ಮಡಿಕೇರಿ, ಸೆ. ೧೧: ಮಡಿಕೇರಿ ನಗರ ದಸರಾ ಸಮಿತಿಯ ಕಚೇರಿ ಉದ್ಘಾಟನೆ ಮತ್ತು ದಸರಾ ಲೋಗೋ ಅನಾವರಣ ಜರುಗಿತು.

ನಗರಸಭಾ ಸಂಕೀರ್ಣದಲ್ಲಿ ದಸರಾ ಕಚೇರಿಯಲ್ಲಿ ಗಣಪತಿ ಹೋಮ ಮೂಲಕ ದಸರಾ ಕಚೇರಿಗೆ ಚಾಲನೆ ನೀಡಲಾಯಿತು. ಅಂತೆಯೇ ಮಡಿಕೇರಿ ನಗರ ದಸರಾ ಸಂಬAಧಿತ ಲೋಗೋವನ್ನು ಈ ಸಂದರ್ಭ ಅನಾವರಣಗೊಳಿಸಲಾಯಿತು.

ಮಡಿಕೇರಿ ನಗರ ಸಭಾ ಅಧ್ಯಕ್ಷೆ ಮತ್ತು ದಸರಾ ಸಮಿತಿಯ ಅಧ್ಯಕ್ಷೆ, ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ, ನಗರಸಭೆ ಪಾರಾಯುಕ್ತ ರಮೇಶ್, ನಗರಸಭೆ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ, ದಸರಾ ಸಮಿತಿಯ ಗೌರವ ಸಲಹೆಗಾರರಾದ ಸತೀಶ್ ಪೈ, ಜಿ. ಚಿದ್ವಿಲಾಸ್, ಸಾಂಸ್ಕೃತಿಕ ಸಮಿತಿಯ ಗೌರವ ಸಲಹೆಗಾರ ಅನಿಲ್ ಎಚ್.ಟಿ., ದಸರಾ ಸಮಿತಿ ಪ್ರಮುಖರಾದ ಎ.ಸಿ. ದೇವಯ್ಯ, ಅಜ್ಜೇಟಿರ ಲೋಕೇಶ್, ವಿನು ಈರಪ್ಪ, ನವೀನ್ ಅಂಬೆಕಲ್. ಮುದ್ದುರಾಜ್, ರವಿ ಕರ್ಕೇರ, ಮುನೀರ್ ಮಾಚರ್, ದಸರಾ ಸಮಿತಿ ವ್ಯವಸ್ಥಾಪಕ ಶಶಿಕುಮಾರ್, ನಗರಸಭಾ ಸದಸ್ಯ ಚಂದ್ರಶೇಖರ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಚಂದ್ರು, ನವೀನ್ ಸೇರಿದಂತೆ ಪ್ರಮುಖರು ಹಾಜರಿದ್ದರು. ಶ್ರೀಕೃಷ್ಣ ಉಪಾಧ್ಯಾಯ ಅವರು ದೈವಿಕ ಕಾರ್ಯ ನೆರವೇರಿಸಿದರು.