ಮಡಿಕೇರಿಯ ಬದ್ರಿಯಾ ಮಸೀದಿ ಹಾಗೂ ಬದ್ರಿಯಾ ಜಮಾಅತ್‌ನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದ, ಪ್ರೆಸಿಡೆಂಟ್ ಮಾಮದಾಕ ಎಂದೇ ಚಿರಪರಿಚಿತರಾಗಿದ್ದ ಹೆಚ್.ಎಂ. ಮೊಹಮ್ಮದ್ (೯೨) ಅವರು ತಾ. ೧೦ ರಂದು ನಿಧನರಾದರು.

ಆರೋಗ್ಯ ಇಲಾಖೆಯಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು, ಬದ್ರಿಯಾ ಜಮಾಅತ್‌ನ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಲ್ಲದೆ ಅಲ್ ಅಮೀನ್ ಟ್ರಸ್ಟ್ನ ಅಧ್ಯಕ್ಷರಾಗಿ ಹಾಗೂ ಇತ್ತೀಚಿನವರೆಗೆ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ವೀರಾಜಪೇಟೆಯ ಪೆರುಂಬಾಡಿಯಲ್ಲಿರುವ ಬನಾತ್ ಯತೀಮ್ ಖಾನ ಸಮಿತಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು, ವಿವಿಧ ಸಾಮಾಜಿಕ ಹಾಗೂ ಸಮುದಾಯ ಸೇವಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.