ವೀರಾಜಪೇಟೆಯ ಐತಿಹಾಸಿಕ ಶೋಭಾಯಾತ್ರೆಯಲ್ಲಿ ಗೌರಿಕೆರೆ ಗಣಪತಿ ಸೇವಾ ಸಮಿತಿ ೧೪ನೇ ವರ್ಷದ ಸಂಭ್ರಮ ದಲ್ಲಿದೆ.
೨೦೧೩ರಲ್ಲಿ ಸ್ಥಳೀಯರೆಲ್ಲರೂ ಒಂದಾಗಿ ಸಂಪ್ರದಾಯ ಹಾಗೂ ಸಾಂಸ್ಕöÈತಿಕ ಮೌಲ್ಯಗಳನ್ನು ಉಳಿಸಿಕೊಂಡು ಹೋಗಬೇಕು, ಗೌರಿಕೆರೆಯಲ್ಲೂ ವಿಜೃಂಭಣೆಯಿAದ ಗಣಪತಿಯನ್ನು ಪ್ರತಿಷ್ಠಾಪಿಸಬೇಕು ಎಂಬ ಉದಾತ್ತ ಉದ್ದೇಶದೊಂದಿಗೆ ಈ ಸಮಿತಿಗೆ ಚಾಲನೆ ದೊರೆಯಿತು. ಪಟ್ರಪಂಡ ಲೋಕೇಶ್ ಅವರು ಸ್ಥಾಪಕ ಅಧ್ಯಕ್ಷರಾಗಿ ಮುತುವರ್ಜಿ ವಹಿಸಿ ಸಮಿತಿಯ ಬುನಾದಿ ಹಾಕಿದರು.
ಆ ಸಂದರ್ಭದಲ್ಲಿ ವಕೀಲರಾದ ಪುಷ್ಪರಾಜ್ ಅವರು ಉಪಾಧ್ಯಕ್ಷರಾಗಿ ಹೆಗಲು ನೀಡಿದ್ದರು. ಇವರೊಂದಿಗೆ ವಿ.ಡಿ. ಸುರೇಶ್, ಧನು, ದಿವಂಗತ ಯತಿರಾಜ್, ರತ್ನ, ಸುರೇಶ್, ಎಲ್.ಐ.ಸಿ ಉದ್ಯೋಗಿ ಶಿವಪ್ಪ, ಮಾಜಿ ಪುರಸಭೆ ಸದಸ್ಯೆ ಉಮಾವತಿ ಹಾಗೂ ಸುಧೀರ್ ಅವರಂತಹ ಪ್ರಮುಖರ ಸತತ ಶ್ರಮ ಮತ್ತು ಒಗ್ಗಟ್ಟಿನಿಂದ ಗೌರಿಕೆರೆಯಲ್ಲಿ ಗಣೇಶೋತ್ಸವವು ಸಂಘಟಿತ ರೂಪ ಪಡೆಯಿತು.
ಆರಂಭಿಕ ದಿನಗಳ ನಂತರ, ಹರೀಶ್, ಸುರೇಶ್, ಸಜೀವ ಮತ್ತು ಬಿ. ಮಣಿ ಅವರು ಸೇರಿಕೊಂಡು ಬಡಾವಣೆಯ ಪ್ರತಿಯೊಬ್ಬರನ್ನೂ ಒಂದೇ ಸೂರಿನಡಿ ತರುವಲ್ಲಿ ಯಶಸ್ವಿಯಾದರು. ಇವರೊಂದಿಗೆ ಪ್ರಥ್ವಿನಾಥ್ ಅವರ ಸಹಕಾರವೂ ಇದೆ. ಪರಸ್ಪರ ಸಹಕಾರ, ಪ್ರೀತಿ ಮತ್ತು ಭಕ್ತಿಯಿಂದ ಗೌರಿ ಗಣಪತಿಯ ಪ್ರತಿಷ್ಠಾಪನೆಯನ್ನು ನಿರಂತರವಾಗಿ ನೆರವೇರಿಸಿಕೊಂಡು ಬಂದ ಈ ಸಮಿತಿಯು, ವರ್ಷದಿಂದ ವರ್ಷಕ್ಕೆ ತನ್ನ ಉತ್ಸವದ ವ್ಯಾಪ್ತಿಯನ್ನು ಹೆಚ್ಚಿಸುತ್ತಾ ಬಂತು. ಬಿ. ಮಣಿ ಅವರ ಸಹಕಾರದಿಂದ ಕಳೆದ ಸಾಲಿನಲ್ಲಿ ಯಶಸ್ವಿಯಾಗಿ ಗೌರಿ ಗಣೇಶ ಪ್ರತಿಷ್ಠಾಪನೆ ನಡೆಯಿತು. ಇದಕ್ಕೆ ಸ್ಥಳೀಯರ ಸಹಕಾರ, ವಕೀಲರಾದ ಪುಷ್ಪರಾಜ್ ಅವರ ಸಾಥ್ ಎಲ್ಲಾ ಸೇರಿ ಸ್ಥಳೀಯವಾಗಿ ನಡೆದ ಕಾರ್ಯಕ್ರಮ ಯಶಸ್ವಿಯಾಯಿತು.
ವಿರಾಜಪೇಟೆಯ ಪ್ರಸಿದ್ಧ ಹಾಗೂ ಐತಿಹಾಸಿಕ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ ಗೌರಿಕೆರೆ ಗಣಪತಿ ಸೇವಾ ಸಮಿತಿಯು ಪ್ರತಿವರ್ಷವೂ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿದೆ. ತನ್ನದೇ ಆದ ಸಾಂಪ್ರದಾಯಿಕ ಕಳೆ, ಶಿಸ್ತು ಮತ್ತು ವಿಶಿಷ್ಟ ಆಕರ್ಷಣೆಗಳ ಮೂಲಕ ಮೆರವಣಿಗೆಯಲ್ಲಿ ತನ್ನದೇ ಆದ ವಿಶೇಷ ಛಾಪನ್ನು ಮೂಡಿಸಿದೆ.
ಸ್ಥಾಪಕರ ದೂರದೃಷ್ಟಿ ಮತ್ತು ಊರವರ ಅಭೂತಪೂರ್ವ ಸಹಕಾರದೊಂದಿಗೆ ಬೆಳೆದುಬಂದಿರುವ ಗೌರಿಕೆರೆ ಗಣಪತಿ ಸೇವಾ ಸಮಿತಿ, ಈ ಬಾರಿ ೧೪ನೇ ವರ್ಷದ ಗೌರಿ ಗಣೇಶೋತ್ಸವವನ್ನು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ವಿಜೃಂಭಣೆಯಿAದ ಆಚರಿಸುತ್ತದೆ.
- ರಜಿತ ಕಾರ್ಯಪ್ಪ,
ವೀರಾಜಪೇಟೆ.
ಮೊ: ೯೪೮೧೭೭೧೮೫೧