ಪೊನ್ನಂಪೇಟೆ, ಸೆ. ೧೧: ಪಿ.ಸಿ. ಕ್ಲಬ್, ರೋಟರಿ ಗೋಣಿಕೊಪ್ಪಲು ಹಾಗೂ ಸೀನಿಯರ್ ಚೇಂಬರ್ ಗೋಣಿಕೊಪ್ಪಲು ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ ಗೋಣಿಕೊಪ್ಪಲು ಪ್ರೌಢಶಾಲೆಯ ಆವರಣದಲ್ಲಿ ನಡೆಯಿತು.

ಪಂದ್ಯಾವಳಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ವಿಭಾಗ ಮತ್ತು ಮುಕ್ತ ವಿಭಾಗ ಸೇರಿದಂತೆ ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ೧೯೨ ಮಂದಿ ಚೆಸ್ ಆಟಗಾರರು ಪಂದ್ಯಾವಳಿಯಲ್ಲಿ ಪಾಲ್ಗೊಂಡು ತಮ್ಮ ಚದುರಂಗ ಕೌಶಲ್ಯವನ್ನು ಪ್ರದರ್ಶಿಸಿದರು.

ಪಂದ್ಯಾವಳಿಯನ್ನು ಹಿರಿಯ ವಕೀಲ ಕಳ್ಳಿಚಂಡ ಅಪ್ಪಣ್ಣ ಉದ್ಘಾಟಿಸಿದರು. ಗೋಣಿಕೊಪ್ಪಲು ಅನುದಾನಿತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೃಷ್ಣ ಚೈತನ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪಿ.ಸಿ. ಕ್ಲಬ್ ಅಧ್ಯಕ್ಷ ಪೊನ್ನಿಮಾಡ ಪ್ರದೀಪ್, ಕಾರ್ಯದರ್ಶಿ ಟಿ.ಜೆ. ಆಂಟೋನಿ, ರೋಟರಿ ಕ್ಲಬ್ ಕಾರ್ಯದರ್ಶಿ ಮನೆಯಪಂಡ ಮಾಚಯ್ಯ, ಉದ್ಯಮಿ ಅಂಥೋನಿ ರೋಬಿನ್, ಪೋರಂಗಡ ದಿಲನ್ ಚಂಗಪ್ಪ, ರೋಟೇರಿಯನ್ ಹಾಗೂ ಬಿಜೆಪಿ ಮುಖಂಡ ವಿಜಯ್, ಸೀನಿಯರ್ ಚೇಂಬರ್ ಅಧ್ಯಕ್ಷ ಮಂಡೇಪAಡ ಸಚಿನ್ ಬೆಳ್ಳಿಯಪ್ಪ ಹಾಗೂ ಕಾರ್ಯದರ್ಶಿ ಮೋಹನ್ ಪಾಲ್ಗೊಂಡಿದ್ದರು.

ಉಪನ್ಯಾಸಕಿ ಪ್ರೀತಿ ಪ್ರಾರ್ಥಿಸಿದರು. ರೋಮಿ ಸುಬ್ಬಯ್ಯ ಸ್ವಾಗತಿಸಿದರು. ಹೆಮ್ಮಚ್ಚಿಮನೆ ಧರಣಿ ಕಾರ್ಯಕ್ರಮ ನಿರ್ವಹಿಸಿದರು.

ಮುಕ್ತ ವಿಭಾಗದಲ್ಲಿ ೪೭, ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ೪೧, ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ೧೩, ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ೬೮ ಹಾಗೂ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ೨೩ ಮಂದಿ ಸೇರಿದಂತೆ ಒಟ್ಟು ೧೯೨ ಸ್ಪರ್ಧಿಗಳು ಭಾಗವಹಿಸಿದ್ದರು.

ಮುಕ್ತ ವಿಭಾಗದಲ್ಲಿ ಶ್ರೀನಿವಾಸ್ ಪಿ.ವಿ ಪ್ರಥಮ, ಲಿಜೋ ಜೇಮ್ಸ್ ದ್ವಿತೀಯ,ಸೋಜಿತ್ ಎಂ.ಎಚ್ ತೃತೀಯ, ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಉನ್ನತ್ ಸಾರಥ್ಯ ಪಿ.ಎಸ್ ಪ್ರಥಮ, ರೋಷನ್ ಆರ್. ನಾಯಕ್ ದ್ವಿತೀಯ, ವೈಭವ್ ಚೇತನ್ ತೃತೀಯ, ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಅಧ್ಯಾ ಅಯ್ಯಪ್ಪ ಪ್ರಥಮ, ಸನಾ ರಾಘವನ್ ದ್ವಿತೀಯ, ಯಾಜಿನಿ ಎನ್ ತೃತೀಯ, ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಅದ್ನಾನ್ ಬೇಗ್ ಎಂ.ಎ ಪ್ರಥಮ, ಧ್ಯಾನ್ ದ್ವಿತೀಯ, ಶ್ರೇಣಿಕ್ ಎಚ್.ಎಂ ತೃತೀಯ, ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಜನ್ಯಾ ಪ್ರಥಮ, ವಿಭಾ ಶೆಟ್ಟಿ ದ್ವಿತೀಯ, ಬೋಜಮ್ಮ ಪಿ.ಪಿ ತೃತೀಯ ಸ್ಥಾನ ಪಡೆದುಕೊಂಡರು.