ಕೆ.ಎಂ ಇಸ್ಮಾಯಿಲ್ ಕಂಡಕರೆ
ಮಡಿಕೇರಿ, ಸೆ. ೮: ಸುಶಿಕ್ಷಿತರ ಜಿಲ್ಲೆ ಎನಿಸಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ವರ್ಷದಿಂದ - ವರ್ಷಕ್ಕೆ ಪೋಕ್ಸೋ ಪ್ರಕರಣಗಳ ಸಂಖ್ಯೆ ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿದೆ.
ಹದಿಹರೆಯದ ಅಪ್ರಾಪ್ತ ಬಾಲಕಿಯರು ಸಣ್ಣ ಪ್ರಾಯದಲ್ಲೇ ಗರ್ಭಿಣಿಗಳಾಗುತ್ತಿರುವ ಆಘಾತಕಾರಿ ಘಟನೆಗಳು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮಕ್ಕಳ ರಕ್ಷಣಾ ಘಟಕ ನೀಡಿರುವ ಅಂಕಿ-ಅAಶಗಳ ಪ್ರಕಾರ ೨೦೨೪ರ ಏಪ್ರಿಲ್ ತಿಂಗಳಿನಿAದ ೨೦೨೬ರ ಜೂನ್ ತಿಂಗಳವರೆಗೆ ಜಿಲ್ಲೆಯಲ್ಲಿ ೨೨೫ ಪೋಕ್ಸೋ ಪ್ರಕರಣಗಳು ದಾಖಲಾಗಿದೆ.
೨೦೨೪-೨೫ರ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ೯೫ ಹಾಗೂ ಪ್ರಸಕ್ತ ಸಾಲಿನಲ್ಲಿ ೨೦೨೫-೨೬ರ ಏಪ್ರಿಲ್-ಜೂನ್ ತಿಂಗಳವರೆಗೆ ೧೩೦ ಪೋಕ್ಸೋ ಪ್ರಕರಣಗಳು ದಾಖಲಾಗಿದೆ. ಪ್ರಸಕ್ತ ವರ್ಷ ೩೫ ಪೋಕ್ಸೋ ಪ್ರಕರಣಗಳು ಹೆಚ್ಚಳವಾಗಿದೆ.
ಕೇವಲ ಎರಡು ವರ್ಷದಲ್ಲಿ ೮೧ ಬಾಲ ಗರ್ಭಿಣಿಯರು
ಕೊಡಗಿನಲ್ಲಿ ಎರಡು ವರ್ಷಗಳಲ್ಲಿ ದಾಖಲಾಗಿರುವ ೨೨೫ ಪೋಕ್ಸೋ ಪ್ರಕರಣಗಳಲ್ಲಿ ೮೧ ಬಾಲ ಗರ್ಭಿಣಿಯರು ಪತ್ತೆಯಾಗಿರುವುದು ಮತ್ತಷ್ಟು ಕಳವಳಕಾರಿ ಸಂಗತಿ.
ಅಪ್ರಾಪ್ತ ವಯಸ್ಸಿನಲ್ಲೇ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಸಮಾಜ ಎಷ್ಟೇ ಮುಂದುವರಿದಿದ್ದರೂ ಕೂಡ ಅಪ್ರಾಪ್ತ ವಯಸ್ಸಿನ ಬಾಲಕಿಯರು ಗರ್ಭಿಣಿಗಳಾಗುತ್ತಿರುವ ಘಟನೆಗಳು ನಿಲ್ಲುತ್ತಿಲ್ಲ.
ಪುಟ್ಟ ಜಿಲ್ಲೆ ಕೊಡಗಿನಲ್ಲಿ ನಡೆಯುತ್ತಿರುವ ಪೋಕ್ಸೋ ಪ್ರಕರಣಗಳ ನೈಜತೆ ಹೊರ ಜಗತ್ತಿಗೆ ತಿಳಿಯುತ್ತಿಲ್ಲ.
೨೦೨೪-೨೫ ಏಪ್ರಿಲ್ - ಮಾರ್ಚ್ ತಿಂಗಳವರೆಗೆ ೩೦ ಬಾಲ ಗರ್ಭಿಣಿಯರು ಹಾಗೂ ೧೫ ಬಾಲತಾಯಿ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ. ೨೦೨೫-೨೬ರ ಏಪ್ರಿಲ್-ಮಾರ್ಚ್ ತಿಂಗಳವರೆಗೆ ೫೧ ಬಾಲ ಗರ್ಭಿಣಿಯರು ಮತ್ತು ೮ ಬಾಲತಾಯಿಯಂದಿರು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರೀತಿ-ಪ್ರೇಮಕ್ಕೆ ಬಲಿಯಾಗುತ್ತಿರುವ ಹೆಣ್ಣುಮಕ್ಕಳು
ಜೆನ್-ಜೀ ಕಾಲಘಟ್ಟದಲ್ಲಿ ಹೆಣ್ಣುಮಕ್ಕಳು ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ-ಪ್ರೇಮಕ್ಕೆ ಬಲಿಯಾಗಿ ಅಪ್ರಾಪ್ತ ವಯಸ್ಸಿನಲ್ಲೇ ಗರ್ಭಿಣಿಗಳಾಗುತ್ತಿರುವ ಘಟನೆ ಕೂಡ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ದಾಖಲಾಗಿರುವ ಪೋಕ್ಸೋ ಪ್ರಕರಣಗಳಲ್ಲಿ ಶೇ. ೫೦ಕ್ಕೂ ಹೆಚ್ಚು ಪ್ರೀತಿ-ಪ್ರೇಮದ ಸಂಬAಧದಿAದಾಗಿ ಗರ್ಭಿಣಿಗಳಾಗಿದ್ದಾರೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯೊಬ್ಬರು ಹೇಳುತ್ತಾರೆ.
ಪ್ರೀತಿಯ ಲೋಕದಲ್ಲಿ ಮುಳುಗಿ ಮನಸ್ಸಿನೊಂದಿಗೆ ದೇಹವನ್ನು ಕೊಡುವ ಹೆಣ್ಣುಮಕ್ಕಳು, ಆಟ ಆಡಬೇಕಾದ ವಯಸ್ಸಿನಲ್ಲಿ ತಮ್ಮ ಮಕ್ಕಳನ್ನು ಆಟ ಆಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮತ್ತೊಂದೆಡೆ ಮೊಬೈಲ್ ಸೆಳೆತ, ಸಾಮಾಜಿಕ ಜಾಲತಾಣದ ಪ್ರಭಾವದಿಂದಲೂ ಕೂಡ ಅಪ್ರಾಪ್ತೆಯೆರು ಪ್ರೇಮಕ್ಕೆ ಸಿಲುಕಿ ಗರ್ಭಿಣಿಗಳಾಗಿರುವ ಘಟನೆ ಕೂಡ ಇದೆ. ಅಪ್ರಾಪ್ತೆಯರು ಗರ್ಭಿಣಿಗಳಾಗುತ್ತಿರುವ ಕೆಲವೊಂದು ವಿಷಯಗಳು ಹೊರಬಾರದೆ ನಾಲ್ಕು ಗೋಡೆಗಳ ಮಧ್ಯೆ ಎಲ್ಲವನ್ನೂ ಇತ್ಯರ್ಥಿಸುವ ಘಟನೆಗಳು ಕೂಡ ನಡೆದಿದೆ. ಕೊಡಗಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ದಾಖಲಾಗಿರುವ ಪೋಕ್ಸೋ, ಬಾಲಗರ್ಭಿಣಿ ಹಾಗೂ ಬಾಲತಾಯಿ ಪ್ರಕರಣದಲ್ಲಿ ಅತೀ ಹೆಚ್ಚು ಶಾಲಾ-ಕಾಲೇಜು ಅರ್ಧದಲ್ಲೇ ಮೊಟಕುಗೊಳಿಸಿರುವ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬುದು ಬಯಲಾಗಿದೆ.
ತೋಟದ ಲೈನ್ ಮನೆಗಳಲ್ಲಿ ಹೆಚ್ಚು ಪೋಕ್ಸೋ ಪ್ರಕರಣ
ಕೊಡಗಿನಲ್ಲಿ ಎರಡು ವರ್ಷಗಳಲ್ಲಿ ದಾಖಲಾಗಿರುವ ಪೋಕ್ಸೋ ಪ್ರಕರಣಗಳಲ್ಲಿ ೯೭ ಪ್ರಕರಣಗಳು ತೋಟದ ಲೈನ್ ಮನೆಯಲ್ಲೇ ನಡೆದಿದೆ.
೨೦೨೪-೨೫ (ಏಪ್ರಿಲ್-ಮಾರ್ಚ್) ಅವಧಿಯಲ್ಲಿ ದಾಖಲಾದ ೯೫ ಪ್ರಕರಣಗಳಲ್ಲಿ ಲೈನ್ ಮನೆಯಲ್ಲಿ ೪೫, ಹಾಡಿಯಲ್ಲಿ ೫ ಹಾಗೂ ಸ್ವಂತ ಹಾಗೂ ಬಾಡಿಗೆ ಮನೆ ಸೇರಿ ೪೫ ಪ್ರಕರಣಗಳು ನಡೆದಿವೆ.
೨೦೨೫-೨೬ (ಏಪ್ರಿಲ್ ಜೂನ್ ವರೆಗೆ) ಅವಧಿಯಲ್ಲಿ ಇದರಲ್ಲಿ ಲೈನ್ ಮನೆಯಲ್ಲಿ ೫೨, ಹಾಡಿಯಲ್ಲಿ ೧೦ ಹಾಗೂ ಸ್ವಂತ ಹಾಗೂ ಬಾಡಿಗೆ ಮನೆ ಸೇರಿ ೬೮ ಪ್ರಕರಣಗಳು ದಾಖಲಾಗಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಲೈನ್ ಮನೆಯಲ್ಲಿ ಪ್ರಕರಣಗಳು ೪೫ ರಿಂದ ೫೨ಕ್ಕೆ ಏರಿಕೆಯಾಗಿದೆ.
ಪ.ಜಾತಿ-ಪಂಗಡದಲ್ಲೇ ಹೆಚ್ಚು ಪೋಕ್ಸೋ, ಎರಡು ವರ್ಷದಲ್ಲಿ ೧೨೩ ಪ್ರಕರಣ
ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ದಾಖಲಾದ ಪೋಕ್ಸೋ ಪ್ರಕರಣಗಳ ಜಾತಿವಾರು ಅಂಕಿ-ಅAಶಗಳಲ್ಲಿ ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡದಲ್ಲೇ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿದೆ. ೨೦೨೪-೨೫ (ಏಪ್ರಿಲ್-ಮಾರ್ಚ್) ಅವಧಿಯಲ್ಲಿ ದಾಖಲಾದ ೯೫ ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿಯಲ್ಲಿ ೨೩, ಪರಿಶಿಷ್ಟ ಪಂಗಡದಲ್ಲಿ ೪೫ ಹಾಗೂ ಇತರೆ ವರ್ಗದಲ್ಲಿ ೨೭ ಪ್ರಕರಣಗಳು ದಾಖಲಾಗಿವೆ.
೨೦೨೫-೨೬ (ಏಪ್ರಿಲ್-ಮಾರ್ಚ್) ಅವಧಿಯಲ್ಲಿ ಒಟ್ಟು ೧೩೦ ಪ್ರಕರಣಗಳು ದಾಖಲಾಗಿದ್ದು, ಪರಿಶಿಷ್ಟ ಜಾತಿಯಲ್ಲಿ ೨೦, ಪರಿಶಿಷ್ಟ ಪಂಗಡದಲ್ಲಿ ೪೦ ಹಾಗೂ ಇತರೆ ವರ್ಗದಲ್ಲಿ ೪೧ ಪ್ರಕರಣಗಳು ದಾಖಲಾಗಿವೆ.
ಎರಡು ವರ್ಷಗಳಲ್ಲಿ ಒಟ್ಟು ೨೨೫ ಪ್ರಕರಣಗಳಲ್ಲಿ ಪರಿಶಿಷ್ಟ ಪಂಗಡದಲ್ಲೇ ೮೫ ಪ್ರಕರಣಗಳು ದಾಖಲಾಗಿದ್ದು, ಇತರೆ ವರ್ಗದಲ್ಲಿ ೬೮ ಹಾಗೂ ಪ.ಜಾತಿಯಲ್ಲಿ ೪೩ ಪ್ರಕರಣಗಳು ದಾಖಲಾಗಿವೆ.
ಪ್ರಸಕ್ತ ಸಾಲಿನಲ್ಲಿ ಏಪ್ರಿಲ್-ಜೂನ್‌ವರೆಗೆ ದಾಖಲಾಗಿರುವ ಪೋಕ್ಸೋ ಪ್ರಕರಣಗಳ ಜಾತಿವಾರು ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ.
ಬಾಲ್ಯ ವಿವಾಹ ೧೯ ಎಫ್‌ಐಆರ್
ಸಮಾಜದಲ್ಲಿ ನಿರಂತರವಾಗಿ ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸಿದರೂ ಕೂಡ ಬಾಲ್ಯ ವಿವಾಹ ನಡೆಯುತ್ತಲೇ ಇದೆ. ಕಳೆದ ಎರಡು ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಬಾಲ್ಯ ವಿವಾಹಕ್ಕೆ ಸಂಬAಧಿಸಿದAತೆ ಒಟ್ಟು ೧೯ ಎಫ್.ಐ.ಆರ್ ದಾಖಲಾಗಿದೆ.
೨೦೨೪-೨೫ (ಏಪ್ರಿಲ್-ಮಾರ್ಚ್) ಅವಧಿಯಲ್ಲಿ ಒಟ್ಟು ೧೧ ಬಾಲ್ಯವಿವಾಹ ಪ್ರಕರಣಗಳು ಸ್ವೀಕೃತವಾಗಿದ್ದು, ಅದರಲ್ಲಿ ೨ ಪ್ರಕರಣಗಳನ್ನು ತಡೆಗಟ್ಟಲಾಗಿದೆ. ೯ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ೨೦೨೫-೨೬ (ಏಪ್ರಿಲ್-ಮಾರ್ಚ್) ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ೩೩ ಪ್ರಕರಣಗಳು ಸ್ವೀಕೃತವಾಗಿವೆ. ಅದರಲ್ಲಿ ೬ ಪ್ರಕರಣಗಳನ್ನು ತಡೆಗಟ್ಟಲಾಗಿದ್ದು, ೧೫ ಪ್ರಕರಣಗಳು ತಪ್ಪು ಮಾಹಿತಿ ಎಂದು ಕಂಡುಬAದಿದೆ. ೧೦ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿದ್ದು, ೨ ಪ್ರಕರಣಗಳನ್ನು ರವಾನೆ ಮಾಡಲಾಗಿದೆ. ಎರಡು ವರ್ಷಗಳಲ್ಲಿ ಒಟ್ಟು ೪೪ ಬಾಲ್ಯ ವಿವಾಹ ದೂರುಗಳು ಬಂದಿದ್ದು, ೧೯ ಎಫ್‌ಐಆರ್ ದಾಖಲಾಗಿದೆ.