ಮಡಿಕೇರಿ, ಸೆ. ೮: ಜಪಾನ್‌ನ ನಗೋಯದಲ್ಲಿ ಸೆ. ೧೯ ರಿಂದ ಅಕ್ಟೋಬರ್ ೪ ರತನಕ ಜರುಗಲಿರುವ ಏಷ್ಯನ್ ಗೇಮ್ಸ್ನಲ್ಲಿ ಮಹಿಳಾ ಹಾಕಿ ಪಂದ್ಯಾವಳಿಯ ಟೆಕ್ನಿಕಲ್ ಆಫೀಸರ್ ಆಗಿ ಕೊಡಗಿನವರಾದ ಪುಳ್ಳಂಗಡ ರೋಹಿಣಿ ಬೋಪಣ್ಣ (ತಾಮನೆ - ನೆಲ್ಲಮಕ್ಕಡ) ಅವರು ಪಾಲ್ಗೊಳ್ಳಲಿದ್ದಾರೆ.
ಏಷ್ಯನ್ ಹಾಕಿ ಫೆಡರೇಷನ್ (ಎ.ಹೆಚ್.ಎಫ್)ನ ಭಾರತದ ಪ್ರತಿನಿಧಿ, ಟೆಕ್ನಿಕಲ್ ಅಫಿಷಿಯಲ್ ಆಗಿ ಇವರು ಹಾಕಿ ಇಂಡಿಯಾ ಮೂಲಕ ನಿಯುಕ್ತಿಗೊಂಡಿದ್ದಾರೆ. ಈ ಬಗ್ಗೆ ಏಷ್ಯನ್ ಹಾಕಿ ಫೆಡರೇಷನ್ ಮೂಲಕ ಅಧಿಕೃತ ಆದೇಶ ಪ್ರಕಟಿಸಲಾಗಿದೆ. ಇವರು ಅಂತರರಾಷ್ಟಿçÃಯ ಹಾಕಿ ಗೋಲ್ ಕೀಪರ್ ಪುಳ್ಳಂಗಡ ಬೋಪಣ್ಣ ಅವರ ಪತ್ನಿ.
ಅರುಣ್ ಮಾಚಯ್ಯ ಭಾಗಿ
ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾಗಿರುವ ಸಿ.ಎಸ್. ಅರುಣ್ ಮಾಚಯ್ಯ ಅವರೂ ಈ ಬಾರಿಯ ಏಷ್ಯನ್ ಗೇಮ್ಸ್ ಸಂದರ್ಭ ಪಾಲ್ಗೊಳ್ಳುತ್ತಿದ್ದಾರೆ. ಜಪಾನ್‌ನ ಯಾಕೋಹಮಾದಲ್ಲಿ ಸೆ. ೨೧ ರಿಂದ ೨೭ ರತನಕ ವಿಶ್ವ ಶಿಟೊರಿಯೋ ಕರಾಟೆ ಚಾಂಪಿಯನ್‌ಶಿಪ್ ನಡೆಯುತ್ತಿದ್ದು, ಇದರಲ್ಲಿ ವಿಶ್ವ ಶಿಟೊರಿಯೋ ಕರಾಟೆ ಫೆಡರೇಷನ್‌ನ ನಿರ್ದೇಶಕರಾಗಿರುವ ಕರಾಟೆಪಟು ಅರುಣ್ ಮಾಚಯ್ಯ ಭಾಗವಹಿಸುತ್ತಿದ್ದಾರೆ. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಇದೇ ಸಂದರ್ಭ ತಾ. ೨೩ ರಿಂದ ೩೦ ರತನಕ ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳಲು ಇವರಿಗೆ ರಾಜ್ಯ ಸರಕಾರದಿಂದ ಅನುಮತಿಸಲಾಗಿದೆ. ಕ್ರೀಡಾಪಟುವಾಗಿರುವ ಉನ್ನತಿ ಅಯ್ಯಪ್ಪ ಅವರಿಗೆ ಸಹಕಾರ ನೀಡಲು ಸ್ವತಃ ಆಕೆಯ ಕೋಚ್ ಆಗಿರುವ ತಂದೆ ಬೊಳ್ಳಂಡ ಅಯ್ಯಪ್ಪ ಅವರು ಖಾಸಗಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.