ಚೆಯ್ಯಂಡಾಣೆ, ಸೆ. ೧೦: ಕುಂಜಿಲ ವಿವಿಧೋದ್ದೇಶ ಸಹಕಾರ ಧವಸ ಭಂಡಾರದ ೨೦೨೫-೨೬ನೇ ಸಾಲಿನ ೧೦೬ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.
ಕಕ್ಕಬೆ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕಲ್ಯಾಟಂಡ ಎ. ರಘು ತಮ್ಮಯ್ಯ ವಹಿಸಿ ಮಾತನಾಡಿ, ೨೦೨೫-೨೬ನೇ ಸಾಲಿನ ಕಾರ್ಯ ಕಲಾಪಗಳ ವಿವರಣೆಗಳನ್ನು ನೀಡಿದರು. ಸಂಘದಲ್ಲಿ ಹಾಲಿ ೨೩೪ ಜನ ಸದಸ್ಯರಿದ್ದು ೧೦೬ ವರ್ಷ ಇತಿಹಾಸವುಳ್ಳ ಧವಸ ಭಂಡಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಎಲ್ಲರು ಸಹಕರಿಸುವಂತೆ ಕರೆ ನೀಡಿದರು.
ಇದೆ ಸಂದರ್ಭ ಸಂಘದಲ್ಲಿ ೧೫ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ಎಂ ಕುಂಞಪ್ಪ ಅವರಿಗೆ ಹಿರಿಯ ಸದಸ್ಯರಾದ ಕೆ.ಕೆ ಮುತ್ತಪ್ಪ ಅವರು ಸನ್ಮಾನಿಸಿ ಗೌರವಿಸಿದರು.
ನೂತನ ಕಾರ್ಯದರ್ಶಿ ಯಾಗಿ ಯಶೋಧ ಅವರನ್ನು ನೇಮಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಾದ ಸಹನಾ ಹಾಗೂ ಗೀತಾ ಪೊನ್ನಣ್ಣ ಅವರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಪಿವಿ ಕೃಷ್ಣಯ್ಯ, ನಿರ್ದೇಶಕರಾದ ಎಂ.ಎ ಚೇತನ್, ಕೆ.ಸಿ. ಪಳಂಗಪ್ಪ, ಕೆ.ಎನ್ ನಾಣಯ್ಯ ಕೆ.ಎ.ಕಾಳಪ್ಪ, ಎನ್.ಂ ಸುಬ್ರಮಣಿ, ಕೆ.ಕೆ.ಅಯ್ಯಪ್ಪ, ಪಿ.ಎಂ ಸೋಜಾ, ಎ.ಎ.ದಾಟಿ ಅಯ್ಯಪ್ಪ, ಕೆ.ಟಿ ಅರುಣ, ಮತ್ತಿತರರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕಿ ಡಾಟಿ ಅಯ್ಯಪ್ಪ ಪ್ರಾರ್ಥಿಸಿ, ಯಶೋಧ ಸ್ವಾಗತಿಸಿ, ಕೆ.ಎಸ್ ನಾಣಯ್ಯ ವಂದಿಸಿದರು.