ವೀರಾಜಪೇಟೆ, ಸೆ. ೮: ವೀರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ಅಮ್ಮಣಿಚಂಡ ಪಿ. ಸುಬ್ರಮಣಿ ಅವರ ಅಧ್ಯಕ್ಷತೆಯಲ್ಲಿ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಸಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಅಮ್ಮಣಿಚಂಡ ಪಿ. ಸುಬ್ರಮಣಿ ಅವರು, ಸಂಘವು ೨೦೨೫-೨೬ನೇ ಸಾಲಿನಲ್ಲಿ ೭೯,೬೮ ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದ್ದು, ರೂ. ೩೦.೮೮ ಲಕ್ಷ ಲಾಭವನ್ನು ಹೊಂದಿರುತ್ತದೆ. ವರದಿ ಸಾಲಿನಲ್ಲಿ ಸಂಘದ ಲೆಕ್ಕ ಪರಿಶೋಧನೆ ನಡೆದಿದ್ದು ಸಂಘವು ‘ಬಿ’ ವರ್ಗೀಕರಣವನ್ನು ಪಡೆದುಕೊಂಡಿರುತ್ತದೆ.

ಪ್ರಸ್ತುತ ಸಂಘದಲ್ಲಿ ೧೦೨೦ ಸದಸ್ಯರಿದ್ದು ೮೭.೬೯ ಲಕ್ಷ ಪಾಲು ಬಂಡವಾಳವನ್ನು ಪಡೆದಿರುತ್ತದೆ. ಒಟ್ಟು ೧೦.೮೮ ಕೋಟಿ ಠೇವಣಿಯನ್ನು ಸಂಗ್ರಹ ಮಾಡಿದ್ದು, ಸದಸ್ಯರಿಗೆ ರೂ. ೭.೪೯ ಕೋಟಿ ಕೆಸಿಸಿ ಸಾಲ ವಿತರಣೆ ಮಾಡಿ ಒಟ್ಟಾರೆಯಾಗಿ ೧೫.೫೪ ಕೋಟಿ ಸಾಲವನ್ನು ವಿತರಣೆ ಮಾಡಲಾಗಿದೆ. ಕಳೆದ ಸಾಲಿನಲ್ಲಿ ವಿತರಿಸಿದ ಸಾಲದಲ್ಲಿ ಶೇ. ೯೪.೮೭ ರಷ್ಟು ಸಾಲ ವಸೂಲಿ ಮಾಡಲಾಗಿದೆ. ಸದಸ್ಯರಿಗೆ ಶೇ. ೧೫ ರಷ್ಟು ಡಿವಿಡೆಂಡ್ ಅನ್ನು ಮಂಜೂರು ಮಾಡಲಾಗಿದೆ ಎಂದು ವಿವರಣೆ ನೀಡಿದರು.

ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕುಂಡ್ರAಡ ದೇವಯ್ಯ, ನಿರ್ದೇಶಕರಾದ ಅಮ್ಮಣಿಚಂಡ ನಂಜಪ್ಪ, ಕರ್ನಂಡ ಜಯ, ಪುಟ್ಟಿಚಂಡ ನರೇಂದ್ರ, ವಾಟೇರಿರ ನಾಣಯ್ಯ, ಪುಟ್ಟಿಚಂಡ ಬೋಪಣ್ಣ, ಟಿ.ಡಿ. ವಾಸು, ಮಂಡೆಪAಡ ಸಾವಿತ್ರಿ, ಕುಪ್ಪಚ್ಚಿರ ಗ್ರೇಸಿ, ಎಂ.ಬಿ. ಭಾರತಿ, ಸಂಘದ ಮೇಲ್ವಿಚಾರಕರು ಹಾಗೂ ಕೆಡಿಸಿಸಿ ಬ್ಯಾಂಕಿನ ಸಿಬ್ಬಂದಿ ಎನ್.ಎಂ. ಹರೀಶ್ ಹಾಗೂ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಗುಡ್ಡಾಂಡ ಸಿ. ಜೋಯಪ್ಪ ಉಪಸ್ಥಿತರಿದ್ದರು.