ಮಡಿಕೇರಿ, ಸೆ. ೧೦: ಕರ್ನಾಟಕ ಅಂಚೆ ವೃತ್ತವು ನಾಗರಿಕರಿಂದ ಪ್ರಸಕ್ತ ಸಾಲಿನ ರಾಷ್ಟಿçÃಯ ಮಟ್ಟದ ಧಾಯ್ ಅಖರ್ ಪತ್ರ ಬರೆಯುವ ಸ್ಪರ್ಧೆಯನ್ನು ಆಯೋಜಿಸಿದ್ದು, ಪತ್ರದ ವಿಷಯವು "ಭೂಮಿ ತಾಯಿಗೆ ಒಂದು ಪತ್ರ: ಪ್ರಕೃತಿಯನ್ನು ರಕ್ಷಿಸುವ ನನ್ನ ಪ್ರತಿಜ್ಞೆÀ" ಕುರಿತಂತೆ ಪತ್ರವನ್ನು ಇಂಗ್ಲಿಷ್/ಹಿAದಿ/ಕನ್ನಡದಲ್ಲಿ ಮಾತ್ರ ಬರೆಯಬೇಕು.
ಕೈಬರಹದ ಪತ್ರಗಳನ್ನು ಮಾತ್ರ ಸ್ವೀಕರಿಸಲಾಗುವುದು. ೧೮ ವರ್ಷ ಮೀರದವರು ಇನ್‌ಲ್ಯಾಂಡ್ ಲೆಟರ್/ಪೋಸ್ಟ್ ಕವರ್ ನಲ್ಲಿ ಗರಿಷ್ಠ ೫೦೦ ಪದಗಳನ್ನು ಮೀರದಂತೆ ಹಾಗೂ ೧೮ ವರ್ಷಕ್ಕಿಂತ ಮೇಲ್ಪಟ್ಟವರು ಲೆಟರ್/ಪೋಸ್ಟ್ ಕವರ್‌ನಲ್ಲಿ ಗರಿಷ್ಠ ೧,೦೦೦ ಪದಗಳು ಮೀರದಂತೆ ಬರೆಯಬೇಕು. ಜನ್ಮದಿನಾಂಕÀವನ್ನು ಪತ್ರದ ಕೊನೆಯಲ್ಲಿ ನಮೂದಿಸಬೇಕು.
ಪತ್ರಗಳನ್ನು ಅಂಚೆ ಕಚೇರಿಗಳ ಅಧೀಕ್ಷಕರು ಕೊಡಗು ಅಂಚೆ ವಿಭಾಗ, ಮಡಿಕೇರಿ ೫೭೧೨೦೧ ಈ ವಿಳಾಸಕ್ಕೆ ತಲುಪಿಸಬೇಕು. ಲಕೋಟೆಯನ್ನು ಸಲ್ಲಿಸಲು/ಪೋಸ್ಟ್ ಮಾಡಲು ಆಕ್ಟೋಬರ್ ೩೧ ಕೊನೆಯ ದಿನವಾಗಿದೆ. ಕರ್ನಾಟಕದ ಎಲ್ಲಾ ಶಾಲೆಗಳು/ಕಾಲೇಜುಗಳು ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಬಹುದು.
ವೃತ್ತ ಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ವಿಜೇತರಿಗೆ ಪ್ರಥಮ ರೂ.೨೫,೦೦೦, ದ್ವಿತೀಯ ರೂ.೧೦,೦೦೦, ತೃತೀಯ ರೂ.೫,೦೦೦ ಹಾಗೂ ರಾಷ್ಟಿçÃಯ ಮಟ್ಟದಲ್ಲಿ ಪ್ರತಿ ವಿಭಾಗದ ವಿಜೇತರಿಗೆ ಪ್ರಥಮ ರೂ.೫೦,೦೦೦, ದ್ವಿತೀಯ ರೂ.೨೫,೦೦೦, ತೃತೀಯ ರೂ.೧೦,೦೦೦ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ hಣಣಠಿs://ಞಚಿಡಿಟಿಚಿಣಚಿಞಠಿosಣ.gov.iಟಿ ಅಥವಾ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡುವಂತೆ ಕೊಡಗು ಅಂಚೆ ವಿಭಾಗದ ಅಧೀಕ್ಷಕರಾದ ಚಂದ್ರಶೇಖರ ಸೂಚಿಸಿದ್ದಾರೆ.