ಮರÀಗೋಡು, ಸೆ. ೯: ಮಂಡ್ಯದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಲ್ಲಿ ರೈತರೊಂದಿಗೆ ಸಂಪರ್ಕ ಬೆಳೆಸಿ, ಕೃಷಿ ಹಾಗೂ ಪರಿಸರ ಸಂಬAಧಿತ ವಿವಿಧ ಅರಿವು, ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಈ ಪ್ರಯುಕ್ತ ಮರಗೋಡಿನ ವಿವೇಕಾನಂದ ಯುವಕರ ಸಂಘದ ಸಭಾಂಗಣದಲ್ಲಿ ರೈತರಿಗೆ ಮಣ್ಣಿನ ಆರೋಗ್ಯ ಮತ್ತು ಬೆಳೆ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭ ಡಾ. ರಮ್ಯ ಅವರು ಮಣ್ಣಿನ ಪ್ರಮುಖ ಪೋಷಕಾಂಶಗಳ ಮಹತ್ವ, ಮಣ್ಣಿನ ಪರೀಕ್ಷೆಯ ಅಗತ್ಯತೆ ಹಾಗೂ ಕೃಷಿ ಭೂಮಿಯಿಂದ ವೈಜ್ಞಾನಿಕವಾಗಿ ಮಣ್ಣಿನ ಮಾದರಿ ಸಂಗ್ರಹಿಸುವ ವಿಧಾನ ಕುರಿತು ರೈತರಿಗೆ ಮಾಹಿತಿ ನೀಡಿದರು.

ಮಡಿಕೇರಿ ಘಟಕದ ವಿಸ್ತರಣಾಧಿಕಾರಿ ಡಾ. ಲತಾ ಅವರು ಬೆಳೆಗಳಲ್ಲಿನ ಕೀಟ ಮತ್ತು ರೋಗಗಳ ಗುರುತಿಸುವಿಕೆ, ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಸಮಗ್ರ ಕೀಟರೋಗ ನಿರ್ವಹಣೆ ಕುರಿತು ಉಪಯುಕ್ತ ಸಲಹೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ರೈತರು ಸಕ್ರಿಯವಾಗಿ ಭಾಗವಹಿಸಿ, ತಮ್ಮ ಕೃಷಿ ಸಂಬAಧಿತ ಸಮಸ್ಯೆಗಳಿಗೆ ತಜ್ಞರಿಂದ ಪರಿಹಾರ ಹಾಗೂ ಸಲಹೆಗಳನ್ನು ಪಡೆದುಕೊಂಡರು.