ಗೋಣಿಕೊಪ್ಪಲು, ಸೆ. ೯: ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘ ರೂ.೩೬ ಲಕ್ಷ ಲಾಭಾಂಶದೊAದಿಗೆ ವಾರ್ಷಿಕ ರೂ.೨೭೦ ಕೋಟಿ ವಹಿವಾಟು ನಡೆಸಿ ಕಳೆದ ಸಾಲಿಗಿಂತ ಪ್ರಸ್ತುತ ಸಾಲಿನಲ್ಲಿ ರೂ.೮೪ ಕೋಟಿ ಅಧಿಕ ವಹಿವಾಟು ನಡೆಸಿ ಸದಸ್ಯರಿಗೆ ಶೇ.೮ ಡಿವಿಡೆಂಟ್ ನೀಡಿದೆ. ಸಂಘದ ಉತ್ತಮ ಕಾರ್ಯನಿರ್ವಹಣೆಗೆ ಜಿಲ್ಲೆಗೆ ದ್ವಿತಿಯ ಸ್ಥಾನ ಲಭಿಸಿದೆ ಎಂದು ಸಂಘದ ಅಧ್ಯಕ್ಷರಾದ ಅಜ್ಜಿಕುಟ್ಟಿರ ಎಂ.ಮುತ್ತಪ್ಪ ಪ್ರವೀಣ್ ಮಹಾಸಭೆಯಲ್ಲಿ ತಿಳಿಸಿದರು.
ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ರೂ.೪೫ ಕೋಟಿ ೭೦ ಲಕ್ಷ ಸಾಲ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ರೂ.೧೭ ಕೋಟಿ ೫೦ ಲಕ್ಷ ಕೃಷಿ ಸಾಲಕ್ಕೆ ಹಾಗೂ ಕೃಷಿಯೇತರ ಸಾಲಕ್ಕೆ ರೂ.೨೮ ಕೋಟಿ ೨೦ ಲಕ್ಷ ನಿಗದಿ ಮಾಡಲಾಗಿದೆ. ಮುಂದಿನ ಸಾಲಿನಲ್ಲಿ ರೂ.೪೦ ಕೋಟಿ ೬೫ ಲಕ್ಷ ಠೇವಣಿ ಸಂಗ್ರಹಿಸಲು ಗುರಿ ನಿಗಧಿ ಮಾಡಲಾಗಿದ್ದು ಈಗಾಗಲೇ ೪೨ ಕೋಟಿ ಸಂಗ್ರಹವಾಗಿರುತ್ತದೆ ಎಂದರು.
ಸAಘದ ಸದಸ್ಯರುಗಳು ಸಂಘದಲ್ಲಿಯೇ ತಮ್ಮ ಆರ್ಥಿಕ ವ್ಯವಹಾರ ವನ್ನು ನಡೆಸುವ ಮೂಲಕ ಸಂಘದ ಸರ್ವೋತೋಮುಖ ಅಭಿವೃದ್ಧಿಗೆ ಕೈ ಜೋಡಿಸುವಂತೆ ಪ್ರವೀಣ್ ಅವರು ಸದಸ್ಯರಲ್ಲಿ ಮನವಿ ಮಾಡಿದರು. ಸಂಘದಲ್ಲಿ ಸದಸ್ಯರ ಅನುಕೂಲಕ್ಕಾಗಿ ತೋಟದ ಮನೆ ಸಾಲ ಮತ್ತು ಕಾಫಿ ಈಡಿನ ಸಾಲವನ್ನು ನೀಡಲಾಗುತ್ತದೆ. ಪ್ರತಿ ಸದಸ್ಯನ ಬೇಡಿಕೆಗಳನ್ನು ಪೂರೈಸುವುದು ಸಂಘದ ಮೂಲ ಉದ್ದೇಶವಾಗಿದೆ ಎಂದರು.
ಸAಘದ ಆಡಳಿತ ಮಂಡಳಿ ಸದಸ್ಯರ ಹಿತ ಕಾಪಾಡುವಲ್ಲಿ ಪ್ರಾಮಾಣಿಕವಾಗಿ ನಡೆದುಕೊಳ್ಳಲಿದೆ. ಸದಸ್ಯರಿಗೆ ಅಗತ್ಯವಿರುವ ಸಾಲಗಳನ್ನು ಸಕಾಲದಲ್ಲಿ ಮಂಜೂರು ಮಾಡಲು ಸದಾ ಸಿದ್ದರಿದ್ದೇವೆ ಎಂದು.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ತೀತಿರ ಊರ್ಮಿಳ, ನಿರ್ದೇಶಕರುಗಳಾದ ಚೇಂದಿರ ಡಿ.ತಿಮ್ಮಯ್ಯ, ಕೋಳೆರ ಎಸ್.ನರೇಂದ್ರ, ಮಿದೇರಿರ ನವೀನ್, ಮೇಲತಂಡ ಎ.ರಮೇಶ್, ಅಜ್ಜಿಕುಟ್ಟಿರ ಎ.ಬೋಪಣ್ಣ, ಕಾಳಿಮಾಡ ಎ.ನರೇಂದ್ರ, ಕಿರಿಯಮಾಡ ಕೆ.ಮಂದಣ್ಣ, ಹೆಚ್.ಕೆ.ರಾಜಪ್ಪ, ಕಳ್ಳೇಂಗಡ ಪಿ.ಗಾಯತ್ರಿ, ಜೆ.ಬಿ.ಗಂಗು, ಮತ್ರಂಡ ಬಿ.ಬೋಪಣ್ಣ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಮತ್ರಂಡ ಎಂ.ತಮ್ಮಯ್ಯ ಉಪಸ್ಥಿತರಿದ್ದರು. ಆರಂಭದಲ್ಲಿ ಸಿಇಒ ಎಂ.ಎA.ತಮ್ಮಯ್ಯ ಸ್ವಾಗತಿಸಿ, ಉಪಾಧ್ಯಕ್ಷೆ ತೀತಿರ ಊರ್ಮಿಳ ವಂದಿಸಿದರು.