ಕಾರದ ಹಣವನ್ನು ಬೇರೆಡೆಗೆ ವರ್ಗಾಯಿಸಿರುವುದನ್ನು ಖಂಡಿಸಿ ಗ್ರಾಮಸ್ಥರು ಅಸಮಾಧಾನವನ್ನು ಹೊರ ಹಾಕಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಇಂಜಿನಿಯರ್‌ಗಳನ್ನು ಬರ ಮಾಡಿಕೊಂಡು ಸದ್ಯದ ಮಟ್ಟಿಗೆ ಕಾಮಗಾರಿ ತಡೆಹಿಡಿಯಲು ಒತ್ತಾಯಿಸಿದರು. ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಕಾಮಗಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ನಂತರ ಮುಂದಿನ ಕಾಮಗಾರಿ ಆರಂಭಿಸುವAತೆ ಗ್ರಾಮಸ್ಥರು ಆಗ್ರಹಿಸಿದ ಘಟನೆ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹಾತೂರು ಶಾಲೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಗ್ರಾಮದ ಚೋಣಮಾಡ ಕುಟುಂಬಸ್ಥರು ತಮ್ಮ ಐನ್‌ಮನೆಗೆ ತೆರಳುವ ರಸ್ತೆಯನ್ನು ಅಭಿವೃದ್ಧಿಪಡಿಸಲು ಮನವಿ ಸಲ್ಲಿಸಿದ್ದರು. ಗ್ರಾಮಸ್ಥರ ಮನವಿಯನ್ನು ಪರಿಗಣಿಸಿದ ಶಾಸಕರು ಚೋಣಮಾಡ ಕುಟುಂಬಸ್ಥರು ತಮ್ಮ ಮನೆಗೆ ಹಾಗೂ ತಮ್ಮ ಆಸ್ತಿಗೆ ತೆರಳುವ ರಸ್ತೆ ಅಭಿವೃದ್ಧಿಗೆ ರೂ. ೪ ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿ ಕ್ರಿಯಾಯೋಜನೆಯಲ್ಲಿ ಈ ರಸ್ತೆಯನ್ನು ಸೇರಿಸಲಾಗಿತ್ತು.

ಆದರೆ ಕೆಲಸ ಆರಂಭಗೊಳ್ಳುತ್ತಿದ್ದAತೆಯೇ ದುಸ್ಥಿತಿಯಲ್ಲಿರುವ ಚೋಣಮಾಡ ಐನ್‌ಮನೆಯ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಬಿಡುಗಡೆಯಾದ ರೂ. ೪ ಲಕ್ಷ ಅನುದಾನವನ್ನು ಅಲ್ಲಿನ ಖಾಸಗಿ ವ್ಯಕ್ತಿಯ ಮನೆಯ ಅಂಗಳಕ್ಕೆ ಕಾಂಕ್ರೀಟ್ ಮಾಡುವ ಮೂಲಕ ಹಣವನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ಮಾಡಿರುವುದಾಗಿ ಗ್ರಾಮಸ್ಥರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಮನೆಗೆ ಹೋಗುವ ರಸ್ತೆ ಬದಲಾಗಿ ಓರ್ವ ವ್ಯಕ್ತಿಯ ಮನೆಯ ಅಂಗಳಕ್ಕೆ ಐನ್‌ಮನೆ ಹೆಸರಿನಲ್ಲಿ ಹಣವನ್ನು ಬಳಸಿದ್ದಾರೆ ಎಂದು ಈ ಭಾಗದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕೊಕ್ಕಂಡ ಗಿಣಿ ಗಣಪತಿ ಹಾಗೂ ಮಾಜಿ ಅಧ್ಯಕ್ಷರಾದ ಕೊಕ್ಕಂಡ ರೂಪ ಭೀಮಯ್ಯನವರ ಗಮನಕ್ಕೆ ತಂದರು. ಗ್ರಾಮಸ್ಥರ ಅಹವಾಲು ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ವೇಳೆ ಶಾಸಕರ ಅನುದಾನವನ್ನು ಕೆಲವರು ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಇದರಿAದ ಅಸಮಾಧಾನಗೊಂಡ ಇಲ್ಲಿನ ಗ್ರಾಮಸ್ಥರು ಕ್ರಿಯಾ ಯೋಜನೆಯಲ್ಲಿ ತಿಳಿಸಿರುವಂತೆ ಹಣವನ್ನು ಸದ್ಬಳಕೆ ಮಾಡದೆ ಓರ್ವ ವ್ಯಕ್ತಿಗೆ ಇದರ ಪ್ರಯೋಜನ ನೀಡಿದ್ದಾರೆ. ಈ ಕೆಲಸದ ಹಿಂದೆ ಇರುವ ಅಧಿಕಾರಿಯಾಗಲಿ, ಪಕ್ಷದ ಮುಖಂಡರಾಗಲಿ ಯಾರು ಎಂಬುದು ಸಾಬೀತುಪಡಿಸಬೇಕು. ಇಂತಹ ಕೆಲಸದಿಂದ ಕ್ಷೇತ್ರದ ಶಾಸಕರ ಹೆಸರಿಗೆ ಧಕ್ಕೆ ತರುವಂತಾಗಿದೆ. ಈ ಬಗ್ಗೆ ಶಾಸಕರೇ ಖುದ್ದಾಗಿ ಆಗಮಿಸಿ ಪರಿಶೀಲನೆ ನಡೆಸಬೇಕು. ಹಣ ಬಿಡುಗಡೆಯಾದ ಯೋಜನೆಗೆ ಹಣ ಸದ್ಬಳಕೆಯಾಗಬೇಕು ಎಂದು ಕೊಕ್ಕಂಡ ಗಿಣಿ ಗಣಪತಿ ಒತ್ತಾಯಿಸಿದರು.

ಪರಿಶೀಲನೆ ವೇಳೆ ಗ್ರಾಮಸ್ಥರುಗಳಾದ ಕೊಕ್ಕಂಡ ಸುಗಂಧ ಭೀಮಯ್ಯ, ರೂಪ ಭೀಮಯ್ಯ, ಉದಯ, ಡಿಕ್ಕಿ ಮಾದಯ್ಯ, ಚೋಣಮಾಡ ಪಿ. ಸುರೇಶ್, ರಾಣಿ, ಕೆ. ಸುರೇಶ್, ಲೂಸಿ, ಚೇಂದAಡ ರಾಜ ಗಣಪತಿ, ಕಾಳೇಂಗಡ ಜಯ ಕಾರ್ಯಪ್ಪ, ಕೊಂಗೆಪAಡ ರವಿ, ವಿನು, ಮಾಚಯ್ಯ, ವಾಸು ಉತ್ತಪ್ಪ, ಎಸ್. ರಂಜು, ಸಾಬು ಸುಬ್ಬಯ್ಯ, ಸಂಪು, ಕೊಂಗAಡ ತಮ್ಮು ದೇವಯ್ಯ ಸೇರಿದಂತೆ ಹಲವು ನಾಗರಿಕರು ಪಾಲ್ಗೊಂಡಿದ್ದರು.