ಮಡಿಕೇರಿ, ಸೆ. ೧೨: ಕೊಡಗು ಜಿಲ್ಲಾ ಸಹಕಾರ ಯೂನಿಯನ್ನಿಂದ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಸಹಕಾರದ ಬಗ್ಗೆ ಜನಜಾಗೃತಿ ಉಂಟು ಮಾಡುವಲ್ಲಿ ಸಹಕಾರ ಶಿಕ್ಷಣ, ತರಬೇತಿ ಮತ್ತು ಪ್ರಚಾರದ ಪಾತ್ರ’ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ‘ಜನಜೀವನದ ಸಮಗ್ರ ಅಭಿವೃದ್ಧಿಗೆ ಸಹಕಾರಿ ವ್ಯವಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ’ ಎಂಬ ವಿಷಯದ ಬಗ್ಗೆ ಚರ್ಚಾ ಸ್ಪರ್ಧೆಯನ್ನು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಲಾಯಿತು.
ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ ಶಾಲಾ ವಿದ್ಯಾರ್ಥಿಗಳು ಪ್ರಬಂಧವನ್ನು ಮಂಡಿಸಿದರು. ನಂತರದಲ್ಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ವಿಷಯದ ಕುರಿತಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು. ರಾಬಿನ್ ದೇವಯ್ಯ ಮಾತನಾಡಿ, ಸಹಕಾರ ಕ್ಷೇತ್ರವು ಅತ್ಯಂತ ವಿಶಾಲವಾಗಿದ್ದು, ಜನಜೀವನದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಜಿಲ್ಲೆಯಲ್ಲಿ ಮುಖ್ಯವಾಗಿ ಸಹಕಾರ ಸಂಘಗಳಿAದ ದೊರಕುವ ವಿವಿಧ ರೀತಿಯ ಸಾಲಗಳು, ನಮ್ಮ ಜೀವನ ಸುಧಾರಣೆಗೆ ಅಂದರೆ ಜೀವನ ಗುಣಮಟ್ಟ ಹೆಚ್ಚಾಗಲು, ಪ್ರತಿಷ್ಠಿತ ಸಂಸ್ಥೆಗಳಲ್ಲಿಗೆ ಉತ್ತಮ ವಿದ್ಯಾಭ್ಯಾಸ ಹೊಂದಲು ಸಹಕಾರಿಯಾಗಿವೆ ಎಂದರು.
ವೇದಿಕೆಯಲ್ಲಿ ಯೂನಿಯನ್ ನಿರ್ದೇಶಕರಾದ ಎಂ.ಟಿ. ಸುಬ್ಬಯ್ಯ, ಪಿ.ಎನ್. ಚಂದ್ರಪ್ರಕಾಶ್, ಎಸ್.ಆರ್. ಸುನಿಲ್ ರಾವ್, ತೀರ್ಪುಗಾರರಾದ ಎಂ.ಎA. ಶ್ಯಾಮಲ, ಕೆ.ಐ.ಸಿ.ಎಂ. ಪ್ರಾಂಶುಪಾಲರಾದ ಪುಟ್ಟಸ್ವಾಮಿ, ಉಪನ್ಯಾಸಕರಾದ ಮಹದೇವಪ್ಪ, ಸಂಜೀವ್, ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಉಪಸ್ಥಿತರಿದ್ದರು. ಯೂನಿಯನ್ ವ್ಯವಸ್ಥಾಪಕಿ ಆರ್. ಮಂಜುಳ ಹಾಗೂ ಬಿ.ಸಿ. ಅರುಣ್ ಕುಮಾರ್ ನಿರೂಪಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.
ಪ್ರಬಂಧ ಸ್ಪರ್ಧೆ ವಿಜೇತರು
ಪ್ರಥಮ - ಶಪ್ನ ಸಿ.ಎನ್., ಇಕ್ರಾ ಪಬ್ಲಿಕ್ ಸ್ಕೂಲ್, ಸಿದ್ದಾಪುರ, ದ್ವಿತೀಯ - ಇಂಪ ಕೆ.ಕೆ., ಜ್ಞಾನಜ್ಯೋತಿ ವಿದ್ಯಾಸಂಸ್ಥೆ, ಮೂರ್ನಾಡು, ತೃತೀಯ - ಯಶಸ್ಸಿ ಎಸ್.ವಿ., ಕೆ.ಪಿ.ಎಸ್. ಪ್ರೌಢಶಾಲೆ, ಶಿರಂಗಾಲ, ಸಮಾಧಾನಕರ ಬಹುಮಾನ ಪ್ರೇಕ್ಷ ಪೊನ್ನಮ್ಮ ಕೆ.ಆರ್., ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆ, ಚೇರಂಬಾಣೆ.
ಚರ್ಚಾ ಸ್ಪರ್ಧೆ ವಿಜೇತರು
ಪ್ರಥಮ - ಭೂಮಿಕಾ ಸಿ.ಹೆಚ್., ಬಿ.ಟಿ.ಸಿ.ಜಿ. ಪದವಿಪೂರ್ವ ಕಾಲೇಜು, ಸೋಮವಾರಪೇಟೆ, ದ್ವಿತೀಯ - ಭುವನ ಪೂವಯ್ಯ, ಲಯನ್ಸ್ ಸಂಯುಕ್ತ ಪದವಿಪೂರ್ವ ಕಾಲೇಜು, ಕಳತ್ಮಾಡು, ತೃತೀಯ - ತ್ರಿಷಾ ಎ.ಎಸ್., ಸಿ.ಐ. ಪದವಿಪೂರ್ವ ಕಾಲೇಜು, ಪೊನ್ನಂಪೇಟೆ, ಸಮಾಧಾನಕರ ಬಹುಮಾನ ಅಶ್ವಿತ ಎ.ಸಿ., ಸಂತ ಜೋಸೆಫರ ಪದವಿಪೂರ್ವ ಕಾಲೇಜು, ಮಡಿಕೇರಿ.